ಸೈಮಾ ಪ್ರಶಸ್ತಿಗಾಗಿ ಯಶ್ 'ಕೆಜಿಎಫ್' ಶಿವಣ್ಣನ 'ಟಗರು' ನಡುವೆ ಹಣಾಹಣಿ
Recommended Video
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್-1' ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೂರು ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ಮಾಡಿದೆ. ಚಿತ್ರದ ಮೇಕಿಂಗ್ ವಿಚಾರದಲ್ಲಿ ಪರಭಾಷೆಯವರ ಗಮನ ಸೆಳೆದಿರುವ ಕೆಜಿಎಫ್ ಸಿನಿಮಾ ಬಾಹುಬಲಿಯಂತೆ ಸದ್ದು ಮಾಡಿತ್ತು. ಈಗ ಚಾಪ್ಟರ್ 2 ಸಜ್ಜಾಗುತ್ತಿದ್ದು, ಸೀಕ್ವೆಲ್ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ.
ಕೆಜಿಎಫ್ ಚಿತ್ರ ಬರುವುದಕ್ಕೂ ಮುಂಚೆ ಬಿಡುಗಡೆಯಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಟಗರು ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹವಾ ಮಾಡಿತ್ತು. ಶಿವಣ್ಣ, ಡಾಲಿ ಧನಂಜಯ್ ಕಳ್ಳ-ಪೊಲೀಸ್ ಆಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಎರಡು ಚಿತ್ರಗಳಲ್ಲಿ ಯಾವುದು ಬೆಸ್ಟ್ ಅಂದ್ರೆ, ನಿರ್ಧರಿಸುವುದು ಕಷ್ಟ ಆಗುತ್ತೆ.
ಯಾಕಂದ್ರೆ, ಎರಡೂ ಚಿತ್ರಗಳು ತಮ್ಮದೇ ಆದ ಸ್ಟೈಲ್ ನಲ್ಲಿ ಸಿನಿರಸಿಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಈಗ ಕೆಜಿಎಫ್ ಮತ್ತು ಟಗರು ಸೈಮಾ ಪ್ರಶಸ್ತಿಗಾಗಿ ನೇರವಾಗಿ ಕಾದಾಡಲಿದೆ. ಒಟ್ಟು ಹದಿನಾಲ್ಕು ವಿಭಾಗದಲ್ಲಿ ಹನ್ನೆರಡು ವಿಭಾಗದಲ್ಲಿ ಈ ಎರಡು ಚಿತ್ರಗಳ ನಡುವೆ ಫೈಟ್ ಇದೆ. ಹಾಗಿದ್ರೆ, ಯಾವ ವಿಭಾಗದಲ್ಲಿ ಯಾವ ಚಿತ್ರಕ್ಕೆ ಪ್ರಶಸ್ತಿ ಸಿಗಬಹುದು? ಮುಂದೆ ಓದಿ.....

ಅತ್ಯುತ್ತಮ ನಟ ಯಾರು?
ಎರಡ್ಮೂರು ವರ್ಷ ಕೆಜಿಎಫ್ ಚಿತ್ರಕ್ಕಾಗಿ ಸಮಯ ಮೀಸಲಿಟ್ಟು, ಒಂದು ವಿಭಿನ್ನ ಪ್ರಯತ್ನ ಮೂಲಕ ಜನರ ಮುಂದೆ ಯಶ್ ಸೈಮಾ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಯಶ್ ಅವರ ಜೊತೆ ಟಗರು ಚಿತ್ರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಾಮಿನೇಟ್ ಆಗಿದ್ದಾರೆ. ಇವರಿಬ್ಬರ ಜೊತೆ ಅನಂತ್ ನಾಗ್ (ಸ.ಹಿ.ಪ್ರಾ.ಶಾಲೆ), ಶರಣ್ (Rambo-2), ಸತೀಶ್ ನೀನಾಸಂ (ಅಯೋಗ್ಯ) ರೇಸ್ ನಲ್ಲಿದ್ದಾರೆ.

ಅತ್ಯುತ್ತಮ ಸಿನಿಮಾ ಯಾವುದು?
ಕಳೆದ ವರ್ಷದ ಎರಡು ಯಶಸ್ವಿ ಚಿತ್ರಗಳಾದ ಕೆಜಿಎಫ್ ಚಾಪ್ಟರ್ 1 ಮತ್ತು ಟಗರು ಸಿನಿಮಾಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸೈಮಾ ಅತ್ಯುತ್ತಮ ಚಿತ್ರದ ಮೇಲೆ ಈ ಎರಡು ಚಿತ್ರಗಳು ಕಣ್ಣಿಟ್ಟಿದೆ. ಇದರ ಜೊತೆಗೆ ಅಯೋಗ್ಯ, Rambo 2, ಸ.ಹಿ.ಪ್ರಾ.ಶಾಲೆ ಕಾಸರಗೂಡು ಚಿತ್ರಗಳು ನಾಮಿನೇಟ್ ಆಗಿವೆ.

ಅತ್ಯುತ್ತಮ ನಿರ್ದೇಶಕ ಯಾರು?
ಕೆಜಿಎಫ್ ಚಾಪ್ಟರ್ 1 ನಿರ್ದೇಶನಕ್ಕಾಗಿ ಪ್ರಶಾಂತ್ ನೀಲ್ ಮತ್ತು ಟಗರು ಚಿತ್ರದ ನಿರ್ದೇಶನಕ್ಕಾಗಿ ದುನಿಯಾ ಸೂರಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ದಯಾಳ್ ಪದ್ಮನಾಭನ್ (ಆ ಕರಾಳ ರಾತ್ರಿ), ಅನಿಲ್ ಕುಮಾರ್ (Rambo 2), ರಿಷಬ್ ಶೆಟ್ಟಿ (ಸ.ಹಿ.ಪ್ರಾ.ಶಾಲೆ ಕಾಸರಗೂಡು) ಪೈಪೋಟಿ ನಡೆಸುತ್ತಿದ್ದಾರೆ.

ನಟಿ ವಿಭಾಗದಲ್ಲಿ ಕುತೂಹಲ
ಅತ್ಯುತ್ತಮ ನಟಿ ವಿಭಾಗದಲ್ಲಿ ಕೆಜಿಎಫ್ ಮತ್ತು ಟಗರು ನಡುವೆ ಫೈಟ್ ಇಲ್ಲ. ಮಾನ್ವಿತಾ ಹರೀಶ್ (ಟಗರು), ಆಶಿಕಾ ರಂಗನಾಥ್ (Rambo 2), ರಚಿತಾ ರಾಮ್ (ಅಯೋಗ್ಯ), ಶ್ರುತಿ ಹರಿಹರನ್ (ನಾತಿಚರಮಿ), ಸೋನು ಗೌಡ (ಗುಳ್ಟು) ರೇಸ್ ನಲ್ಲಿದ್ದಾರೆ.

ಕೆಜಿಎಫ್ ವರ್ಸಸ್ ಟಗರು
ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಅಚ್ಯುತ್ ಕುಮಾರ್ (ಕೆಜಿಎಫ್) ಮತ್ತು ವಸಿಷ್ಠ ಸಿಂಹ (ಟಗರು) ನಾಮಿನೇಟ್ ಆಗಿದ್ದಾರೆ. ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಅರ್ಚನಾ ಜೋಯಿಸ್ (ಕೆಜಿಎಫ್) ಮತ್ತು ಭಾವನಾ (ಟಗರು) ರೇಸ್ ನಲ್ಲಿದ್ದಾರೆ. ಅತ್ಯುತ್ತಮ ಖಳನಾಯಕ ವಿಭಾಗದಲ್ಲಿ ರಾಮಚಂದ್ರ ರಾಜು (ಕೆಜಿಎಫ್) ಮತ್ತು ಧನಂಜಯ್ (ಟಗರು), ಅತ್ಯುತ್ತಮ ಸಂಗೀತ ವಿಭಾಗದಲ್ಲಿ ರವಿಬಸ್ರೂರು (ಕೆಜಿಎಫ್) ಮತ್ತು ಚರಣ್ ರಾಜ್ (ಟಗರು) ನಾಮಿನೇಟ್ ಆಗಿದೆ.

ಅತ್ಯುತ್ತಮ ಗಾಯಕ ಯಾರು
ಅತ್ಯುತ್ತಮ ಚಿತ್ರ ಸಾಹಿತಿ ವಿಭಾಗದಲ್ಲಿ ಕೆಜಿಎಫ್ ಸಿನಿಮಾ ನಾಮಿನೇಟ್ ಆಗಿಲ್ಲ. ಟಗರು ಸಿನಿಮಾ ಸಲಾಂ ರಾಕಿ ಭಾಯ್ ಹಾಡಿಗಾಗಿ ವಿ ನಾಗೇಂದ್ರ ಪ್ರಸಾದ್ ನಾಮನಿರ್ದೇಶನವಾಗಿದ್ದಾರೆ. ಟಗರು ಟೈಟಲ್ ಹಾಡಿಗಾಗಿ ಆಥೋನಿ ದಾಸನ್ ಮತ್ತು ಸಲಾಂ ರಾಕಿ ಭಾಯ್ ಹಾಡಿಗಾಗಿ ಶ್ರೀನಿವಾಸ್ ಮೂರ್ತಿ ಎಚ್.ಎಸ್ ತಂಡ ಅತ್ಯುತ್ತಮ ಗಾಯಕ ನಾಮಿನೇಟ್ ಆಗಿದ್ದಾರೆ. ಜೋಕೆ ಹಾಡಿಗಾಗಿ ಐರಾ ಆಚಾರ್ಯ ಹಾಗೂ ಹೋಲ್ಡ್ ನ ಹಾಡಿಗಾಗಿ ಅನನ್ಯ ಭಟ್ ಗಾಯಕಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಛಾಯಾಗ್ರಹಣ ವಿಭಾಗದಲ್ಲಿ ಭುವನ್ ಗೌಡ (ಟಗರು) ಮತ್ತು ಮಹೇಂದ್ರ ಸಿಂಹ (ಟಗರು) ಕೂಡ ರೇಸ್ ನಲ್ಲಿದ್ದಾರೆ.


Click it and Unblock the Notifications











