ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಅಭಿಮಾನಿಗಳು ಕಾದು ಕುಂತಿದ್ದಾರೆ. ಈ ಮಧ್ಯೆ ಟಗರು ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡಿ ಚಿತ್ರತಂಡ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಫೆಬ್ರವರಿ 9 ರಂದು ಹ್ಯಾಟ್ರಿಕ್ ಹೀರೋ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಆ ದಿನ ಇಡಿ ಗಾಂಧಿನಗರ 'ಟಗರು' ಚಿತ್ರದ ಅಮುಲಿನಲ್ಲಿ ತೇಲಾಡುತ್ತಿರುತ್ತೆ. ಹೀಗಿರುವಾಗ, ಬಾಲಿವುಡ್ ನ ವಿವಾದಾತ್ಮಕ ಹಾಗೂ ಬಹು ನಿರೀಕ್ಷೆಯ ಚಿತ್ರ 'ಟಗರು' ಚಿತ್ರದ ಎದುರು ಬಿಡುಗಡೆಯಾಗುತ್ತಿದೆ.
ಫೆಬ್ರವರಿಗೆ ಶಿಫ್ಟ್ ಆಯ್ತು 'ಟಗರು' ಸಿನಿಮಾದ ರಿಲೀಸ್
ಹೌದು, ಸೆಂಚುರಿ ಸ್ಟಾರ್ ಸಿನಿಮಾ ಬಿಡುಗಡೆ ದಿನವೇ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರವೂ ತೆರೆಕಾಣುವ ಸಾಧ್ಯತೆ ಇದೆ. ದೇಶದಾದ್ಯಂತ 'ಪದ್ಮಾವತಿ'ಯ ಕ್ರೇಜ್ ಹೆಚ್ಚಾಗಿರುವುದರಿಂದ ಕರ್ನಾಟಕದಲ್ಲೂ ಈ ಚಿತ್ರವನ್ನ ನೋಡಲು ಹೆಚ್ಚು ಜನ ಕಾಯುತ್ತಿದ್ದಾರೆ. ಪದ್ಮಾವತಿ ಚಿತ್ರವನ್ನ ರಜಪೂತರು ವಿರೋಧಿಸಿದ್ದರು. ಈ ಚಿತ್ರದಲ್ಲಿ ಅಂತಹದ್ದೇನಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಹೆಚ್ಚಿದೆ. ಹೀಗಾಗಿ, ಮೊದಲ ದಿನವೇ ಈ ಚಿತ್ರವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಈ ಚಿತ್ರವನ್ನ ವಿರೋಧಿಸಿದ್ದರು. ಹೀಗಾಗಿ, ಬೆಂಗಳೂರಿನ ಜನ ಪದ್ಮಾವತಿಯನ್ನ ಹೇಗೆ ಸ್ವಾಗತಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.
'ಪದ್ಮಾವತಿ' ಚಿತ್ರಕ್ಕೆ ಸಿಗಲಿದೆ ಬಿಡುಗಡೆ ಭಾಗ್ಯ.?
ಸದ್ಯದ ಮಾಹಿತಿ ಪ್ರಕಾರ ಜನವರಿ 25 ಅಥವಾ 26 ರಂದು ಪದ್ಮಾವತಿಯ ಆಗಮನಕ್ಕೆ ದಿನಾಂಕ ನಿಗದಿ ಮಾಡಲಾಗುತ್ತಿದೆ. ಈ ದಿನ ಸಾಧ್ಯವಾಗಲಿಲ್ಲ ಅಂದ್ರೆ ಫೆಬ್ರವರಿ 9 ರಂದು ದೀಪಿಕಾ ಸಿನಿಮಾ ಬರುವುದು ಖಚಿತ. ಒಂದು ವೇಳೆ ಫೆಬ್ರವರಿ 9 ರಂದು ಪದ್ಮಾವತಿ ತೆರೆಕಂಡ್ರೆ, ಟಗರು ಚಿತ್ರದ ಥಿಯೇಟರ್ ಗಳ ಮೇಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿದೆ.
ಸೆನ್ಸಾರ್ ಬೋರ್ಡ್ ಪದ್ಮಾವತಿ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಒಪ್ಪಿಗೆ ಸೂಚಿಸಿದ್ದು, 26 ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಾಕೀತು ಮಾಡಿದೆ. ಅಷ್ಟೇ ಅಲ್ಲದೆ, ಚಿತ್ರದ ಟೈಟಲ್ ಬದಲಿಸುಂತೆ ಹೇಳಿದೆ. ಈ ಷರತ್ತು ಒಪ್ಪಿದ್ದಲ್ಲಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡುವುದಾಗಿ ಸೆನ್ಸಾರ್ ಮಂಡಳಿ ತಿಳಿಸಿದೆ.
ಇನ್ನೊಂದೆಡೆ ಶಿವಣ್ಣ ಅಭಿನಯದ 'ಟಗರು' ಸಿನಿಮಾ ಟೀಸರ್ ಮತ್ತು ಹಾಡುಗಳು ಮೂಲಕ ಸೌಂಡ್ ಮಾಡ್ತಿದೆ. ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ, ಭಾವನಾ ಹಾಗೂ ಮಾನ್ವಿತ ಹರೀಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.