'ನಿನ್ನ ದೇಹದ ಭಾಗಗಳು ನನಗೆ ಇಷ್ಟ' ಎಂದವನಿಗೆ ತಾಪ್ಸಿ ಏನಂದ್ರು ಗೊತ್ತಾ?
ಇತ್ತೀಚಿನ ನಟಿಯರು ಸಖತ್ ಬೋಲ್ಡ್ ಆಗಿದ್ದಾರೆ. ಏನೇ ಕೇಳಿದ್ರು ನೇರವಾಗಿ ಉತ್ತರ ಕೊಡೋ ನಾಯಕಿಯರು ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾ. ಹೀರೋಯಿನ್ ಗಳು ತಮ್ಮ ಸಿನಿಮಾ ಅಥವಾ ಪರ್ಸನಲ್ ಫೋಟೋಗಳನ್ನ ಪೋಸ್ಟ್ ಮಾಡಿದಾಗ, ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡ್ತಾರೆ.
ಪಾಸಿಟೀವ್ ಕಾಮೆಂಟ್ ಬಂದಾಗ ಖುಷಿಯಿಂದ ಪ್ರತಿಕ್ರಿಯಿಸುವ ನಟಿಯರು, ಕೆಟ್ಟದಾಗಿ ಯಾರಾದರೂ ಹೇಳಿದ್ರೆ ಅದಕ್ಕೆ ತಕ್ಕಂತೆ ರಿಯಾಕ್ಟ್ ಆಗ್ತಾರೆ. ಇದೀಗ, ಅಂತಹದ್ದೇ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ನಡೆದಿದೆ. ನಟಿ ತಾಪ್ಸಿ ಪೆನ್ನುಗೆ ಕಾಮೆಂಟ್ ಮಾಡಿದ್ದ ವ್ಯಕ್ತಿಗೆ ನಟಿ ತಿರುಗೇಟು ನೀಡಿದ್ದಾರೆ.
'ನನಗೆ ನಿನ್ನ ದೇಹದ ಭಾಗಗಳು ಇಷ್ಟ' ಎಂದು ತಾಪ್ಸಿಗೆ ಟ್ವಿಟ್ಟರ್ ಮೂಲಕ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ತಾಪ್ಸಿ ತನ್ನದೇ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ. ಅಷ್ಟಕ್ಕೂ, ತಾಪ್ಸಿಗೆ ಆತ ಹಾಗೆ ಕೇಳಿದ್ದೇಕೆ? ಮುಂದೆ ಓದಿ.....

ನಿನ್ನ ದೇಹದ ಭಾಗಗಳು ಇಷ್ಟ.!
ಅಕು ಪಾಂಡೆ ಎಂಬ ಟ್ವಿಟ್ಟರ್ ಖಾತೆಯಿಂದ ತಾಪ್ಸಿಗೆ ಕಾಮೆಂಟ್ ಮಾಡಿದ್ದಾನೆ. ''ನಿನ್ನ ದೇಹದ ಭಾಗಗಳನ್ನ ನಾನು ಪ್ರೀತಿಸುತ್ತೇನೆ (I love your body parts)'' ಎಂದಿದ್ದಾನೆ. ಇದು ನಿಜಕ್ಕೂ ಶಾಕ್ ನೀಡಿದೆ. ಸಹಜವಾಗಿ ನೀವಂದ್ರೆ ಇಷ್ಟ, ನಿಮ್ಮ ಕಣ್ಣು ಇಷ್ಟ, ನಿಮ್ಮ ಮೂಗು ಇಷ್ಟ ಎಂದು ಹೇಳುವುದನ್ನ ನೋಡಿದ್ದೀವಿ. ಆದ್ರೆ, ನಿಮ್ಮ ದೇಹದ ಭಾಗಗಳು ಇಷ್ಟ ಎಂದು ಹೇಳುವ ಸಾಹಸಕ್ಕೆ ಹೋಗುವುದಿಲ್ಲ. ಆದ್ರೆ, ತಾಪ್ಸಿಗೆ ಹೇಳಿದ್ದಾನೆ.

ತಾಪ್ಸಿ ಸೂಪರ್ ಪ್ರತಿಕ್ರಿಯೆ
ಪಾಂಡೆ ಎಂಬ ವ್ಯಕ್ತಿ ಮಾಡಿದ ಕಾಮೆಂಟ್ ಗೆ ತಾಪ್ಸಿ ಪ್ರತಿಕ್ರಿಯಿಸಿದ್ದಾರೆ. ಅವರದ್ದೇ ಸ್ಟೈಲ್ ನಲ್ಲಿ ಆ ವ್ಯಕ್ತಿಗೆ ಟಾಂಗ್ ನೀಡಿದ್ದಾರೆ. '' ವಾಹ್, ಅದು ನನಗೂ ಇಷ್ಟ. ನಿನಗೆ ಯಾವ ಭಾಗ ಫೇವರೆಟ್, ನನಗೆ ಮೆದುಳು ಅಂದ್ರೆ ಇಷ್ಟ'' ಎಂದು ತಾಪ್ಸಿ ರೀ-ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನ ಕೆಟ್ಟ ನಟಿ
ತಾಪ್ಸಿ ಬಗ್ಗೆ ಇದಕ್ಕೂ ಮುಂಚೆಯೇ ಕೆಲವರು ನೆಗಿಟೀವ್ ಆಗಿ ಕಾಮೆಂಟ್ ಮಾಡಿದ್ದರು. ಆಗಲು ಸುದ್ದಿಯಾಗಿದ್ದರು. ''ತಾಪ್ಸಿ ಬಾಲಿವುಡ್ ನ ಕೆಟ್ಟ ನಟಿ. ಬಹುಶಃ ಎರಡ್ಮೂರು ಸಿನಿಮಾನೂ ಮಾಡಲ್ಲ ಅನ್ಸುತ್ತೆ. ಅದಕ್ಕೂ ಮುಂಚೆಯೇ ಬಾಲಿವುಡ್ ಬಿಟ್ಟು ಹೋಗ್ತಾರೆ'' ಎಂದು ಕಾಮೆಂಟ್ ಮಾಡಿದ್ದರು. ಆಗಲೂ ತಾಪ್ಸಿ ಇದೇ ರೀತಿ ಟಾಂಗ್ ನೀಡಿದ್ದರು.

'ಕೆಟ್ಟ ನಟಿ' ಎಂದಾಗ ತಾಪ್ಸಿ ಏನಂದಿದ್ದರು
'ಎರಡ್ಮೂರು ಸಿನಿಮಾನೂ ಮಾಡಲ್ಲ' ಎಂದಿದ್ದವನಿಗೆ ಟಾಂಗ್ ನೀಡಿದ್ದ ತಾಪ್ಸಿ, ''ನನಗೆ ಆಲ್ ರೆಡಿ ಮೂರು ಸಿನಿಮಾ ಸಿಕ್ಕಿದೆ. ಇನ್ನು ಎರಡು ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ'' ಎಂದು ಹೇಳುವ ಮೂಲಕ ಆತನಿಗೆ ಮಂಗಳಾರತಿ ಎತ್ತಿದ್ದರು.

ತಾಪ್ಸಿಯ ಯಾವ ಚಿತ್ರ ರೆಡಿಯಾಗಿದೆ?
ಸದ್ಯ, ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿರುವ ತಾಪ್ಸಿ 'ತಡ್ಕಾ', 'ಬದ್ಲಾ', 'ಮಿಷನ್ ಮಂಗಲ್' ಅಂತಹ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಗೇಮ್ ಓವರ್' ಅಂತಹ ತೆಲುಗು ಸಿನಿಮಾನೂ ಮಾಡ್ತಿದ್ದಾರೆ.


Click it and Unblock the Notifications











