ಸಿದ್ದು, ಬಿಎಸ್.ವೈ, ಕುಮಾರಣ್ಣ ಕೃಪೆಯಿಂದ 'ಟಗರು' ಮಾಡಿದ ದಾಖಲೆ.!

By Bharath Kumar

Recommended Video

ಟಗರು 100 ಡೇಸ್ ಗೂ ಸಿದ್ದು, ಬಿ ಎಸ್ ವೈ , ಕುಮಾರಣ್ಣನಿಗೂ ಸಂಬಂಧ ಇದೆ | Oneindia Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯಿಸಿದ್ದ 'ಟಗರು' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 23 ರಂದು ಬಿಡುಗಡೆಯಾಗಿದ್ದ 'ಟಗರು' ಈಗ ಸೆಂಚುರಿ ಬಾರಿಸಲು ಸಜ್ಜಾಗಿದೆ.

ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದರು. ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಅಬ್ಬರಿಸಿದ್ದರು. ಮಾನ್ವಿತಾ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದರು.

ಸದ್ಯ, ಸ್ಯಾಂಡಲ್ ವುಡ್ ನಲ್ಲಿ ಟಗರು ಹವಾ ಇನ್ನು ನಿಂತಿಲ್ಲ. ಹೀಗಿರುವಾಗ, ಶಿವಣ್ಣನ ಈ ಸಿನಿಮಾ ವಿಶೇಷವಾದ, ವಿಭಿನ್ನವಾದ, ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದಿದೆ.

Tagaru movie create new record

ಹೌದು, ಮೂರು ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಪ್ರದರ್ಶನ ಕಂಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಟಗರು' ಸಿನಿಮಾ ಬಿಡುಗಡೆಯಾದಾಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಐವತ್ತು ಪೂರೈಸಿ ಮುನ್ನಗ್ಗುತ್ತಿದ್ದ ವೇಳೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆದರು. ಈಗ ನೂರನೇ ದಿನದ ಕಡೆ ಸಾಗಿದೆ. ಈಗ ಎಚ್.ಡಿ ಕುಮಾರಸ್ವಾಮಿ ಸಿಎಂ ಆಗ್ತಿದ್ದಾರೆ.

ಹೀಗೆ, ಮೂರು ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಪ್ರದರ್ಶನವಾದ ಸಿನಿಮಾ ಎನಿಸಿಕೊಂಡಿದೆ. ಇದು ಕಾಕತಾಳೀಯವಾದರೂ ಒಂದು ರೀತಿಯಲ್ಲಿ ವಿಶೇಷವೇ ಸರಿ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಟ್ರೋಲ್ ಆಗುತ್ತಿದೆ.

More from Filmibeat

English summary
Kannada actor shivarajkumar starrer tagaru movie has create a new record. the movie directed by duniya soori and also starrer dhananjay, vasishta simha, manvitha and bhavana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X