Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಚಿರಂಜೀವಿಯ 'ಸೈರಾ' ಸಿನಿಮಾ ಬರೋದು ಖಚಿತ
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಡ ಎಂದು ಪ್ರತಿಭಟನೆ, ಹೋರಾಟ ಮಾಡುವ ಒಂದು ವರ್ಗ. ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬರಲಿ ಎಂದು ಹೋರಾಟ, ಪ್ರತಿಭಟನೆ ಮಾಡುವ ಇನ್ನೊಂದು ವರ್ಗ. ಹೀಗೆ, ಪರ-ವಿರೋಧದ ನಡುವೆಯೇ ಹಲವು ಡಬ್ಬಿಂಗ್ ಸಿನಿಮಾಗಳು ಬಂದಿದೆ, ಬರ್ತಿದೆ.
ಈಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸರದಿ. ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ಕನ್ನಡದಲ್ಲಿ ಬರುತ್ತೋ ಇಲ್ವೋ ಎಂಬ ಗೊಂದಲ ಇತ್ತು.
ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು
ಆದ್ರೀಗ, ಸೈರಾ ಕನ್ನಡದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ. ಕನ್ನಡದಲ್ಲೂ ಡಬ್ ಆಗಿ ತೆರೆಕಾಣಲಿದೆ. ಈಗಾಗಲೇ ಕನ್ನಡದ ಟಿವಿ ಹಕ್ಕು ಕೂಡ ಖ್ಯಾತ ವಾಹಿನಿಯೊಂದು ಖರೀದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕನ್ನಡದಲ್ಲಿ ನೋಡಬಹುದಂತೆ 'ಸೈರಾ', ಆದ್ರೂ ಇಲ್ಲೊಂದು ಅನುಮಾನ.?
ಇದೇ ತಿಂಗಳು 20 ರಂದು ಸೈರಾ ಟ್ರೈಲರ್ ಬಿಡುಗಡೆಯಾಗ್ತಿದ್ದು, ಆ ದಿನ ಈ ಎಲ್ಲ ಗೊಂದಲಗಳಿಗೂ ಸ್ಪಷ್ಟ ಉತ್ತರ ಸಿಗಲಿದೆ. ಇನ್ನುಳಿದಂತೆ ರಾಮ್ ಚರಣ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಈ ಚಿತ್ರದಲ್ಲಿದೆ.
ಕೊನೆಯದಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ 'ಡಿಯರ್ ಕಾಮ್ರೇಡ್' ಸಿನಿಮಾ ಕನ್ನಡದಲ್ಲಿ ಡಬ್ ಆಗಿ ತೆರೆಕಂಡಿತ್ತು. ಏಕಕಾಲದಲ್ಲಿ ನಾಲ್ಕು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.