ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು
ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ನಿನ್ನೆ ಸಂಜೆ ರಿಲೀಸ್ ಆಗಿರುವ ಟೀಸರ್ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಸೃಷ್ಟಿ ಮಾಡಿದೆ.
ಟೀಸರ್ ನಲ್ಲಿ 'ಟಗರು' ಆಗಿ ಶಿವಣ್ಣ ಅಬ್ಬರಿಸಿದ್ದಾರೆ. ಪ್ರಮುಖವಾಗಿ ಟೀಸರ್ ನಲ್ಲಿ ಬರುವ ಬ್ಯಾಕ್‌ಗ್ರೌಂಡ್ ಸ್ಕೋರ್ ಹುಚ್ಚು ಹಿಡುಸುತ್ತದೆ. ಸೂರಿ ಗ್ಯಾಂಗ್ ಸೇರಿರುವ ಸಂಗೀತ ನಿರ್ದೇಶಕ ಚರಣ್ ರಾಜ್ ತಮ್ಮ ಮ್ಯೂಸಿಕ್ ಮೂಲಕ 'ಟಗರು' ಪವರ್ ಹೆಚ್ಚಿಸಿದ್ದಾರೆ. ಇಲ್ಲಿಯೂ ಶಿವಣ್ಣ ಲಾಂಗ್ ಹಿಡಿದಿದ್ದಾರೆ.

'ಕಡ್ಡಿಪುಡಿ' ಬಳಿಕ ಶಿವಣ್ಣ ಮತ್ತು ಸೂರಿ ಒಂದಾಗಿದ್ದು, ಮತ್ತೊಮ್ಮೆ ಸಖತ್ ರಗಡ್ ಸಿನಿಮಾವನ್ನು ಮಾಡಿದ್ದಾರೆ. ಮಾಸ್ ಸಿನಿಮಾ ಅಂದರೆ ಹೀಗಿರಬೇಕು ಎನ್ನುವುದನ್ನು ಮತ್ತೆ ಸೂರಿ ತೋರಿಸಿದ್ದಾರೆ. ಚಿತ್ರದ ಮೇಕಿಂಗ್ ಅದ್ಬುತವಾಗಿದೆ. ಉಳಿದಂತೆ, ನಟ ಧನಂಜಯ್, ವಸಿಷ್ಟ, ನಟಿ ಭಾವನ, ಮಾನ್ವಿತಾ ಹರೀಶ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
English summary
Watch Video : Shiva Rajkumar's 'Tagaru' movie teaser released. 'ಟಗರು' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.


Click it and Unblock the Notifications