For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 23ರಿಂದ ಮತ್ತೆ ಚಿತ್ರಮಂದಿರಲ್ಲಿ 'ಟಗರು' ಅಬ್ಬರ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಬ್ಲಾಕ್ ಬಸ್ಟರ್ ಸಿನಿಮಾ 'ಟಗರು' ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ.

  2018ರ ಸೂಪರ್ ಹಿಟ್ ಚಿತ್ರ ಟಗರು ಅಕ್ಟೋಬರ್ 23 ರಿಂದ ಮರು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ ಕೆಪಿ ಶ್ರೀಕಾಂತ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಗೋಪಾಲನ್ ಮಾಲ್‌ನಲ್ಲಿ ಮಾತ್ರ ಶೋ ಇದೆ ಎಂದು ಹೇಳಲಾಗಿದೆ.

  ಶಿವಣ್ಣನ ಸರಳತೆ ಕಣ್ಣಾರೆ ಕಂಡು ಅಚ್ಚರಿಯಾಗಿದ್ದ ಖಳನಟ ಸತ್ಯ ಪ್ರಕಾಶ್ಶಿವಣ್ಣನ ಸರಳತೆ ಕಣ್ಣಾರೆ ಕಂಡು ಅಚ್ಚರಿಯಾಗಿದ್ದ ಖಳನಟ ಸತ್ಯ ಪ್ರಕಾಶ್

  ದುನಿಯಾ ಸೂರಿ ಈ ಚಿತ್ರ ನಿರ್ದೇಶನ ಮಾಡಿದ್ದರು. ಪೊಲೀಸ್ ಆಫೀಸರ್ ಆಗಿ ಶಿವಣ್ಣ ನಟಿಸಿದ್ದರು. ಧನಂಜಯ್ ಈ ಚಿತ್ರದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಧನಂಜಯ್‌ಗೆ ವಸಿಷ್ಠ ಸಿಂಹ ಸಾಥ್ ನೀಡಿದ್ದರು.

  ಭಾವನಾ ಮತ್ತು ಮಾನ್ವಿತಾ ಕಾಮತ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದರು. ಪ್ರಮುಖ ಪಾತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್ ಸಹ ಇದ್ದರು.

  ಇನ್ನುಳಿದಂತೆ ಟಗರು ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಚರಣ್ ರಾಜ್ ಸಂಗೀತ ನೀಡಿದ್ದು, ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದರು.

  Arjun Sarja : ಚಿರು ಮಗನನ್ನು ನೋಡಲು ಚೆನ್ನೈನಿಂದ ಹೋರಟ ಅರ್ಜುನ್ ಸರ್ಜಾ | Filmibeat Kannada

  ಬಾಕ್ಸ್ ಆಫೀಸ್‌ನಲ್ಲೂ ಟಗರು ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಕಲೆಕ್ಷನ್‌ನಲ್ಲೂ ದಾಖಲೆ ಬರೆದಿದೆ. 2018ರ ಫೆಬ್ರವರಿ 23 ರಂದು ಮೊದಲ ಸಲ ಟಗರು ಸಿನಿಮಾ ತೆರೆಕಂಡಿತ್ತು.

  English summary
  Shiva rajkumar starrer Block Bluster movie Tagaru Re releasing from Tomorrow in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X