For Quick Alerts
  ALLOW NOTIFICATIONS  
  For Daily Alerts

  ಅನಂತ್ ಸಾಹಸ ಹಾಗೂ ಸ್ನೇಹ ಗುಣವನ್ನು ನೆನೆದ ಮಾಳವಿಕಾ, ಸೀತಾರಾಂ

  |

  ಅನಂತ್ ಕುಮಾರ್ ಅವರ ನಿಧನದ ನೋವನ್ನು ಅವರ ಆಪ್ತರು ಹಂಚಿಕೊಳ್ಳುತ್ತಿದ್ದಾರೆ. ಸದ್ಯ, ನಿರ್ದೇಶಕ ಟಿ ಎನ್ ಸೀತಾರಾಂ ಹಾಗೂ ಬಿಜೆಪಿ ವಕ್ತಾರೆ ಹಾಗೂ ನಟಿ ಮಾಳವಿಕಾ ಅನಂತ್ ಕುಮಾರ್ ಅವರ ಗುಣವನ್ನು ನೆನೆದಿದ್ದಾರೆ.

  ''ಅನಂತ್ ಕುಮಾರ್ ಅತ್ಯಂತ ಸೌಜನ್ಯದ ಸಜ್ಜನಿಕೆಯ ವ್ಯಕ್ತಿ. ಸಂಗೀತ ಸಾಹಿತ್ಯದ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ಎಲ್ಲರ ಜೊತೆಗೆ ಸ್ನೇಹಿತರಾಗಿದ್ದರು. ತುರ್ತು ಪರಿಸ್ಥಿತಿ ಕಾಲದಿಂದ ನನಗೆ ಮಿತ್ರರಾಗಿದ್ದರು. ಕನ್ನಡ ನಾಡಿಗೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಅನಂತ್ ಕುಮಾರ್ ಅವರಿಗೆ ಸೀತಾರಂ ಸಂತಾಪ ಸೂಚಿಸಿದ್ದಾರೆ.

  ಜೀವದ ಗೆಳೆಯನನ್ನು ಕಳೆದುಕೊಂಡ ಶ್ರೀನಾಥ್ ನೋವಿನ ನುಡಿ ಜೀವದ ಗೆಳೆಯನನ್ನು ಕಳೆದುಕೊಂಡ ಶ್ರೀನಾಥ್ ನೋವಿನ ನುಡಿ

  ''ಇದು ನಂಬಲು ಆಸಾಧ್ಯ. ಬಿಜೆಪಿ ಕಛೇರಿಯಲ್ಲಿ ಆಗಸ್ಟ್ 23 ರಂದು ನಡೆದ ವಾಜಪೇಯಿ ಅವರ ಅಸ್ತಿಕಾಲಶಯಾತ್ರೆಯಲ್ಲಿ ಅವರು ಎಷ್ಟು ಲವಲವಿಕೆಯಿಂದ ಭಾಗಯಿಸಿದರು. ಆದಾಗಿ ಕೆಲವೇ ದಿನಗಳ ಕಳೆದಿವೆ ಅಷ್ಟೇ. ಈಗ ಇವರು ಹೊರಟು ಬಿಟ್ಟರು. ಅನಂತ್ ಜೀ ಅವರದ್ದು ಅದ್ಬುತವಾದ ರಾಜಕೀಯ ಪಯಣ.'' ಎಂದು ಮಾಳವಿಕಾ ಟ್ವೀಟ್ ಮಾಡಿದ್ದಾರೆ.

  ಅಗಲಿದ ಅನಂತ್ ಕುಮಾರ್ ರಿಗೆ ಗಣೇಶ್ ದಂಪತಿ ಅಂತಿಮ ನಮನ ಅಗಲಿದ ಅನಂತ್ ಕುಮಾರ್ ರಿಗೆ ಗಣೇಶ್ ದಂಪತಿ ಅಂತಿಮ ನಮನ

  ಅಂದಹಾಗೆ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಕಡೆಯ ಹಂತದಲ್ಲಿ ಲಂಡನ್ ಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ.

  English summary
  Kannada director T N Seetharam and BJP spokesperson Malavika Avinash tweets pays his condolance to union minister Ananth Kumar for his demise this morning.
  Monday, November 12, 2018, 14:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X