ಕನ್ನಡದಲ್ಲಿ ನೋಡಬಹುದಂತೆ 'ಸೈರಾ', ಆದ್ರೂ ಇಲ್ಲೊಂದು ಅನುಮಾನ.?
Recommended Video

ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರವೊಂದನ್ನ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಇದು ಸ್ಯಾಂಡಲ್ ವುಡ್ ಅಭಿಮಾನಿಗಳಿಗೂ ಹತ್ತಿರದ ಸಿನಿಮಾನೇ.
ಹತ್ತಿರದ ಸಿನಿಮಾ ಎನ್ನುವುದಕ್ಕಿಂತ ನಮ್ಮ ಸಿನಿಮಾನೇ ಎನ್ನುವ ಸಮಯ ಬಂದಿದೆ. ಹೌದು, 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನ ತೆಲುಗಿನಲ್ಲಿ ನೋಡಬೇಕಲ್ವಾ ಎಂದು ಚಿಂತಿಸುತ್ತಿದ್ದ ಕನ್ನಡ ಪ್ರೇಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ಅದೇನಪ್ಪಾ ಅಂದ್ರೆ, ಮೆಗಾಸ್ಟಾರ್ ಮತ್ತು ಸುದೀಪ್ ಅಭಿನಯದಲ್ಲಿರುವ ಈ ಸಿನಿಮಾವನ್ನ ಕನ್ನಡದಲ್ಲೂ ನೋಡಬಹುದು. ಹೀಗಂತಾ ಸ್ವತಃ ರಾಮ್ ಚರಣ್ ತೇಜ ಅವರೇ ತಿಳಿಸಿದ್ದಾರೆ. ಮುಂದೆ ಓದಿ.....

ನಾಲ್ಕು ಭಾಷೆಯಲ್ಲಿ 'ಸೈರಾ'
'ಸೈರಾ' ಸಿನಿಮಾ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬರ್ತಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಈಗ ಬಹಿರಂಗವಾಗಿರುವ ವಿಷ್ಯವೇನಪ್ಪಾ ಅಂದ್ರೆ, ಈ ಮೂರು ಭಾಷೆಯ ಜೊತೆಗೆ ಕನ್ನಡದಲ್ಲೂ ತೆರೆಕಾಣಲಿದೆ. ಈ ವಿಷ್ಯವನ್ನ ಖುದ್ದು ನಿರ್ಮಾಪಕ ರಾಮ್ ಚರಣ್ ತೇಜ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಒಟ್ಟು ನಾಲ್ಕು ಭಾಷೆಗಳಲ್ಲಿ ಸೈರಾ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಅನುಮಾನ ಬಗೆಹರಿಸಿ
'ಸೈರಾ' ಸಿನಿಮಾ ಒಟ್ಟು ನಾಲ್ಕು ಭಾಷೆಯಲ್ಲಿ ಬರ್ತಿದೆ. ಹಾಗಿದ್ರೆ, ಈಗ ಕನ್ನಡದಲ್ಲಿ ಬಿಡುಗಡೆಯಾದ್ರೆ, ಡಬ್ಬಿಂಗ್ ಸಿನಿಮಾ ಆಗುತ್ತಾ.? ಅಥವಾ ನೇರ ಸಿನಿಮಾ ಎನಿಸಿಕೊಳ್ಳುತ್ತಾ. ಒಂದು ವೇಳೆ ಕನ್ನಡದಲ್ಲಿ ಸೈರಾ ಸಿನಿಮಾ ಬಿಡುಗಡೆ ಮಾಡಿದ್ರೆ ಪ್ರೇಕ್ಷಕರು ಮತ್ತು ಡಬ್ಬಿಂಗ್ ವಿರೋಧಿಗಳು ಒಪ್ಪಿಕೊಳ್ತಾರಾ.?

ಸುದೀಪ್ ಒಬ್ಬರೇ ಕನ್ನಡದವರು
ಅಂದ್ಹಾಗೆ, ಈ ಚಿತ್ರದಲ್ಲಿ ಸುದೀಪ್ ಒಬ್ಬರೇ ಕನ್ನಡದವರು. ಇನ್ನುಳಿದಂತೆ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ಕಲಾವಿದರು ಪೂರ್ತಿ ತೆಲುಗುದವರೇ. ಇದರ ಅರ್ಥ ಇದು ಪಕ್ಕಾ ತೆಲುಗು ಸಿನಿಮಾ. ಚಿರಂಜೀವಿ ನಾಯಕ, ಜಗಪತಿ ಬಾಬು, ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರ, ತಮನ್ನಾ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ 'ಸೈರಾ' ಯಾವ ಭಾಷೆಯಲ್ಲಿ ತೆರೆಕಾಣುತ್ತೆ.?
ಒಂದು ವೇಳೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ 'ಸೈರಾ' ಸಿನಿಮಾ ಬಿಡುಗಡೆಯಾಗುವುದಾದರೇ, ತೆಲುಗು ಭಾಷೆಯಲ್ಲಿ ಸೈರಾ ರಿಲೀಸ್ ಆಗಲ್ವಾ.? ಬರಿ, ಕನ್ನಡದಲ್ಲೇ ಆದ್ರೆ, ಆಗ ಕನ್ನಡ ಭಾಷೆಯಲ್ಲೇ ಸೈರಾ ಸಿನಿಮಾ ನೋಡುವಂತಾಗುತ್ತೆ. ಅಂದಾಜು ತೆಲುಗು ಆಡಿಯೆನ್ಸ್ ಬೆಂಗಳೂರಿನಲ್ಲಿ ಹೆಚ್ಚಾಗಿದ್ದಾರೆ. ಅವರೆಲ್ಲರೂ ಕನ್ನಡದಲ್ಲಿ ಸೈರಾ ನೋಡ್ತಾರಾ.? ಇಷ್ಟೆಲ್ಲಾ ಪ್ರಶ್ನೆಗಳಾಗಯೇ ಉಳಿದುಕೊಂಡಿದೆ. ಉತ್ತರ ಕಾದು ನೋಡಬೇಕಿದೆ ಅಷ್ಟೇ.


Click it and Unblock the Notifications










