Just In
Don't Miss!
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾನ್ವಿತಾ ಹಾಡನ್ನ ನೋಡಿ ಮೆಂಟಲ್ ಆದ ಸ್ಯಾಂಡಲ್ ವುಡ್ ನಾಯಕಿಯರು
ಚಂದನವನದ ಕೆಂಡಸಂಪಿಗೆ ಮಾನ್ವಿತಾ ಹರೀಶ್ ಸದ್ಯ ಟಗರು ಪುಟ್ಟಿ ಆಗಿ ಸುದ್ದಿ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿ ಭರವಸೆಯ ನಟಿ ಎಂದು ಹೆಸರು ಪಡೆದುಕೊಂಡ ಮಾನ್ವಿತಾ ಅಭಿನಯಕ್ಕೆ ಮರುಳಾಗದವರಿಲ್ಲ.
ಗಾಂಧಿನಗರದಲ್ಲಿ ಟಗರು ಸಿನಿಮಾ ಸಾಕಷ್ಟು ವಿಚಾರಗಳಿಗೆ ಸುದ್ದಿ ಮಾಡುತ್ತಿದೆ. ಬಿಡುಗಡೆ, ಪ್ರಚಾರ, ಹಾಡುಗಳು ,ಮೇಕಿಂಗ್ ಇನ್ನೂ ಅನೇಕ ಕಡೆಗಳಲ್ಲಿ ಟಗರು ಚಿತ್ರದ ಬಗ್ಗೆಯೇ ಮಾತು.
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶಿವರಾಜ್ ಕುಮಾರ್
ಬಿಡುಗಡೆಗೂ ಮುನ್ನವೇ ಎಲ್ಲಾ ಕಡೆಗಳಿಂದ ಬೇಡಿಕೆ ಪಡೆದುಕೊಂಡಿರುವ ಟಗರು ಸಿನಿಮಾದ ಹಾಡುಗಳು ಕೂಡ ಫೇಮಸ್ ಆಗಿವೆ. ಒಂದು ಕಡೆ ಟಗರು ಟೈಟಲ್ ಸಾಂಗ್, ಮತ್ತೊಂದು ಕಡೆ ಬಲ್ಮಾ ಹಾಡು ಇವೆಲ್ಲವುಗಳ ಮಧ್ಯೆ ನಟಿ ಮಾನ್ವಿತಾ ಹಾಡನ್ನ ನೋಡಿದ ಸ್ಯಾಂಡಲ್ ವುಡ್ ನಟಿಯರು ಮೆಂಟಲ್ ಆಗಿದ್ದಾರಂತೆ.ಅಯ್ಯೋ ಇದೇನಾಯ್ತು ಅಂತ ಆಶ್ಚರ್ಯ ಪಡಬೇಡಿ ಮುಂದೆ ಓದಿ...

ವೈರಲ್ ಆಯ್ತು ಮಾನ್ವಿತಾ ಮೆಂಟಲ್ ಸಾಂಗ್
ಟಗರು ಸಿನಿಮಾದ 'ಮೆ ಮೆಂಟಲ್ ಓ ಜಾವಾ' ಹಾಡು ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಸಾಮಾನ್ಯ ಪ್ರೇಕ್ಷಕರನ್ನ ಮಾತ್ರವಲ್ಲದೆ ಚಿತ್ರರಂಗದ ನಾಯಕಿಯರನ್ನ ಇಂಪ್ರೆಸ್ ಮಾಡುತ್ತಿದೆ.

ಮುಗುಳುನಗೆ ಹುಡುಗಿಗೂ ಇಷ್ಟ ಮೆಂಟಲ್ ಹಾಡು
ಕ್ರೇಜಿ ಬಾಯ್ ಹಾಗೂ ಮುಗುಳುನಗೆ ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರನ್ನ ಮೋಡಿ ಮಾಡಿದ ನಟಿ ಆಶಿಕಾ ರಂಗನಾಥ್ ಅವರಿಗೂ 'ಮೆ ಮೆಂಟಲ್ ಓ ಜಾವಾ' ಹಾಡು ಸಖತ್ ಫೆವರೆಟ್. ಈ ಹಾಡಿಗೆ ಡಬ್ ಸ್ಮ್ಯಾಷ್ ಕೂಡ ಮಾಡಿದ್ದಾರೆ ಆಶಿಕಾ.

ಮೆಂಟಲ್ ಹಾಡಿನ ಮೇಲೆ ನಟಿ ಹಿತಾಗೆ ಪ್ರೀತಿ
ಕಾಲ್ ಕೆಜಿ ಪ್ರೀತಿ ಸಿನಿಮಾ ಖ್ಯಾತಿಯ ನಟಿ ಹಿತಾ ಕೂಡ ಮೆಂಟಲ್ ಹಾಡಿಗೆ ಫಿದಾ ಆಗಿದ್ದಾರೆ. ಟಗರು ಚಿತ್ರದ 'ಮೆಂಟಲ್ ಓ ಜಾವಾ' ಹಾಡಿಗೆ ತಮ್ಮದೇ ಸ್ಟೈಲ್ ನಲ್ಲಿ ಡಬ್ ಸ್ಯ್ಮಾಷ್ ಮಾಡಿದ್ದಾರೆ.

ಅಭಿಮಾನಿಗಳಿಗೆ ಇಷ್ಟವಾಯ್ತು ಟಗರು ಹಾಡುಗಳು
ಟಗರು ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಟೈಟಲ್ ಸಾಂಗ್ ಮತ್ತು ಧನಂಜಯ ಹಾಡು ಹುಡುಗರನ್ನ ಮೋಡಿ ಮಾಡಿದರೆ, ಮಾನ್ವಿತಾ ಮೆಂಟಲ್ ಹಾಡು ಹುಡಿಗಿಯರಿಗೆ ಮೆಚ್ಚುಗೆ ಆಗಿದೆ.