ಹೊಸಪೇಟೆಯಲ್ಲಿ ಅಬ್ಬರಿಸಲಿದೆ 'ಟಗರು' ಚಿತ್ರದ ಹಾಡುಗಳು

By Pavithra

'ಕಡ್ಡಿಪುಡಿ' ಸಿನಿಮಾದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಚಿತ್ರ 'ಟಗರು'. ಹಲವು ದಿನಗಳಿಂದ ಸಾಕಷ್ಟು ಕುತೂಹಲ ಉಂಟು ಮಾಡಿರುವ 'ಟಗರು' ಚಿತ್ರದ ಮೇಕಿಂಗ್ ಹಾಗೂ ಚಿಕ್ಕದೊಂದು ಸಾಂಗ್ ಟ್ಯೂನ್ ಕೇಳಿ ಅಭಿಮಾನಿಗಳು ಸಿನಿಮಾ ರಿಲೀಸ್ ಗಾಗಿ ಕಾದು ಕುಂತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಹಿಟ್ ಕಾಂಬಿನೇಶನ್ ಅಂತಾನೇ ಬಿಂಬಿತವಾಗಿರುವ ಸೂರಿ ಹಾಗೂ ಶಿವಣ್ಣ ಜೋಡಿ, ಈ ಬಾರಿಯೂ ಬೇರೆಯದ್ದೇ ರೀತಿಯ ಸಿನಿಮಾವನ್ನ ಅಭಿಮಾನಿಗಳ ಮುಂದಿಡಲಿದ್ದಾರೆ ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರದ ಒಂದೇ ಒಂದು ಟ್ಯೂನ್ ಕೇಳಿ ಇಂಪ್ರೆಸ್ ಆಗಿದ್ದ ಫ್ಯಾನ್ಸ್ ಚಿತ್ರದ ಹಾಡುಗಳು ಯಾವಾಗ ರಿಲೀಸ್ ಆಗುತ್ತೇ ಅಂತ ಕಾಯುತ್ತಿದ್ದರು. ನಿರ್ಮಾಪಕ ಕೆ ಪಿ ಶ್ರೀಕಾಂತ್ ಇದೇ ತಿಂಗಳ ಅಂತ್ಯಕ್ಕೆ 'ಟಗರು' ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡಲು ನಿರ್ಧರಿಸಿದ್ದು ಹೊಸಪೇಟೆಯಲ್ಲಿ ಚಿತ್ರದ ಹಾಡುಗಳು ರಿಲೀಸ್ ಆಗಲಿದೆ. ಮುಂದೆ ಓದಿ...

ಹೊಸಪೇಟೆಯಲ್ಲಿ ಶಿವಣ್ಣ ಮತ್ತು ಟೀಂ

ಹೊಸಪೇಟೆಯಲ್ಲಿ ಶಿವಣ್ಣ ಮತ್ತು ಟೀಂ

ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಹಾಡುಗಳನ್ನ ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಹೊಸಪೇಟೆಯ 'ವಿ ಎನ್ ಸಿ' ಕಾಲೇಜು ಮೈದಾನದಲ್ಲಿ ಇದೇ ತಿಂಗಳ (ಡಿಸೆಂಬರ್) 23 ರಂದು ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.

ವೇದಿಕೆ ಮೇಲೆ ಅಭಿಮಾನಿಗಳಿಗಾಗಿ ಶಿವಣ್ಣ ಡ್ಯಾನ್ಸ್

ವೇದಿಕೆ ಮೇಲೆ ಅಭಿಮಾನಿಗಳಿಗಾಗಿ ಶಿವಣ್ಣ ಡ್ಯಾನ್ಸ್

ಹೊಸಪೇಟೆಯಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ಅಭಿನಯದ ಚಿತ್ರದ ಹಾಡುಗಳನ್ನ ಬಿಡುಗಡೆ ಮಾಡಲಾಗುತ್ತಿದೆ. ಅದ್ಧೂರಿ ಆಡಿಯೋ ಸಮಾರಂಭದಲ್ಲಿ ಶಿವರಾಜ್ ಕುಮಾರ್, ಮಾನ್ವಿತಾ ಹರೀಶ್ ಇನ್ನೂ ಅನೇಕ ಕಲಾವಿದರು ಡ್ಯಾನ್ಸ್ ಮಾಡಲಿದ್ದಾರೆ.

ಪವರ್ ಸ್ಟಾರ್-ರೋರಿಂಗ್ ಸ್ಟಾರ್

ಪವರ್ ಸ್ಟಾರ್-ರೋರಿಂಗ್ ಸ್ಟಾರ್

ಇತ್ತಿಚೆಗಷ್ಟೇ ಒಂದೇ ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರನ್ನ ಇಂಪ್ರೇಸ್ ಮಾಡಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಶಿವರಾಜ್ ಕುಮಾರ್ 'ಟಗರು' ಆಡಿಯೋ ರಿಲೀಸ್ ಸ್ಟೇಜ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಜೊತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಅಪ್ಪು ಸಂಸ್ಥೆಯಲ್ಲಿ 'ಟಗರು' ಹಾಡುಗಳ ಬಿಡುಗಡೆ

ಅಪ್ಪು ಸಂಸ್ಥೆಯಲ್ಲಿ 'ಟಗರು' ಹಾಡುಗಳ ಬಿಡುಗಡೆ

'ಟಗರು' ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹೇಳಿರುವಂತೆಯೇ 'ಪಿ ಆರ್ ಕೆ' ಆಡಿಯೋ ಕಂಪನಿಯಲ್ಲೇ 'ಟಗರು' ಸಿನಿಮಾದ ಹಾಡುಗಳು ಬಿಡುಗಡೆ ಆಗುತ್ತಿದೆ. ಚಿತ್ರಕ್ಕೆ 'ಗೋಧಿಬಣ್ಣ ಸಾದಾರಣ ಮೈಕಟ್ಟು' ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಐದು ಹಾಡುಗಳು ಮತ್ತು ಮೂರು ಬಿಟ್ ಸಾಂಗ್ ಗಳನ್ನ ಅಭಿಮಾನಿಗಳು 'ಟಗರು' ಆಲ್ಬಂ ನಲ್ಲಿ ನಿರೀಕ್ಷೆ ಮಾಡಬಹುದು.

ಅಭಿಮಾನಿಯಿಂದ ಅಭಿಮಾನಿಗಾಗಿ ಚಿತ್ರ

ಅಭಿಮಾನಿಯಿಂದ ಅಭಿಮಾನಿಗಾಗಿ ಚಿತ್ರ

ಶಿವಣ್ಣನ ಅಭಿಮಾನಿ ಹಾಗೂ ನಿರ್ಮಾಪಕ ಆಗಿರುವ ಕೆ ಪಿ ಶ್ರೀಕಾಂತ್ ನಿರ್ಮಾಣದ ಸಿನಿಮಾ 'ಟಗರು'. ದುನಿಯಾ ಸೂರಿ ನಿರ್ದೇಶನ ಮಾಡಿದ್ದು ಶಿವರಾಜ್ ಕುಮಾರ್ ಜೊತೆಯಲ್ಲಿ ವಸಿಷ್ಠ, ಮಾನ್ವಿತಾ ಹರೀಶ್, ಜಾಕಿ ಭಾವನಾ, ಧನಂಜಯ್ ಹೀಗೆ ಇನ್ನೂ ಅನೇಕರು ಅಭಿನಯಿಸಿರುವ ಚಿತ್ರ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಟಗರು ಟೀಂ ಸಂಕ್ರಾಂತಿಯ ಸುಗ್ಗಿ ಸಂಭ್ರಮಕ್ಕೆ ಪ್ರೇಕ್ಷಕರ ಎದುರು ಬರಲಿದೆ.

More from Filmibeat

English summary
Shivaraj kumar starrer Tagaru movie audio release ceremony will be held on december 23 at Hosapete, Audio Release in PRK Audio Company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X