ತಮಿಳಿಗೆ ಸೇಲ್ ಆಯ್ತು 'ಟಗರು': ಶಿವಣ್ಣ-ಡಾಲಿ ಪಾತ್ರದಲ್ಲಿ ಯಾರು.?
Recommended Video

ಈ ವರ್ಷದ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ 'ಟಗರು' ಈಗಲೂ ಕೆಲವು ಚಿತ್ರಂದಿರಗಳಲ್ಲಿ ಪ್ರದರ್ಶನವಾಗ್ತಿದೆ. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಸಿನಿಮಾ 25 ವಾರಗಳನ್ನ ಪೂರೈಸಿ, ಕನ್ನಡ ಇಂಡಸ್ಟ್ರಿಯಲ್ಲಿ ರೆಕಾರ್ಡ್ ನಿರ್ಮಾಣ ಮಾಡಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದ ಈ ಚಿತ್ರ ಈಗ ತಮಿಳು ಇಂಡಸ್ಟ್ರಿಗೆ ಕಾಲಿಡುತ್ತಿದೆ. ತಮಿಳಿನ ಸ್ಟಾರ್ ಡೈರೆಕ್ಟರ್ ಟಗರು ಚಿತ್ರದ ರಿಮೇಕ್ ರೈಟ್ಸ್ ತೆಗೆದುಕೊಂಡಿದ್ದಾರೆ.
ಹಾಗಿದ್ರೆ, ತಮಿಳಿನಲ್ಲಿ 'ಟಗರು' ಸಿನಿಮಾವನ್ನ ಯಾರು ಮಾಡಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಶಿವಣ್ಣ ಪೊಲೀಸ್ ಪಾತ್ರದಲ್ಲಿ ಹಾಗೂ ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಮಿಂಚಿದ್ದರು. ಈ ಮೂರು ಪಾತ್ರಗಳನ್ನ ತಮಿಳಿನಲ್ಲಿ ಯಾರು ನಿಭಾಯಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಹಾಗಿದ್ರೆ, ರಿಮೇಕ್ ಹಕ್ಕು ಪಡೆದವರು ಯಾರು.? ಯಾರಾಗ್ತಾರೆ ಟಗರು.? ಮುಂದೆ ಓದಿ.....

ರಿಮೇಕ್ ಹಕ್ಕು ಖರೀದಿಸಿದ ತಮಿಳು ನಿರ್ದೇಶಕ
25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಟಗರು ಚಿತ್ರದ ತಮಿಳು ರೀಮೇಕ್ ಹಕ್ಕನ್ನ ತಮಿಳು ನಿರ್ದೇಶಕ ಮುತ್ತಯ್ಯ ಅವರು ಖರೀದಿಸಿದ್ದಾರೆ. ಮುತ್ತಯ್ಯ ಈ ಹಿಂದೆ ಕಾರ್ತಿ ಅಭಿನಯದ ಕೊಂಬನ್, ವಿಶಾಲ್ ಅಭಿನಯದ ಮರುಧ, ಶಶಿಕುಮಾರ್ ಅಭಿನಯದ ಎರಡು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.

ಖುಷಿ ಹಂಚಿಕೊಂಡ ನಿರ್ಮಾಪಕ ಶ್ರೀಕಾಂತ್
'ಟಗರು' ಸಿನಿಮಾ ತಮಿಳಿಗೆ ರೀಮೇಕ್ ಆಗ್ತಿರುವ ವಿಷ್ಯವನ್ನ ಸ್ವತಃ ಟಗರು ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರೇ ಖಚಿತಪಡಿಸಿದ್ದಾರೆ. ತಮಿಳು ರೀಮೇಕ್ ಹಕ್ಕು ಎಷ್ಟು ಬೆಲೆಗೆ ಸೇಲ್ ಆಗಿದೆ ಎಂಬುದನ್ನ ಬಹಿರಂಗಪಡಿಸಿಲ್ಲವಾದರೂ, ಈ ಖುಷಿಯ ವಿಚಾರವನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನಿರ್ದೇಶಕ ಸೂರಿ, ಮುತ್ತಯ್ಯ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ಕಾಣಿಸಿಕೊಂಡಿದ್ದಾರೆ.

ಶಿವಣ್ಣನಿಗೆ ಮುತ್ತಯ್ಯ ಆಕ್ಷನ್ ಕಟ್
ಇನ್ನು ಟಗರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿರುವ ಮುತ್ತಯ್ಯ, ಕನ್ನಡ ನಟ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗಂತ ಟಗರು ತಮಿಳು ರೀಮೇಕ್ ನಲ್ಲಿ ಶಿವಣ್ಣ ನಟಿಸುತ್ತಿಲ್ಲ. ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯಿಸಲಿರುವ ಚಿತ್ರಕ್ಕೆ ಮುತ್ತಯ್ಯ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನ ತೆಲುಗಿನಲ್ಲಿ ವಿಜಯ ದೇವರಕೊಂಡ ಅಭಿನಯದ 'ನೋಟಾ' ಚಿತ್ರದ ನಿರ್ಮಾಪಕ ಜ್ಞಾನವೇಲ್ ನಿರ್ಮಾಣ ಮಾಡಲಿದ್ದಾರೆ.

ಯಾರಾಗ್ತಾರೆ ಟಗರು.?
ತಮಿಳು ರಿಮೇಕ್ ಹಕ್ಕು ಸೇಲ್ ಆಗೋಯ್ತು. ಆದ್ರೀಗ ಕಾಡುತ್ತಿರುವ ಪ್ರಶ್ನೆ, ತಮಿಳಿನಲ್ಲಿ ಶಿವಣ್ಣನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಹಾಗೂ ವಸಿಷ್ಠ ಸಿಂಹ ಕ್ಯಾರೆಕ್ಟರ್ ನಲ್ಲಿ ಯಾರು ಬಣ್ಣ ಹಚ್ಚಲಿದ್ದಾರೆ ಎಂಬುದು ಸದ್ಯದ ಕುತೂಹಲ. ಸೂಪರ್ ಹಿಟ್ ಸಿನಿಮಾಗೆ ಬಹುಶಃ ಯಾರಾದರೂ ಸ್ಟಾರ್ ನಟರನ್ನ ಕರೆತರಬಹುದು. ಹೆಚ್ಚಿನ ಮಾಹಿತಿ ಸದ್ಯಕ್ಕೆ ಇಲ್ಲ. ಮುಂದಿನ ಅಪ್ಡೇಟ್ ಗೆ ಫಿಲ್ಮಿಬೀಟ್ ಫಾಲೋಮಾಡಿ...

ಟಗರು ಸಿನಿಮಾದ ಬಗ್ಗೆ....
ಫೆಬ್ರವರಿ 23 ರಂದು ತೆರೆಕಂಡಿದ್ದ 'ಟಗರು' ಶತದಿನ ಆಚರಿಸಿಕೊಂಡಿತ್ತು. ಶಿವರಾಜ್ ಕುಮಾರ್, ವಸಿಷ್ಠ ಸಿಂಹ, ಧನಂಜಯ್, ಮಾನ್ವಿತಾ ಹರೀಶ್, ಭಾವನಾ, ದೇವರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಬಿಸಿನೆಸ್ ಮಾಡಿತ್ತು. ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು ದುನಿಯಾ ಸೂರಿ. ಚರಣ್ ರಾಜ್ ಸಂಗೀತ ಧೂಳೆಬ್ಬಿಸಿತ್ತು.


Click it and Unblock the Notifications











