ವರ್ಷ ಪೂರೈಸಿದ 'ಟಗರು': ಡಾಲಿ ಅಬ್ಬರ ಕಡಿಮೆ ಆಗಲೇ ಇಲ್ಲ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಟಗರು ಬಿಡುಗಡಯಾಗಿ ಇಂದಿಗೆ ಒಂದು ವರ್ಷ ಆಗಿದೆ. ಕಳೆದ ವರ್ಷ ಇಷ್ಟೋತ್ತಿಗಾಗಲೇ ಶಿವಣ್ಣ ಫ್ಯಾನ್ಸ್ ''ಟಗರು ಬಂತು ಟಗರು.....'' ಎಂದು ಸಂಭ್ರಮಿಸುತ್ತಿದ್ರು.
ಹೌದು, ಫೆಬ್ರವರಿ 23, 2018 ರಂದು ಶಿವರಾಜ್ ಕುಮಾರ್, ಧನಂಜಯ್, ಮಾನ್ವಿತಾ ಹರೀಶ್, ಭಾವನಾ, ವಸಿಷ್ಠ ಸಿಂಹ ಅಭಿನಯಿಸಿದ್ದ ಟಗರು ರಾಜ್ಯಾದ್ಯಂತ ತೆರೆಕಂಡಿತ್ತು. ದುನಿಯಾ ಸೂರಿ ಈ ಚಿತ್ರವನ್ನ ನಿರ್ದೇಶನ ಮಾಡಿ, ಕೆಪಿ ಶ್ರೀಕಾಂತ್ ನಿರ್ಮಿಸಿದ್ದರು.
ಟಗರು ಚಿತ್ರಕ್ಕೆ ಒಂದು ವರ್ಷ ಆಗಿದೆ. ಆದ್ರೆ, ಒಂದು ವರ್ಷ ಆಗಿರುವಂತೆ ಅನಿಸುತ್ತಲೇ ಇಲ್ಲ. ಕಳೆದ ವಾರನೋ ಅಥವಾ ಕಳೆದ ತಿಂಗಳು ಸಿನಿಮಾ ಬಂದಿರುವಂತೆ ಫೀಲ್ ಆಗ್ತಿದೆ.

ಈಗಲೂ ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಚ್, ಅಂಕಲ್ ಹೀಗೆ ಟಗರು ಚಿತ್ರದ ಪ್ರತಿಯೊಂದು ಪಾತ್ರಗಳು ಪಡ್ಡೆ ಹೈಕ್ಳ ಗ್ಯಾಂಗಿನಲ್ಲಿ ಸದ್ದು ಮಾಡ್ತಿದೆ. ಇನ್ನು ನಾಯಕಿ ಭಾವನಾ ಮತ್ತು ಮಾನ್ವಿತಾ ಅವರ ಹೆಸರುಗಳು ಕೂಡ (ಪಂಚಮಿ ಮತ್ತು ಪುನರ್ವಸು) ಹಲವು ಮಕ್ಕಳಿಗೆ ಹೆಸರಾಗಿದೆ.

ಇನ್ನು ಟಗರು ಹಾಡುಗಳ ಬಗ್ಗೆ ಹೇಳಲೇಬೇಕು. ಟಗರು ಬಂತು ಟಗರು, ಬುಲಮಾ ಬಲುಮಾ, ಹೋಲ್ಡನ್ ಹೋಲ್ಡನ್, ಮೆಂಟಲ್ ಹೋ ಜಾವ, ಜೀವ ಸಖಿ, ಬದುಕಿನ ಬಣ್ಣವೇ, ಯಾರೆ ನೀ ಚತುರ ಎಲ್ಲ ಹಾಡುಗಳು ಸಂಗೀತ ಪ್ರಿಯರ ಆಲ್ ಟೈಂ ಫೆವರೆಟ್ ಆಗಿದೆ.
ಸಾಮಾನ್ಯವಾಗಿ ಇಂತಹ ಸಿನಿಮಾ ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಐದು ಹಾಗೂ ಹತ್ತು ವರ್ಷ ಆದಾಗ ಅವರ ಅಭಿಮಾನಿಗಳು ಸಂಭ್ರಮಿಸುವುದು ನೋಡಬಹುದು. ಆದ್ರೆ, ಟಗರು ಸಿನಿಮಾದಲ್ಲಿ ಆ ಸಂಭ್ರಮ ಕಾಣುತ್ತಿಲ್ಲ.


Click it and Unblock the Notifications











