ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ 'ಟಗರು' ನಟ.!

By Harshitha

Recommended Video

ಕಂಬಿ ಎಣಿಸಲು ಹೋದ ಟಗರು ನಟ..!! | Filmibeat Kannada

''ನಾನ್ಯಾರು ಗೊತ್ತಾ.? ನನ್ನ ತಾತ ಯಾರು ಗೊತ್ತಾ.? ಪೊಲೀಸ್ ಕಮಿಷನರ್ ನನಗೆ ತುಂಬಾ ಕ್ಲೋಸ್.! ಶಿವಣ್ಣ ನನಗೆ ಸ್ವಂತ ಅಣ್ಣ ಇದ್ಹಾಗೆ.!'' - ಹೀಗಂತ ಬಿಟ್ಟಿ ಬಿಲ್ಡಪ್ ಕೊಟ್ಟುಕೊಂಡು ಅದೆಷ್ಟೋ ಜನಸಾಮಾನ್ಯರಿಗೆ ಯಾಮಾರಿಸಿರುವ ಆಸಾಮಿ ಬೇಬಿ ಕೃಷ್ಣ ಅಲಿಯಾಸ್ ವೈ.ಕೆ.ದೇವನಾಥ.!

ಅಷ್ಟಕ್ಕೂ, ಯಾರೀ ಬೇಬಿ ಕೃಷ್ಣ ಅಂದ್ಕೊಂಡ್ರಾ... ಸ್ವಲ್ಪ 'ಟಗರು' ಸಿನಿಮಾ ನೆನಪಿಸಿಕೊಳ್ಳಿ... 'ಟಗರು' ಚಿತ್ರದಲ್ಲಿ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗುವ ಪುಡಿ ರೌಡಿ ಬೇಬಿ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡಾತನೇ ವೈ.ಕೆ.ದೇವನಾಥ.

'ಟಗರು' ಚಿತ್ರದಲ್ಲಿ ತೀರಾ ಸಣ್ಣ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದ ವೈಕೆ.ದೇವನಾಥ, ಅದೇ ತನ್ನ ಜೀವಮಾನದ ದೊಡ್ಡ ಸಾಧನೆ ಎನ್ನುವಂತೆ ಬಿಂಬಿಸಿಕೊಂಡು ಉದ್ಯಮಿಯೊಬ್ಬರಿಗೆ ಚಳ್ಳೆಹಣ್ಣು ತಿನಿಸಲು ಹೋಗಿ ಜೈಲು ಪಾಲಾಗಿದ್ದಾನೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ವೈಕೆ.ದೇವನಾಥನ ಕ್ಯಾತೆ ಕಥೆ

ವೈಕೆ.ದೇವನಾಥನ ಕ್ಯಾತೆ ಕಥೆ

ಉತ್ತರಹಳ್ಳಿ ಬಳಿ 30*50 ಸೈಟ್ ಖರೀದಿ ಮಾಡಲು ಮುಂದಾದ ಉದ್ಯಮಿಯೊಬ್ಬರು, ವೈಕೆ.ದೇವನಾಥ ಕೊಟ್ಟ ಬಿಲ್ಡಪ್ ಗೆ ಬೆರಗಾಗಿ ಬರೋಬ್ಬರಿ 52 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ಆತನ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿದ್ದರು. 75 ಲಕ್ಷಕ್ಕೆ ಸೈಟ್ ಖರೀದಿ ಮಾಡಲು ಮೊದಲು ಮಾತುಕತೆ ಆಗಿತ್ತು. ಆದ್ರೆ, ಯಾವಾಗ 52 ಲಕ್ಷ ರೂಪಾಯಿ ತನ್ನ ಅಕೌಂಟ್ ಗೆ ಬಿತ್ತೋ, ಆಗ 1.2 ಕೋಟಿ ಕೊಟ್ಟರೆ ಮಾತ್ರ ನೋಂದಣಿ ಮಾಡಿ ಕೊಡುವೆ ಎಂದು ವೈಕೆ.ದೇವನಾಥ ಕ್ಯಾತೆ ಶುರು ಮಾಡಿದ.

ವೈಕೆ.ದೇವನಾಥ ಬಂಧನ

ವೈಕೆ.ದೇವನಾಥ ಬಂಧನ

ವೈಕೆ.ದೇವನಾಥ ಸಹವಾಸವೇ ಬೇಡ, ಕೊಟ್ಟಿರುವ ಅಡ್ವಾನ್ಸ್ ವಾಪಸ್ ಮಾಡಿ ಅಂತ ಉದ್ಯಮಿ ಕೇಳಿಕೊಂಡರು. ಆದ್ರೆ, ಉದ್ಯಮಿಗೆ ವೈಕೆ.ದೇವನಾಥ ಬೆದರಿಕೆ ಹಾಕಿದ್ದ. ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಇದರಿಂದ ಬೇಸೆತ್ತ ಉದ್ಯಮಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆ ಕೊಟ್ಟಿದ್ದ ದೂರಿನ ಅನ್ವಯ ಜೂನ್ 19 ರಂದು ವೈಕೆ.ದೇವನಾಥನನ್ನ ಪೊಲೀಸರು ಬಂಧಿಸಿದ್ದಾರೆ.

ಉಂಡೆನಾಮ ತಿಕ್ಕಿರುವ ಭೂಪ

ಉಂಡೆನಾಮ ತಿಕ್ಕಿರುವ ಭೂಪ

ಇದೊಂದೇ ಕೇಸ್ ಅಲ್ಲ. ವೈಕೆ.ದೇವನಾಥನ ಮೇಲೆ ಇಂತಹ ಹಲವು ಕೇಸ್ ಗಳಿವೆ. ತಾನು 'ಟಗರು' ಚಿತ್ರದ ನಿರ್ಮಾಪಕ ಅಂತ ಹೇಳಿಕೊಂಡು ಎಷ್ಟೋ ಜನಕ್ಕೆ ವೈಕೆ.ದೇವನಾಥ ಮಂಕು ಬೂದಿ ಎರಚಿದ್ದಾನೆ. ಸಾಲದಕ್ಕೆ, ರಾಜಮೌಳಿ ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ 'ಶಕುನಿ' ಪಾತ್ರ ಮಾಡುತ್ತಿರುವೆ ಅಂತ ಹೇಳಿಕೊಂಡು ಅನೇಕರಿಗೆ ಉಂಡೆನಾಮ ತಿಕ್ಕಿದ್ದಾನೆ.

ಫೋಟೋ ಇಟ್ಟುಕೊಂಡು ಫೂಲ್ ಮಾಡುವ ಕೆಲಸ

ಫೋಟೋ ಇಟ್ಟುಕೊಂಡು ಫೂಲ್ ಮಾಡುವ ಕೆಲಸ

ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಜೊತೆಗೆ ಕ್ಲಿಕ್ ಮಾಡಿಕೊಂಡಿರುವ ಫೋಟೋ ಇಟ್ಟುಕೊಂಡು ತನಗೆ ರಾಜಕಾರಣಿಗಳು ಆತ್ಮೀಯರು ಅಂತ ಹಲವರ ಮುಂದೆ ಪೋಸ್ ಕೊಟ್ಟಿದ್ದಾನೆ ವೈಕೆ.ದೇವನಾಥ. ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನೂ 'ಟೋಪಿ ಹಾಕುವ ಕೆಲಸ'ಗಳಿಗೆ ವೈಕೆ.ದೇವನಾಥ ಬಳಸಿಕೊಂಡಿದ್ದಾನೆ.

ಜನರೇ... ಎಚ್ಚರವಾಗಿರಿ...

ಜನರೇ... ಎಚ್ಚರವಾಗಿರಿ...

ವೈಕೆ.ದೇವನಾಥ ತೋರಿಸಿದ ಇಂತಹ ಫೋಟೋಗಳನ್ನು ನೋಡಿ ಉದ್ಯಮಿಯೊಬ್ಬರು ಮೋಸ ಹೋಗಿದ್ದಾರೆ. ಇದೇ ರೀತಿ ಅದೆಷ್ಟು ಜನರಿಗೆ ವೈಕೆ.ದೇವನಾಥ ಮೂರು ನಾಮ ಹಾಕಿದ್ದಾನೋ ಗೊತ್ತಿಲ್ಲ. ಇನ್ಮೇಲಾದರೂ ನೀವು ಎಚ್ಚರವಾಗಿರಿ...

ಪ್ರಶಾಂತ್ ಸಂಬರ್ಗಿ ಏನಂತಾರೆ.?

ಪ್ರಶಾಂತ್ ಸಂಬರ್ಗಿ ಏನಂತಾರೆ.?

''ಕುತ್ತಿಗೆಗೆ ಚಿನ್ನದ ದಪ್ಪ ಸರ, ಕೈಗೆ ದುಬಾರಿ ವಾಚು, ಸೆಲೆಬ್ರಿಟಿಗಳು ಹಾಗೂ 'ವಿವಿಐಪಿ'ಗಳ ಜೊತೆಗೆ ಫೋಟೋ... ಇವೆಲ್ಲ ಕೆಲವರ ವಿಸಿಟಿಂಗ್ ಕಾರ್ಡ್ ಆಗ್ಬಿಟ್ಟಿದೆ. ಜನ ಇದಕ್ಕೆ ಮರಳಾಗಬಾರದು. ಯಾಕಂದ್ರೆ, ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಈಗ ಕಷ್ಟ ಅಲ್ಲ. ಫೋಟೋಶಾಪ್ ಕೂಡ ಮಾಡಬಹುದು. ಇಂತಹ ಫೋಟೋಗಳನ್ನ ಇಟ್ಟುಕೊಂಡು 'ನಾನು ಪ್ರಭಾವಿ' ಅಂತ ಹೇಳಿಕೊಂಡು ಅಮಾಯಕರನ್ನ ಮೋಸ ಮಾಡುವ ಜಾಲ ಇದೆ. ಹೀಗಾಗಿ ಜನ ಹುಷಾರಾಗಿ ಇರಬೇಕು'' ಎನ್ನುತ್ತಾರೆ ಕನ್ನಡ ಚಿತ್ರರಂಗದ ಒಡನಾಟ ಇರುವ ಉದ್ಯಮಿ ಪ್ರಶಾಂತ್ ಸಂಬರ್ಗಿ

More from Filmibeat

English summary
YK Devanatha, who had acted in Kannada Film 'Tagaru' was caught after cheating a businessman in sale of Uttarahalli Site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X