ದಾಖಲೆ ಬೆಲೆಗೆ 'ಸೈರಾ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಮಾರಾಟ

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಬರಲು ಸಜ್ಜಾಗಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಈಗ ಭರ್ಜರಿ ಪ್ರೀ-ಕಲೆಕ್ಷನ್ ಮಾಡಿದೆ.

ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸೈರಾ ಸಿನಿಮಾ ರಿಲೀಸ್ ಗೆ ಮುನ್ನವೇ ದೊಡ್ಡ ಮೊತ್ತದ ಗಳಿಕೆ ಕಂಡಿದೆ. ಹೌದು, ಈಗಾಗಲೇ ಎಲ್ಲ ರಾಜ್ಯಗಳ ವಿತರಣೆ ಹಕ್ಕು ಸೋಲ್ಡ್ ಔಟ್ ಆಗಿದೆ.

ಐದು ಭಾಷೆಗಳ ಸೈರಾ ಚಿತ್ರವನ್ನ ಅಮೇಜಾನ್ ಪ್ರೈಮ್ ಅವರು ಸುಮಾರು 40 ಕೋಟಿ ವೆಚ್ಚಕ್ಕೆ ಡಿಜಿಟಲ್ ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ, ಸ್ಯಾಟ್ ಲೈಟ್ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವ ಮಾಹಿತಿ ಹೊರಬಿದ್ದಿದೆ.

Sye Raa Narasimha Reddy Satellite Rights Bagged By Z Tv

ಸುಮಾರು 125 ಕೋಟಿ ನೀಡಿ ಜೀ ಟಿವಿ ಅವರು ಸ್ಯಾಟ್ ಲೈಟ್ ಹಾಗೂ ಡಿಜಿಟಲ್ ಹಕ್ಕು ಖರೀದಿಸಿದ್ದಾರಂತೆ. ದಕ್ಷಿಣ ಭಾರತದಲ್ಲೇ ಇದು ದಾಖಲೆ ಎನ್ನಲಾಗಿದೆ. ಈವರೆಗೂ ಯಾವ ಚಿತ್ರಕ್ಕೂ ಇಷ್ಟು ದೊಡ್ಡ ಮೊತ್ತ ಕೊಟ್ಟಿಲ್ಲ.

ಚಿರಂಜೀವಿ ಅಭಿನಯದ ಸೈರಾ ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ಜಗಪತಿ ಬಾಬು, ನಯನತಾರ, ಅಮಿತಾಭ್ ಬಚ್ಚನ್ ಸೇರಿದಂತೆ ದೊಡ್ಡ ತಾರಬಳಗ ನಟಿಸಿದೆ.

More from Filmibeat

English summary
Megastar Chiranjeevi starrer Sye Raa Narasimha Reddy Movie Satellite and digital Rights have been sold for for 125 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X