ಚಿಟ್ಟೆ ಲವರ್ ದೀಪಾಗೆ ರಿಯಲ್ ಮದುವೆ ಆಗೋಯ್ತು, ಯಾರ್ ಜೊತೆ?

By Naveen

Recommended Video

ಚಿಟ್ಟೆ ಲವರ್ ದೀಪಾಗೆ ರಿಯಲ್ ಮದುವೆ ಆಗೋಯ್ತು | Filmibeat Kannada

'ಟಗರು' ಸಿನಿಮಾ ನೋಡಿದವರಿಗೆ ಚಿಟ್ಟೆಯ ಪರಿಚಯ ಇದ್ದೇ ಇರುತ್ತದೆ. ಡಾಲಿಯ ಪ್ರಾಣ ಸ್ನೇಹಿತನಾಗಿರುವ ಚಿಟ್ಟೆ ಇಡೀ ಸಿನಿಮಾದಲ್ಲಿ ತನ್ನ ಖಡಕ್ ನಟನೆ ಮತ್ತು ಧ್ವನಿಯ ಮೂಲಕ ಆವರಿಸಿಕೊಂಡಿದ್ದಾನೆ. ಕವಿಯಾಗಿರುವ ಚಿಟ್ಟೆ ಅಲಿಯಾಸ್ ಚಿತ್ತರಂಜನ್ ಅನಿರೀಕ್ಷಿತವಾಗಿ ರೌಡಿಸಂಗೆ ಬರುತ್ತಾನೆ. ಆತನ ಗೆಳೆಯ ಡಾಲಿ ಹುಡುಗಿಯರನ್ನು ಬಟ್ಟೆಯ ರೀತಿ ಬದಲಾಯಿಸುತ್ತಿರುತ್ತಾನೆ. ಆದರೆ ಚಿಟ್ಟೆ ಮಾತ್ರ ಒಂದೇ ಹುಡುಗಿಯನ್ನು ಮನಸಾರೆ ಪ್ರೀತಿಸುತ್ತಿರುತ್ತಾನೆ. ಆ ಹುಡುಗಿಯೇ ದೀಪಾ.

''ನೀನು ದೀಪಾ, ಇವನು ಹಾವಳಿ ಇಬ್ಬರು ಸೇರಿದರೆ ದೀಪಾವಳಿ'' ಎನ್ನುವ ಡಾಲಿಯ ಕವನದಂತೆ ಚಿಟ್ಟೆ ಮತ್ತು ದೀಪಾ ತುಂಬ ಪ್ರೀತಿಸುತ್ತಿರುತ್ತಾರೆ. ಆದರೆ ಸಿನಿಮಾದ ಅಂತ್ಯದಲ್ಲಿ ಚಿಟ್ಟೆ ಟಗರು ಶಿವನಿಗೆ ಬಲಿಯಾಗುತ್ತಾನೆ. ಸಿನಿಮಾದಲ್ಲಿ ಕೊನೆಗೂ ಚಿಟ್ಟೆ ಮತ್ತು ದೀಪಾ ಜೋಡಿ ಒಂದಾಗುವುದಿಲ್ಲ. ಆದರೆ ಇದೀಗ ರಿಯಲ್ ಜೀವನದಲ್ಲಿ ದೀಪಾ ಮದುವೆ ಆಗಿದೆ. ಒಂದು ಕಡೆ 'ಟಗರು' ಸಿನಿಮಾ ಯಶಸ್ವಿಯಾಗಿರುವ ಖುಷಿಯಲ್ಲಿರುವ ದೀಪಾಗೆ ಈಗ ಮದುವೆಯ ಸಂಭ್ರಮ ಬಂದಿದೆ.

ಅಂದಹಾಗೆ, 'ಟಗರು' ಸಿನಿಮಾದ ದೀಪಾ ಪಾತ್ರ ಮಾಡಿದ ಆ ನಟಿ ಯಾರು ಮತ್ತು ಅವರ ಮದುವೆಯ ವಿವರ ಮುಂದಿದೆ ಓದಿ.

ಅರ್ಪಿತಾ ಗೌಡ

ಅರ್ಪಿತಾ ಗೌಡ

'ಟಗರು' ಸಿನಿಮಾದಲ್ಲಿ ದೀಪಾ ಪಾತ್ರವನ್ನು ಮಾಡಿದ್ದ ನಟಿಯ ಹೆಸರು ಅರ್ಪಿತಾ ಗೌಡ. ಬೆಂಗಳೂರಿನವರೇ ಆದ ಅರ್ಪಿತಾ ಗೌಡಗೆ ನಟನೆ ಅಂದರೆ ತುಂಬ ಇಷ್ಟವಂತೆ. ಅದೇ ಕಾರಣದಿಂದ ಸಣ್ಣ ಪಾತ್ರವಾದರು 'ಟಗರು' ಸಿನಿಮಾದ ಅವಕಾಶ ಸಿಕ್ಕ ನಂತರ ಒಪ್ಪಿಕೊಂಡು ಖುಷಿಯಿಂದ ನಟನೆ ಮಾಡಿದ್ದಾರೆ. ಚಿಟ್ಟೆ ಲವರ್ ಆದ ದೀಪಾ ಪಾತ್ರ ತೆರೆ ಮೇಲೆ ಕೆಲವೇ ನಿಮಿಷ ಇದ್ದರು ಕೂಡ ಸಿನಿಮಾ ನೋಡುಗರ ಗಮನ ಸೆಳೆಯುತ್ತದೆ.

ರಿಯಾಲಿಟಿ ಶೋ ದಲ್ಲಿ ಭಾಗಿ

ರಿಯಾಲಿಟಿ ಶೋ ದಲ್ಲಿ ಭಾಗಿ

'ಟಗರು' ಸಿನಿಮಾಗೆ ಮುಂಚೆ ರಿಯಾಲಿಟಿ ಶೋದಲ್ಲಿ ಅರ್ಪಿತಾ ಗೌಡ ಭಾಗಿಯಾಗಿದ್ದರು. 2016 ರಲ್ಲಿ ನಡೆದ ಸುವರ್ಣ ವಾಹಿನಿಯ 'ಆಕ್ಷನ್ ಸ್ಟಾರ್' ಎಂಬ ಕಾರ್ಯಕ್ರಮದಲ್ಲಿ ದೀಪಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಒಟ್ಟು 10 ಸ್ಪರ್ಧಿಗಳಲ್ಲಿ ಅರ್ಪಿತಾ ಗೌಡ ಅವಕಾಶ ಪಡೆದಿದ್ದರು. ಜೊತೆಗೆ ಕೆಲವು ಕಿರುಚಿತ್ರದಲ್ಲಿ ನಟನೆ ಮಾಡಿದ ಅನುಭವ ಪಡೆದುಕೊಂಡಿದ್ದರು. '10 : pm' ಎಂಬ ಹಾರರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅರ್ಪಿತಾ ಗೌಡ ನಟಿಸಿದ್ದರು.

ಅರ್ಪಿತಾ ಗೌಡ ವೆಡ್ಸ್ ರವಿ ಗೌಡ

ಅರ್ಪಿತಾ ಗೌಡ ವೆಡ್ಸ್ ರವಿ ಗೌಡ

ನಟಿ ಅರ್ಪಿತಾ ಗೌಡ ವಿವಾಹ ಕಳೆದ ಮಂಗಳವಾರ ನಡೆದಿದೆ. ರವಿ ಗೌಡ ಎಂಬುವವರ ಜೊತೆಗೆ ಅರ್ಪಿತಾ ಗೌಡ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಪಿತಾ ಗೌಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮದುವೆಯ ಪೋಟೋವನ್ನು ಹಂಚಿಕೊಂಡಿದ್ದಾರೆ. ದೀಪಾ ಅವರ ಸ್ನೇಹಿತರು ಮತ್ತು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಸಿನಿಮಾದ ನಂತರ ಅರ್ಪಿತಾ ಗೌಡ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವೆಂಬರ್ ನಲ್ಲಿ ನಿಶ್ಚಿತಾರ್ಥ ಆಗಿತ್ತು

ನವೆಂಬರ್ ನಲ್ಲಿ ನಿಶ್ಚಿತಾರ್ಥ ಆಗಿತ್ತು

ಅರ್ಪಿತಾ ಗೌಡ ಮತ್ತು ರವಿ ಗೌಡ ಅವರ ನಿಶ್ಚಿತಾರ್ಥ ನವೆಂಬರ್ ನಲ್ಲಿ ನಡೆದಿತ್ತು. ಇನ್ನು ಅರ್ಪಿತಾ ಗೌಡ ಕೈ ಹಿಡಿದಿರುವ ರವಿ ಗೌಡ ಕೂಡ ಬೆಂಗಳೂರಿನವರೇ ಆಗಿದ್ದಾರೆ. ರವಿ ಗೌಡ ಮೂಲತಃ ಬಿಜಿನೆಸ್ ಮ್ಯಾನ್ ಆಗಿದ್ದಾರೆ. ಅಂದಹಾಗೆ, ಈಗ ತಾನೇ ಸಿನಿಮಾ ಪಯಣ ಶುರು ಮಾಡಿರುವ ದೀಪಾ ಮದುವೆಯ ನಂತರ ನಟನೆಯನ್ನು ಮುಂದುವರೆಸುತ್ತಾರೊ ಇಲ್ಲವೋ ಎಂಬುದು ಸಹ ಪ್ರಶ್ನೆ ಯಾಗಿದೆ.

'ದೀಪಾ'ನಿಗೆ 'ಹಾವಳಿ'ಯ ವಿಶ್

'ದೀಪಾ'ನಿಗೆ 'ಹಾವಳಿ'ಯ ವಿಶ್

ಡಾಲಿ ಸಿನಿಮಾದಲ್ಲಿ ''ನೀನು ದೀಪಾ, ಇವನು ಹಾವಳಿ ಇಬ್ಬರು ಸೇರಿದರೆ ದೀಪಾವಳಿ'' ಎಂದು ಕವನ ಬರೆಯುತ್ತಾನೆ. ಆದರೆ ರಿಯಲ್ ಆಗಿ ಚಿಟ್ಟೆ ದೀಪಾ ಮದುವೆಗೆ ಬಂದು ಶುಭಕೋರಿದ್ದಾರೆ. ನಟ ವಸಿಷ್ಟ ತಮ್ಮ ಸಹ ನಟಿಯಾದ ಅರ್ಪಿತಾ ಗೌಡ ಅವರ ವಿವಾಹ ಕಾರ್ಯಕ್ರಮಕ್ಕೆ ಬಂದು ವಿಶ್ ಮಾಡಿದ್ದಾರೆ. ಇಬ್ಬರು ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಗೆಳತಿಯ ಮದುವೆಯಲ್ಲಿ ಮಾನ್ವಿತಾ

ಗೆಳತಿಯ ಮದುವೆಯಲ್ಲಿ ಮಾನ್ವಿತಾ

ಅರ್ಪಿತಾ ಗೌಡ ಮದುವೆಗೆ ನಟಿ ಮಾನ್ವಿತಾ ಹರೀಶ್ ಕೂಡ ಹೋಗಿ ವಿಶ್ ಮಾಡಿದ್ದಾರೆ. ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳದೆ ಇದ್ದರು ಸಹ ಮಾನ್ವಿತಾ ಮತ್ತು ಅರ್ಪಿತಾ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರು ಸಖತ್ ಎಂಜಾಯ್ ಮಾಡಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟ ಗೆಳತಿಗೆ ಮಾನ್ವಿತಾ ಶುಭ ಹಾರೈಸಿದ್ದಾರೆ.

More from Filmibeat

English summary
Tagaru kannada movie actress Arpitha Gowda got married with Ravi gowda. actress Arpitha Gowda played Deepa character in Kannada actor Shiva Rajkumar's 'Tagaru' movie. The movie is directed by Duniya Suri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X