ಸೈರಾ ಸಿನಿಮಾ ಕನ್ನಡದಲ್ಲಿ ಬಂದ್ರು ಖುಷಿಗಿಂತ ನಿರಾಸೆಯೇ ಹೆಚ್ಚು

Recommended Video

ಸೈರಾ ಸಿನಿಮಾ ಕನ್ನಡದಲ್ಲಿ ಬಂದ್ರು ಖುಷಿಗಿಂತ ನಿರಾಸೆಯೇ ಹೆಚ್ಚು | FILMIBEAT KANNADA

ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ಸೈರಾ ರಿಲೀಸ್ ಆಗುತ್ತಿದೆ.

ಕನ್ನಡದಲ್ಲಿ ಸೈರಾ ಸಿನಿಮಾ ಬರಲಿದೆ ಎನ್ನುವುದು ಖುಷಿಯ ವಿಚಾರ. ಆದರೆ, ಸಿನಿಮಾ ಬಿಡುಗಡೆ ಆದ್ಮೇಲೆ ಹೆಚ್ಚು ಚಿತ್ರಮಂದಿರದಲ್ಲಿ ಕನ್ನಡ ಭಾಷೆಯಲ್ಲಿ ಸಿನಿಮಾ ನೋಡಲು ಸಿಗಲ್ಲ ಎನ್ನುವುದು ಬೇಸರದ ಸಂಗತಿ.

ಕನ್ನಡದಲ್ಲಿ ಪರಭಾಷೆ ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಏನು ಎನ್ನುವುದರ ಬಗ್ಗೆ ಭಾರಿ ಗೊಂದಲ ಉಂಟಾಗಿದೆ. ಇದೀಗ, ಕನ್ನಡ ಪರ ಅಭಿಮಾನಿಗಳು ಸೈರಾ ಚಿತ್ರಕ್ಕೆ ಹೆಚ್ಚು ಚಿತ್ರಮಂದಿರಗಳ ಕೊಡಿ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಆದರೂ ಈ ಅಭಿಯಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗುತ್ತೆ. ಮುಂದೆ ಓದಿ...

ಕನ್ನಡ ವರ್ಷನ್ ಗೆ ಚಿತ್ರಮಂದಿರ ಕಡಿಮೆ ಯಾಕೆ?

ಕನ್ನಡ ವರ್ಷನ್ ಗೆ ಚಿತ್ರಮಂದಿರ ಕಡಿಮೆ ಯಾಕೆ?

ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಮಾಡಬಾರದು ಎಂದು ವಿರೋಧಿಸುತ್ತಿದ್ದ ಸಮಯದಲ್ಲಿ ಕೆಲವು ಚಿತ್ರಗಳು ಕನ್ನಡಕ್ಕೆ ಡಬ್ ಆದವು. ಆಗಲೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರಲಿಲ್ಲ. ಈಗ ಮುಕ್ತವಾಗಿ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಬರ್ತಿದೆ. ಈಗಲೂ ಕನ್ನಡ ವರ್ಷನ್ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಹಾಗಾದ್ರೆ ಕನ್ನಡದಲ್ಲಿ ರಿಲೀಸ್ ಮಾಡಿ, ಕನ್ನಡಕ್ಕೆ ಡಬ್ ಆಗಲಿ ಎಂದು ಕೇಳುವುದರ ಉದ್ದೇಶ ಏನು?

ಕನ್ನಡಕ್ಕೆ ಹೆಚ್ಚು ಚಿತ್ರಮಂದಿರ ಕೊಡಿ

ಕನ್ನಡಕ್ಕೆ ಹೆಚ್ಚು ಚಿತ್ರಮಂದಿರ ಕೊಡಿ

ಈಗ ಚಿರಂಜೀವಿ ನಟನೆಯ ಸೈರಾ ಸಿನಿಮಾ ವಿಚಾರದಲ್ಲೂ ಅದೇ ಆಗುವ ಸೂಚನೆ ಸಿಕ್ಕಿದೆ. ಈಗಾಗಲೇ ಬೆಂಗಳೂರಿನಲ್ಲಿ ಬುಕ್ಕಿಂಗ್ ಓಪನ್ ಆಗಿದೆ. ಹತ್ತಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆಲುಗು ಭಾಷೆಯಲ್ಲಿ ಟಿಕೆಟ್ ಬುಕ್ಕಿಂಗ್ ಅವಕಾಶ ಮಾಡಿಕೊಡಲಾಗಿದೆ. ಆದರೆ, ಕನ್ನಡ ಭಾಷೆಯಲ್ಲಿ ಒಂದೇ ಒಂದು ಚಿತ್ರಮಂದಿರದಲ್ಲಿ ಇದುವರೆಗೂ ಸೈರಾ ಕಾಣುತ್ತಿಲ್ಲ. ಹೀಗಾದ್ರೆ, ಕನ್ನಡದಲ್ಲಿ ಸೈರಾ ಬರಲಿ ಎಂದವರು ಸಾಧಿಸಿದ್ದೇನು?

ಟ್ವಿಟ್ಟರ್ ಅಭಿಯಾನ

ಟ್ವಿಟ್ಟರ್ ಅಭಿಯಾನ

ಈ ಬಗ್ಗೆ ಸೆಪ್ಟೆಂಬರ್ 25 ರಂದು ಸಂಜೆ 7 ಗಂಟೆಗೆ ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡಲಾಗಿದೆ. #ಸೈರಾಕನ್ನಡಎಲ್ಲೆಡೆ ಹಾಗೂ #syeraakannadainmorescreen ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ರೆಂಡಿಂಗ್ ಮಾಡಲಾಗಿದೆ. ಸೈರಾ ಕನ್ನಡ ವರ್ಷನ್ ಚಿತ್ರವನ್ನ ಹೆಚ್ಚು ಚಿತ್ರಮಂದಿರಲ್ಲಿ ರಿಲೀಸ್ ಮಾಡಿ ಎಂದು ಮನವಿ ಮಾಡಿದ್ದಾರೆ.

ಕನ್ನಡಕ್ಕಿಂತ ತೆಲುಗಿಗೆ ಹೆಚ್ಚು ಸ್ಕ್ರೀನ್

ಕನ್ನಡಕ್ಕಿಂತ ತೆಲುಗಿಗೆ ಹೆಚ್ಚು ಸ್ಕ್ರೀನ್

ಸೈರಾ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿದರೂ, ಮೂಲ ಭಾಷೆಯಲ್ಲಿ ಸಿನಿಮಾ ನೋಡಲು ಹೆಚ್ಚು ಪ್ರೇಕ್ಷಕರು ಆಸಕ್ತಿ ತೋರುತ್ತಾರೆ. ಇದು ಬೆಂಗಳೂರು ಅಥವಾ ಕರ್ನಾಟಕದಲ್ಲೂ ಸಾಮಾನ್ಯ. ಇಲ್ಲಿ ಹೆಚ್ಚು ಸ್ಕ್ರೀನ್ ಗಳಲ್ಲಿ ಕನ್ನಡ ವರ್ಷನ್ ಬಿಡುಗಡೆ ಮಾಡಿದ್ರೆ ಆಗ ಪ್ರೇಕ್ಷಕರು ಕೂಡ ಕನ್ನಡ ಭಾಷೆಯಲ್ಲಿ ಸಿನಿಮಾ ನೋಡುವ ಆಸಕ್ತಿ ತೋರುತ್ತಾರೆ. ಅದನ್ನ ಬಿಟ್ಟು ತೆಲುಗು ಭಾಷೆಯ ಚಿತ್ರವನ್ನ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಮಾಡಿದಾಗ ಸಹಜವಾಗಿ ಆ ಚಿತ್ರಕ್ಕೆ ಪ್ರಾಮುಖ್ಯತೆ ಸಿಗುತ್ತೆ.

More from Filmibeat

English summary
Megastar Chiranjeevi starrer Syeraa Narasimha reddy movie will release in five language. but, in karnataka sye raa movie will not releasing more screens in kannada version. why like this?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X