For Quick Alerts
  ALLOW NOTIFICATIONS  
  For Daily Alerts

  ಸೌತ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸಿದ ಸೈರಾ ನರಸಿಂಹ ರೆಡ್ಡಿ

  |

  ಅಕ್ಟೋಬರ್ 2 ರಂದು ತೆರೆಕಂಡಿದ್ದ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸಖತ್ ಬಿಸಿನೆಸ್ ಮಾಡ್ತಿದೆ. ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಮತ್ತು ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಸೈರಾ ನರಸಿಂಹ ರೆಡ್ಡಿ ಸಿನಿಮಾಗಳು ಗಾಂಧಿ ಜಯಂತಿ ಮತ್ತು ವೀಕೆಂಡ್ ನಲ್ಲಿ ಧಮಾಕಾ ಮಾಡ್ತಿದೆ.

  'ವಾರ್' ಸಿನಿಮಾ ಮೊದಲ ದಿನ 53.5 ಕೋಟಿ ಗಳಿಸಿತ್ತು. ಎರಡನೇ ದಿನ 23.5 ಕೋಟಿ ಗಳಿಸಿದೆ. ಎರಡು ದಿನಕ್ಕೆ 77 ಕೋಟಿ ಗಳಿಸಿ ಯಶಸ್ವಿ ಪ್ರದರ್ಶನ ಕಾಣ್ತಿದೆ.

  ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'

  ಸೈರಾ ಸಿನಿಮಾ ಮೊದಲ ದಿನ ವರ್ಲ್ಡ್ ವೈಡ್ 85 ರಿಂದ 92 ಕೋಟಿ ಗಳಿಸಿತ್ತು ಎಂದು ಅಂದಾಜಿಸಲಾಗಿದೆ. ಎರಡನೇ ದಿನವೂ ಸೈರಾ ಅಬ್ಬರಿಸಿದ್ದು, ಸೌತ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ. ಹಾಗಿದ್ರೆ, ಸೈರಾ ಚಿತ್ರದ ಮೂರು ದಿನಗಳ ಕಲೆಕ್ಷನ್ ಎಷ್ಟು? ಮುಂದೆ ಓದಿ....

  ಎರಡು ದಿನದಲ್ಲಿ ನೂರು ಕೋಟಿ

  ಎರಡು ದಿನದಲ್ಲಿ ನೂರು ಕೋಟಿ

  ಮೊದಲ ದಿನ 85 ರಿಂದ 92 ಕೋಟಿ ಬಾಚಿಕೊಂಡಿದ್ದ ಸೈರಾ ಸಿನಿಮಾ ಎರಡನೇ ದಿನ ನೂರು ಕೋಟಿ ಗಳಿಸಿದೆ. ಈ ಮೂಲಕ ಚಿರಂಜೀವಿ ಸಿನಿಮಾ ಮೊದಲ ಬಾರಿಗೆ ನೂರು ಕೋಟಿ ಕ್ಲಬ್ ಸೇರಿದೆ. ಚಿತ್ರ ವಿಶ್ಲೇಷಕ ರಮೇಶ್ ಬಾಲ ಇದನ್ನ ಅಧಿಕೃತವಾಗಿ ತಿಳಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

  ತೆಲುಗು ರಾಜ್ಯದಲ್ಲಿ 50 ಕೋಟಿ

  ತೆಲುಗು ರಾಜ್ಯದಲ್ಲಿ 50 ಕೋಟಿ

  ಸೈರಾ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೇ ಮೂರು ದಿನಕ್ಕೆ 55 ಕೋಟಿಗೂ ಅಧಿಕ ಹಣ ಗಳಿಸಿದೆಯಂತೆ. ಉಳಿದಂತೆ ತಮಿಳುನಾಡು, ಕರ್ನಾಟಕ, ಮುಂಬೈ ಹಾಗೂ ದೇಶಾದ್ಯಂತ ಕೂಡ ಒಳ್ಳೆಯ ಬಿಸಿನೆಸ್ ಮಾಡಿದೆ.

  ತಮನ್ನಾಗೆ ರಾಮ್ ಚರಣ್ ಪತ್ನಿ ಕೊಟ್ಟಿದ್ದು ವಜ್ರದ ಉಂಗುರನಾ?ತಮನ್ನಾಗೆ ರಾಮ್ ಚರಣ್ ಪತ್ನಿ ಕೊಟ್ಟಿದ್ದು ವಜ್ರದ ಉಂಗುರನಾ?

  ಮೂರನೇ ದಿನ 20 ಕೋಟಿ.!

  ಮೂರನೇ ದಿನ 20 ಕೋಟಿ.!

  ಮೊದಲ ಎರಡು ದಿನದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಸೈರಾ ಸಿನಿಮಾ ಮೂರನೇ ದಿನವೂ ಗೆಲುವಿನ ನಾಗಲೋಟ ಮುಂದುವರಿಸಿದೆ. ಭಾರತದಲ್ಲಿ ಸೈರಾ ಸಿನಿಮಾ ಮೂರನೇ ದಿನ 20 ಕೋಟಿ ಗಳಿಕೆ ಕಂಡಿದೆಯಂತೆ. ಹಾಗ್ನೋಡಿದ್ರೆ, ಮೂರು ದಿನದಲ್ಲಿ ಒಟ್ಟಾರೆ ಕಲೆಕ್ಷನ್ 133 ಕೋಟಿ ದಾಟಿದ್ದು, ನೆಟ್ ಕಲೆಕ್ಷನ್ 97 ಕೋಟಿ ಎಂದು ಹೇಳಲಾಗುತ್ತಿದೆ.

  ಚಿರು ವೃತ್ತಿ ಜೀವನದಲ್ಲಿ ದಿ ಬೆಸ್ಟ್?

  ಚಿರು ವೃತ್ತಿ ಜೀವನದಲ್ಲಿ ದಿ ಬೆಸ್ಟ್?

  ಚಿರಂಜೀವಿ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪೈಕಿ ಸೈರಾ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಭಾರತ ಹಾಗೂ ತೆಲುಗು ಸಿನಿಮಾ ಲೋಕದಲ್ಲಿ ಹಲವು ದಾಖಲೆ ಬರೆದಿರುವ ಸೈರಾ, ಕಲೆಕ್ಷನ್ ನಲ್ಲಿ ದೊಡ್ಡ ಚಿತ್ರಗಳ ದಾಖಲೆಯನ್ನ ಹಿಂದಿಕ್ಕುವ ಸೂಚನೆ ನೀಡಿದೆ.

  ಅದ್ಧೂರಿ ಪಾರ್ಟಿ ಮಾಡಿದ ಮೆಗಾ ಹೀರೋಸ್

  ಅದ್ಧೂರಿ ಪಾರ್ಟಿ ಮಾಡಿದ ಮೆಗಾ ಹೀರೋಸ್

  ಸೈರಾ ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆ ಮೆಗಾಸ್ಟಾರ್ ಕುಟುಂಬದ ಹೀರೋಗಳು ಅದ್ಧೂರಿ ಪಾರ್ಟಿ ಆಯೋಜನೆ ಮಾಡಿದ್ದರು. ಚಿರಂಜೀವಿ, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ಅಲ್ಲು ಸಿರೀಶ್, ಸಾಯಿ ಧರಮ್ ತೇಜ, ವರುಣ್ ತೇಜ, ಅಖಿಲ್ ಅಕ್ಕಿನೇನಿ, ಶ್ರೀಕಾಂತ್ ಭಾಗವಹಿಸಿದ್ದರು.

  English summary
  Telugu actor Chiranjeevi starrer Sye Raa Narasimha Reddy crossed 100 crores in world wide box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X