For Quick Alerts
  ALLOW NOTIFICATIONS  
  For Daily Alerts

  ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು'

  |
  ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು' | Oneindia Kannada

  ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ಹಿಟ್ಸ್ ಪಡೆದ ಕನ್ನಡದ ಹಾಡುಗಳ ಪೈಕಿ 'ಟಗರು ಬಂತು ಟಗರು' ಹಾಡು ಸೇರಿಕೊಂಡಿದೆ. ಈ ಮೂಲಕ ಶಿವರಾಜ್ ಕುಮಾರ್ ಮೈಲಿಗಲ್ಲು ನಿರ್ಮಿಸಿದ್ದಾರೆ.

  'ಟಗರು' ಸಿನಿಮಾದ ಟೈಟಲ್ ಸಾಂಗ್ 'ಟಗರು ಬಂತು ಟಗರು' (ವಿಡಿಯೋ) 50 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಏಪ್ರಿಲ್ 23, 2018 ರಲ್ಲಿ ಈ ಹಾಡು ಪಿ ಆರ್ ಕೆ ಆಡಿಯೋ ಮೂಲಕ ಬಿಡುಗಡೆ ಆಗಿತ್ತು. ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದರು. ಗಾಯಕ ಆಂಟೋನಿ ದಾಸ್ ಈ ಹಾಡಿನ ಮೂಲಕ ಕನ್ನಡಕ್ಕೆ ಬಂದಿದ್ದರು.

  ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರುವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

  ಈ ಹಾಡಿನ ಲಿರಿಕಲ್ ಹಾಡು ಮೊದಲು ರಿಲೀಸ್ ಆಗಿದ್ದು, 42 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈಗ ವಿಡಿಯೋಗೆ ಹಾಡು 50 ಮಿಲಿಯನ್ ಹಿಟ್ಸ್ ಸಿಕ್ಕಿದೆ. ವಿಶೇಷ ಅಂದರೆ, ಪಿ ಆರ್ ಕೆ ಆಡಿಯೋದಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡು ಇದಾಗಿದೆ.

  1 ಲಕ್ಷದ 37 ಸಾವಿರಕ್ಕೂ ಅಧಿಕ ಮಂದಿ ಹಾಡನ್ನು ಯೂ ಟ್ಯೂಬ್ ಲೈಕ್ ಮಾಡಿದ್ದಾರೆ. ಆದರೆ, ಹಾಡು ಕರ್ನಾಟಕದ ತುಂಬ ಅಬ್ಬರ ನಡೆಸಿದೆ. ಎಷ್ಟೋ ಕಾರ್ಯಕ್ರಮಗಳಲ್ಲಿ ಈ ಹಾಡು ಎಲ್ಲರನ್ನು ಕುಣಿಸಿದೆ.

  'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು

  'ಚುಟು ಚುಟು..', 'ಏನಮ್ಮಿ ಏನಮ್ಮಿ..', 'ಬೊಂಬೆ ಹೇಳುತೈತೆ..', 'ಬೆಳಗೆದ್ದು..' ಈ ಹಾಡುಗಳು ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚ ವೀಕ್ಷಣೆ ಪಡೆದ ಕನ್ನಡ ಹಾಡುಗಳಾಗಿವೆ.

  English summary
  Actor Shivaraj Kumar's 'Tagaru Banthu Tagaru..' video song got 50 million views on youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X