Toxic First Song: ನಾಡಿಯಾಳನ್ನು ಎದೆಗಪ್ಪಿಕೊಂಡು ಹೊಂಟ ರಾಯ; 'ಟಾಕ್ಸಿಕ್' ಫಸ್ಟ್ ಸಾಂಗ್ ಅಪ್‌ಡೇಟ್ ಬಂತು

ಬಿರುಗಾಳಿಯಂತೆ ಅಬ್ಬರಿಸುತ್ತಿದ್ದ ರಾಯ ಈಗ ರೊಮ್ಯಾಂಟಿಕ್ ಮೂಡ್‌ಗೆ ಜಾರುತ್ತಿದ್ದಾನೆ. 'ತಬಾಹಿ' ಎಂದು ನಾಡಿಯಾ ಜೊತೆ ಪ್ರೇಮಗೀತೆ ಹಾಡಲು ಮುಂದಾಗಿದ್ದಾರೆ. 'ಟಾಕ್ಸಿಕ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಬಗ್ಗೆ ಅಪ್‌ಡೇಟ್ ಬಂದಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಎನ್ನುವುದು ಗೊತ್ತಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಚಿತ್ರದಲ್ಲಿ ಕಿಯಾರಾ ಅದ್ವಾನಿ ನಟಿಸುತ್ತಿದ್ದಾರೆ. ಇದೀಗ ನಾಡಿಯಾಳನ್ನು ರಾಯ ಎದೆಗಪ್ಪಿಕೊಂಡು ಹೋಗುತ್ತಿರುವಂತಹ ಪೋಸ್ಟರ್ ರಿಲೀಸ್ ಮಾಡಿ 'ತಬಾಹಿ' ಸಾಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಮಾರ್ಚ್ 2 ಅಂದರೆ ಸೋಮವಾರ ಈ ಮೆಲೋಡಿ ಸಾಂಗ್ ರಿಲೀಸ್ ಆಗಲಿದೆ. ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ಸೇರಿ 5 ಮಂದಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

Tabaahi Song Update Yash Kiara Advani s Romantic Track Toxic to Release on March 2

"ಟಾಕ್ಸಿಕ್' ಜಗತ್ತು, ಸುರಕ್ಷಿತ ಅಪ್ಪುಗೆ" ಎಂದು ಬರೆದು ಸಾಂಗ್ ರಿಲೀಸ್ ಅಪ್‌ಡೇಟ್ ಬಗ್ಗೆ ಕಿಯಾರಾ ಅಡ್ವಾನಿ ಪೋಸ್ಟ್ ಮಾಡಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ದೊಡ್ಡಮಟ್ಟದಲ್ಲಿ ಪ್ರಮೋಷನ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಒಟ್ಟು 6 ಹಾಡುಗಳು ಇರಲಿದೆ. ಅದರಲ್ಲಿ ವಿಶಾಲ್ ಮಿಶ್ರಾ 4 ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಒಂದು ಸಾಂಗ್ ಜೊತೆ ಬಿಜಿಎಂ ಜವಾಬ್ದಾರಿ ರವಿ ಬಸ್ರೂರು ಹೆಗಲೇರಿದೆ. ತನಿಷ್ಕ್ ಬಾಗ್ಜಿ ತಂಡ ಮತ್ತೊಂದು ಹಾಡಿಗೆ ಮ್ಯೂಸಿಕ್ ಮಾಡಿದ್ದಾರೆ.

'ಟಾಕ್ಸಿಕ್' ಸಿನಿಮಾ ಪ್ರಮೋಷನ್ ಬಗ್ಗೆ ಅಭಿಮಾನಿಗಳಿಗೆ ಸಮಾಧಾನವಿಲ್ಲ. ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಇನ್ನು ದೊಡ್ಡಮಟ್ಟದಲ್ಲಿ ಪ್ರಮೋಷನ್ ಬೇಕಿತ್ತು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ 20 ದಿನ ಬಾಕಿ ಇರುವಾಗ ಫಸ್ಟ್ ಸಾಂಗ್ ಅಪ್‌ಡೇಟ್ ಬಂದಿದೆ. ಇನ್ನು 5 ಸಾಂಗ್ಸ್, ಟ್ರೈಲರ್ ರಿಲೀಸ್ ಯಾವಾಗ? ಎಂದು ಪ್ರೀತಿಯಿಂದಲೇ ಗದರುತ್ತಿದ್ದಾರೆ. ಫಸ್ಟ್ ಕಾಪಿ ರೆಡಿ ಆಗುವವರೆಗೂ ಮಾತನಾಡದಿರಲು ಚಿತ್ರತಂಡ ನಿರ್ಧರಿಸಿದಂತೆ ಕಾಣುತ್ತಿದೆ. ಸಿನಿಮಾ ಕ್ರೇಜ್ ನೋಡುತ್ತಿದ್ದರೆ ಭಾರೀ ಪ್ರಮೋಷನ್ ಬೇಕಿಲ್ಲ ಎನಿಸುತ್ತಿದೆ.

ಇನ್ನು ರಾಕಿಂಗ್ ಸ್ಟಾರ್ ಶರ್ಟ್‌ಲೆಸ್ ಅವತಾರ ಸಖತ್ ವೈರಲ್ ಆಗ್ತಿದೆ. ಈ ಹಿಂದೆ ಶೂಟಿಂಗ್ ಸೆಟ್‌ನಿಂದ ಯಶ್ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸುತ್ತಾ ಮನೆ ಬಾಲ್ಕನಿಗೆ ಬಂದು ಸಿಗರೇಟ್ ಸೇದು ಸಣ್ಣ ವಿಡಿಯೋ ವೈರಲ್ ಆಗಿತ್ತು. ಅದು ನಿಜಾನಾ? ಎಐ ವೀಡಿಯೋನಾ ಎನ್ನುವ ಅನುಮಾನ ಕೆಲವರಿಗಿತ್ತು. 'ತಬಾಹಿ' ಸಾಂಗ್ ಪೋಸ್ಟರ್ ನೋಡುತ್ತಿದ್ದರೆ ಯಶ್ ಆ ರೀತಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಕಾಣಿಸಿಕೊಂಡಿರುವುದು ಖಚಿತವಾಗುತ್ತಿದೆ.

ಒಟ್ನಲ್ಲಿ ಈವರೆಗೆ 'ಟಾಕ್ಸಿಕ್' ಸಿನಿಮಾ ಟೀಸರ್‌ಗಳಲ್ಲಿ ನೋಡಿರುವುದು ಏನೇನು ಅಲ್ಲ. ಇನ್ನು ಸಾಕಷ್ಟು ಸರ್‌ಪ್ರೈಸ್‌ಗಳು ತೆರೆಮೇಲೆ ಕಾಯುತ್ತಿದೆ ಎನ್ನುವುದು ಅರ್ಥವಾಗ್ತಿದೆ.

ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕಿ ಜೊತೆ ಸೇರಿ ರಾಕಿಂಗ್ ಸ್ಟಾರ್ ಚಿತ್ರಕಥೆ ತಿದ್ದಿ ತೀಡಿದ್ದಾರೆ. ಈಗಾಗಲೇ ಉತ್ತರ ಭಾರತ, ಆಂಧ್ರ-ತೆಲಂಗಾಣ, ಓವರ್‌ಸೀಸ್, ತಮಿಳುನಾಡು, ಕೇರಳ ಸೇರಿ ಬಹುತೇಕ ಎಲ್ಲಾ ಭಾಗಗಳ ವಿತರಣೆ ಹಕ್ಕು ಮಾರಾಟವಾಗಿದೆ. ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆಯೇ ಸಿನಿಮಾ ಬಿಡುಗಡೆ ಮಾಡಲಿದೆ. ವಿದೇಶಗಳಲ್ಲಿ ಚಿತ್ರದ ಇಂಗ್ಲೀಷ್ ವರ್ಷನ್ ಯಾವ ಸಂಸ್ಥೆ ವಿತರಣೆ ಹಕ್ಕು ಕೊಂಡುಕೊಂಡಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಶೀಘ್ರದಲ್ಲೇ 'ಟಾಕ್ಸಿಕ್' ಸಿನಿಮಾ ಸೆನ್ಸಾರ್ ಕೆಲಸಗಳು ನಡೆಯಲಿದೆ. ಅಷ್ಟರಲ್ಲಿ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಬೇಕಿದೆ. ಮಾರ್ಚ್ 19ಕ್ಕೆ 'ಧುರಂಧರ್'-2 ಎದುರು ರಾಯ ಹಾಗೂ ಟಿಕೆಟ್ ಆರ್ಭಟ ನಡೆಯಲಿದೆ.

More from Filmibeat

Read more about: yash toxic kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X