»   » ವಿಭಿನ್ನ ರೀತಿಯ ಪ್ರಚಾರ ಕಾರ್ಯಕ್ಕೆ ಸಿದ್ದವಾದ ಟಗರು ಟೀಂ

ವಿಭಿನ್ನ ರೀತಿಯ ಪ್ರಚಾರ ಕಾರ್ಯಕ್ಕೆ ಸಿದ್ದವಾದ ಟಗರು ಟೀಂ

Posted By:
Subscribe to Filmibeat Kannada

ಟಗರು ಈ ವರ್ಷ ಪ್ರೇಕ್ಷಕರು ಮೊದಲು ನೋಡುವ ಬಹು ನಿರೀಕ್ಷಿತ ಸಿನಿಮಾ. ಸುಮಾರು ಐದು ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರವನ್ನ ತೆರೆಗೆ ತರಲು ನಿರ್ಧಾರ ಮಾಡಿದ್ದಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್.

ಟೀಸರ್, ಮೇಕಿಂಗ್ ಮತ್ತು ಹಾಡುಗಳಿಂದ ಕ್ಯೂರಿಯಾಸಿಟಿ ಹೆಚ್ಚು ಮಾಡಿರುವ ಟಗರು ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನ ಶುರು ಮಾಡಿಕೊಂಡಿದೆ. ಕಾಂಪಿಟೇಷನ್ ಯುಗದಲ್ಲಿ ವಿಭಿನ್ನ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಳ್ಳಲು ಹೊಸದೊಂದು ಪ್ಲಾನ್ ಮಾಡಿದೆ.

Tagaru movie team new planing for promoting the movie

ಪ್ರಚಾರಕ್ಕಾಗಿ ಶಿವಣ್ಣನ ಫೋಟೋ ಇರುವ ಸ್ಟ್ಯಾಂಡಿಗಳನ್ನ ಚಿತ್ರಮಂದಿರ ಹಾಗೂ ಮಾಲ್ ಗಳಲ್ಲಿ ನಿಲ್ಲಿಸಲು ನಿರ್ಧರಿಸಿದ್ದು, 8 ಅಡಿಯ ಸ್ಟ್ಯಾಂಡಿಗಳು ಈಗಾಗಲೇ ರೆಡಿ ಆಗಿವೆ. ಅವುಗಳ ಮುಂದೆ ಫೋಟೋ ತೆಗೆಸಿಕೊಂಡು ಟಗರು ಫೇಸ್ ಬುಕ್ ಪೇಜ್ ಗೆ ಅಭಿಮಾನಿಗಳು ಕಳುಹಿಸಬೇಕು.

Tagaru movie team new planing for promoting the movie

ಸ್ಟ್ಯಾಂಡಿಗಳ ಮುಂದೆ ತೆಗಿಸಿಕೊಂಡು ಕಳುಹಿಸಿದ ಫೋಟೋಗಳನ್ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗುತ್ತೆ. ಈ ಮೂಲಕ ಟಗರು ಸಿನಿಮಾವನ್ನ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸೋ ವಿನೂತನ ಪ್ರಯತ್ನ ಸಿನಿಮಾತಂಡದ್ದು.

Tagaru movie team new planing for promoting the movie

ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಯಾಗಿ ಜಾಕಿ ಭಾವನಾ ಹಾಗೂ ಮಾನ್ವಿತಾ ಹರೀಶ್ ಅಭಿನಯಿಸಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ನಟ ಧನಂಜಯ್ ಹಾಗೂ ವಸಿಷ್ಠ ಸಿಂಹ ಕಾಣಿಸಿಕೊಳ್ಳಲಿದ್ದಾರೆ.

Tagaru movie team new planing for promoting the movie

ಒಟ್ಟಾರೆ ಈಗಾಗಲೇ ಚಿತ್ರ ನೋಡಲು ಕಾತುರರಾಗಿರುವ ಪ್ರೇಕ್ಷಕರಿಗೆ ಈ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡುವಂತೆ ಮಾಡಲಾಗಿದೆ. ನೀವು ಟಗರು ಚಿತ್ರಕ್ಕಾಗಿ ಕಾದಿದ್ದರೆ ಈ ಮೂಲಕ ಸಿನಿಮಾವನ್ನ ಪ್ರಮೋಷನ್ ಮಾಡಬಹುದು.

English summary
Tagaru movie team new planing for promoting the movie. Making a promotion of the movie by tagaru team putting standy all theaters and mall

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X