'ಟಗರು' ಕಾಕ್ರೋಚ್ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಇದು
'ಟಗರು' ಸಿನಿಮಾ ನೂರು ದಿನದತ್ತ ಸಾಗಿದೆ. ಈ ಸಿನಿಮಾದ ವಿಶೇಷತೆ ಅಂದರೆ ಇದರ ಪ್ರತಿ ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಉಳಿದಿದೆ. ಅಂತಹ ಒಂದು ಪಾತ್ರ ಕಾಕ್ರೋಚ್. ಈ ಪಾತ್ರದ ಮೂಲಕ ದೊಡ್ಡ ಜನಪ್ರಿಯತೆ ಪಡೆದಿರುವ ನಟ ಸುದಿ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
'ವೆನಿಲ್ಲಾ' ಚಿತ್ರದಲ್ಲಿ ನಟ ಸುದಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಸಿದ್ದರಾಜು ಆಗಿದ್ದು, ಚಿತ್ರದ ಮುಖ್ಯ ಸನ್ನಿವೇಷದಲ್ಲಿ ಅವರ ಪಾತ್ರ ಎಂಟ್ರಿ ಆಗಲಿದ್ದು, ಆ ಪಾತ್ರ ಚಿತ್ರಕ್ಕೆ ಬೇರೆ ತಿರುವು ನೀಡುತ್ತದೆಯಂತೆ. ಈ ಪಾತ್ರ ಒಬ್ಬ ಕಳ್ಳನದ್ದಾಗಿದ್ದು, ಕಾಮಿಡಿ ಕೂಡ ಇರಲಿದೆಯಂತೆ. ಸಿನಿಮಾದ ಕ್ಲೈಮ್ಯಾಕ್ಸ್ ವರೆಗೆ ಆ ಪಾತ್ರವಿದೆಯಂತೆ.
'ವೆನಿಲ್ಲಾ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಇದು ಜಯತೀರ್ಥ ನಿರ್ದೇಶನದ ಐದನೇ ಸಿನಿಮಾವಾಗಿದೆ. 'ವೆನಿಲ್ಲಾ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

'Capnophobia' ಎಂಬ ಒಂದು ಕಾಯಿಲೆ 'ವೆನಿಲ್ಲಾ' ಸಿನಿಮಾದ ಒಂದು ಭಾಗ ಆಗಿದೆ. ಈ ಚಿತ್ರದ ಕಥಾನಾಯಕಿಗೆ ಈ ಕಾಯಿಲೆ ಇರುತ್ತದೆ. 'Capnophobia' ಇರುವವರು ಹೊಗೆಯನ್ನು ನೋಡಿದರೆ ಭಯ ಪಡುತ್ತಾರೆ. ಇದೊಂದು ವಿಚಿತ್ರ ಕಾಯಿಲೆ ಆಗಿದ್ದು, ವಾಹನದ ಹೊಗೆ ಕರ್ಪೂರದ ಹೊಗೆ ಹೀಗೆ ಯಾವುದೇ ಹೊಗೆ ಕಂಡರು ಕಾಯಿಲೆ ಇರುವವರು ಭಯ ಪಡುತ್ತಾರೆ. ವಿಶೇಷ ಅಂದರೆ ಇದುವರೆಗೆ ಜಗತ್ತಿನ ಯಾವುದೇ ಸಿನಿಮಾದ ಕಥೆ ಕೂಡ ಈ ಒಂದು ವಿಷಯದ ಮೇಲೆ ಹೆಣೆದಿಲ್ಲ.


Click it and Unblock the Notifications











