'ಸೈರಾ' ಸಂಭ್ರಮ : ನಾಳೆ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ

'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಾಳೆ (ಸಪ್ಟೆಂಬರ್ 29) ಬೆಂಗಳೂರಿನಲ್ಲಿ ನಡೆಯಲಿದೆ. ಬಿಡುಗಡೆಗೆ ಮುಂಚೆ ಸಿನಿಮಾದ ಅದ್ದೂರಿ ಕಾರ್ಯಕ್ರಮ ಐಟಿ ಸಿಟಿಯಲ್ಲಿ ಜರುಗುತ್ತಿದೆ.

ನಾಳೆ ಸಂಜೆ 6 ಗಂಟೆಗೆ ನಾಗವಾರದ MANPHO ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ. ನಟ ಕಿಚ್ಚ ಸುದೀಪ್, ಮೆಗಾ ಸ್ಟಾರ್ ಚಿರಂಜೀವಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಲಿದ್ದಾರೆ. ಇವರ ಜೊತೆಗೆ ಚಿತ್ರದ ಇತರ ತಾರಬಳಗ ಕೂಡ ಹಾಜರಾಗಲಿದೆ.

ಸುದೀಪ್ ಬಹಳ ವರ್ಷಗಳ ನಂತರ ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಸಿನಿಮಾ ಕ್ರೇಜ್ ಬೆಂಗಳೂರಿನಲ್ಲಿಯೂ ಜೋರಾಗಿದೆ. ಸಿನಿಮಾದ ಟ್ರೇಲರ್ ದೊಡ್ಡ ಹಿಟ್ ಆಗಿದೆ. ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತದೆ. ಈ ಕಾರಣ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಗುತ್ತಿದೆ.

Sye Raa Narasimha Reddy Pre Release Event Will Be Held In Bengaluru

ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ, ತಮನ್ನಾ ಭಾಟಿಯಾ, ನಯನತಾರ, ಜಗಪತಿ ಬಾಬು ಸಿನಿಮಾದಲ್ಲಿ ನಟಿಸಿದ್ದಾರೆ. ಸುರೇಂದ್ರ ರೆಡ್ಡಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

'ಸೈರಾ ನರಸಿಂಹ ರೆಡ್ಡಿ' ಚಿರಂಜೀವಿ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಆಗಿದ್ದು, ರಾಮ್ ಚರಣ್ ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 2 ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ.

More from Filmibeat

English summary
Sye Raa Narasimha Reddy pre release event will be held on Tomorrow (september 29th) Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X