ಎದೆಬಡಿತ ಹೆಚ್ಚಿಸುತ್ತಿದೆ ಶಿವಣ್ಣನ 'ಟಗರು' ಟೈಟಲ್ ಸಾಂಗ್
''ಟಗರು ಬಂತು ಟಗರು..'' ಹಾಡು ಇದೀಗ ರಿಲೀಸ್ ಆಗಿದೆ. ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಮೊದಲ ಹಾಡು ಇದಾಗಿದೆ. ಕೇಳುಗರ ಎದೆಬಡಿತವನ್ನು ಹೆಚ್ಚಿಸುತ್ತಿದೆ ಈ ಹಾಡು.
'ಟಗರು' ಸಿನಿಮಾದ ಆಡಿಯೋ ಬಿಡುಗಡೆ ಇಂದು ಸಂಜೆ ಹೊಸಪೇಟೆಯಲ್ಲಿ ನಡೆಯಲಿದೆ. ಅದರ ಮುಂಚಿತವಾಗಿ ಪಿ.ಆರ್.ಕೆ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಮೂರು ಹಾಡುಗಳನ್ನು ರಿಲೀಸ್ ಮಾಡಲಾಗಿದೆ.

ಅದರಲ್ಲಿಯೂ ಚಿತ್ರದ ಟೈಟಲ್ ಸಾಂಗ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಮ್ಯೂಸಿಕ್ ಕೇಳುಗರಿಗೆ ಹೊಸ ಕಿಕ್ ನೀಡುತ್ತಿದೆ. ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಇನ್ನೊಂದು ಹಾಡಿಗೆ ಯೋಗರಾಜ್ ಭಟ್ ಮತ್ತು ಮತ್ತೊಂದು ಹಾಡಿಗೆ ಕಿರಣ್ ಕಾವೇರಪ್ಪ, ವಾರ್ಧಿಕ್ ಜೋಸೇಫ್ ಅವರ ಸಾಹಿತ್ಯ ಇದೆ.
'ಟಗರು' ಸಿನಿಮಾಗೆ ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಮಾನ್ವಿತಾ ಮತ್ತು ಭಾವನ ಚಿತ್ರದ ನಾಯಕಿ ಆಗಿದ್ದಾರೆ. ಶ್ರೀ ಕಾಂತ್ ಬಂಡವಾಳ ಹಾಕಿದ್ದು, ಸಿನಿಮಾ ಜನವರಿಯಲ್ಲಿ ತೆರೆಗೆ ಬರಲಿದೆ.
English summary
Actor Shiva Rajkumar's 'Tagaru' kannada movie songs released. The movie is directed by Soori. .


Click it and Unblock the Notifications