twitter
    For Quick Alerts
    ALLOW NOTIFICATIONS  
    For Daily Alerts

    ಟಗರು ಚಿತ್ರ ಯಶಸ್ಸಿನ ಹಿಂದಿರುವ ಮಾಂತ್ರಿಕರು

    By Pavithra
    |

    Recommended Video

    ಟಗರು ಚಿತ್ರ ಯಶಸ್ಸಿನ ಹಿಂದಿರುವ ಮಾಂತ್ರಿಕರು | Filmibeat Kannada

    ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿ ತೆರೆ ಮೇಲೆ ಬಂದು ಇನ್ನೂ ಕ್ರೇಜ್ ಕಾಪಾಡಿಕೊಂಡಿರುವ ಟಗರು ಚಿತ್ರದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು ಮತ್ತೆ ಮತ್ತೆ ಸಿನಿಮಾ ನೋಡಲು ಥಿಯೇಟರ್ ಕಡೆ ಬರುತ್ತಿದ್ದಾರೆ.

    ಒಂದು ಸಿನಿಮಾ ಸೋತರೆ ಸೋಲಿಗೆ ಕಾರಣವೇನು ಅಂತ ಹುಡುಕುವವರೆ ಹೆಚ್ಚು. ಅದೇ ಸಿನಿಮಾ ಗೆದ್ದಾಗ ತೆರೆ ಮೇಲೆ ಕಾಣಿಸುವವರು ಮಾತ್ರ ಚಿತ್ರದ ಗೆಲುವಿಗೆ ಕಾರಣ ಎಂದು ನೋಡಿದವರು ಅಂದುಕೊಳ್ಳುತ್ತಾರೆ. ಅದೇ ರೀತಿ ಟಗರು ಸಿನಿಮಾ ಗೆಲ್ಲಲು ಸಾಕಷ್ಟು ಕಾರಣಗಳಿವೆ.

    ಮತ್ತೆ ಶುರುವಾಯ್ತು ಟಗರು ಸಿನಿಮಾ ಕ್ರೇಜ್: ಮತ್ತೆ ಶುರುವಾಯ್ತು ಟಗರು ಸಿನಿಮಾ ಕ್ರೇಜ್:

    ತೆರೆ ಮೇಲೆ ಮೂಡಿ ಬಂದಿರುವ ಸುಂದರ ಸಿನಿಮಾ ಪರದೆ ಹಿಂದೆ ದಿ ಬೆಸ್ಟ್ ಎನ್ನಿಸಿಕೊಳ್ಳುವ ಮಾಂತ್ರಿಕರು ಕೆಲಸ ಮಾಡಿದ್ದಾರೆ. ಹಾಗಾದರೆ ಸಿನಿಮಾವನ್ನ ಗೆಲ್ಲಿಸುವಲ್ಲಿ ಆಧಾರ ಸ್ಥಂಭವಾಗಿ ನಿಂತ ಸೂರಿ ಜೊತೆಗಿದ್ದವರು ಯಾರು? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

    ನಿರ್ದೇಶಕ ಸೂರಿ ನಿರ್ದೇಶನ

    ನಿರ್ದೇಶಕ ಸೂರಿ ನಿರ್ದೇಶನ

    ನಿರ್ದೇಶಕ ಸೂರಿ ಅವರಿಗೆ ಚಿತ್ರರಂಗದಲ್ಲಿ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಸೂರಿ ನಿರ್ದೇಶನ ನೋಡಲು ಅನೇಕರು ಚಿತ್ರಮಂದಿರದತ್ತ ಬರುತ್ತಾರೆ. ಅದೇ ಸೂರಿ ಟಗರು ಚಿತ್ರದಲ್ಲಿ ಮ್ಯಾಜಿಕ್ ಮಾಡಿದ್ದಾರೆ. ತಮ್ಮ ಸ್ಟೈಲ್ ಆಫ್ ಸಿನಿಮಾ ಮೇಕಿಂಗ್ ಬಿಟ್ಟು ಬೇರೆಯದ್ದೇ ಹೊಸ ಪ್ರಯತ್ನವನ್ನ ಮಾಡಿ ಗೆಲುವು ಸಾಧಿಸಿದ್ದಾರೆ.

    ಕ್ಯಾಮೆರಾ ಮ್ಯಾನ್ ಮಹೇನ್ ಸಿಂಹ

    ಕ್ಯಾಮೆರಾ ಮ್ಯಾನ್ ಮಹೇನ್ ಸಿಂಹ

    ಸಿನಿಮಾವನ್ನ ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಲ್ಲಿ ಕ್ಯಾಮೆರಾ ವರ್ಕ್ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಈ ವಿಚಾರದಲ್ಲಿ ನಿರ್ದೇಶಕರಿಗೆ ಸಾಥ್ ನೀಡಿರುವುದು ಸಿನಿಮಾಟೋಗ್ರಾಫರ್ ಮಹೇನ್ ಸಿಂಹ. ರೌಡಿಸಂ ಕಥಾಹಂದರವಿರುವ ಟಗರು ಚಿತ್ರವನ್ನ ಪರದೆ ಮೇಲೆ ಬೇರೆಯದ್ದೇ ಫೀಲ್ ನೀಡುವಂತೆ ಸೆರೆಹಿಡಿಯುವಲ್ಲಿ ಸಿಂಹ ಸಕ್ಸಸ್ ಆಗಿದ್ದಾರೆ.

    ಸಂಭಾಷಣೆಕಾರ ಮಾಸ್ತಿ

    ಸಂಭಾಷಣೆಕಾರ ಮಾಸ್ತಿ

    ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ಮುಖ್ಯಪಾತ್ರ ವಹಿಸುವುದು ಕ್ಯಾಮೆರಾ ವರ್ಕ್ ಹಾಗೂ ಸಂಭಾಷಣೆ. ಟಗರು ಸಿನಿಮಾದಲ್ಲಿಯೂ ಡೈಲಾಗ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಸ್ತಿ ಅವರ ಸಂಭಾಷಣೆ ಒಂದು ಕಡೆ ವಿವಾದ ಸೃಷ್ಠಿ ಮಾಡಿದರೆ ಮತ್ತೊಂದು ಕಡೆ ಪ್ರಶಂಸೆಗಳಿಸುತ್ತಿದೆ.

    ಸಂಗೀತ ನಿರ್ದೇಶಕ ಚರಣ್ ರಾಜ್

    ಸಂಗೀತ ನಿರ್ದೇಶಕ ಚರಣ್ ರಾಜ್

    ಟಗರು ಸಿನಿಮಾ ನೋಡಿ ಹೊರಗೆ ಬರುತ್ತಿರುವ ಪ್ರೇಕ್ಷಕರು ಹಿನ್ನಲೆ ಸಂಗೀತ ಹಾಗೂ ಹಾಡುಗಳನ್ನ ತುಂಬಾ ಇಷ್ಟ ಪಡುತ್ತಿದ್ದಾರೆ. ಪ್ರೇಕ್ಷಕರ ಮುಂದೆಯೇ ಕಥೆ ನಡೆಯುತ್ತಿದೆ ಎನ್ನಿಸುವಂತ ಹಿನ್ನಲೆ ಹಿನ್ನಲೆ ಸಂಗೀತ ನೀಡಿದ್ದಾರೆ ಚರಣ್ ರಾಜ್.

    ನಿರ್ಮಾಪಕ ಕೆ ಪಿ ಶ್ರೀಕಾಂತ್

    ನಿರ್ಮಾಪಕ ಕೆ ಪಿ ಶ್ರೀಕಾಂತ್

    ಚಿತ್ರಕ್ಕೆ ನಿರ್ಮಾಪಕರು ತುಂಬಾ ಮುಖ್ಯವಾಗುತ್ತಾರೆ. ಟಗರು ಅಭಿಮಾನಿಗಳ ಸಿನಿಮಾ ಯಾಕೆಂದರೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಶಿವರಾಜ್ ಕುಮಾರ್ ಅವರ ಅಭಿಮಾನಿ. ಒಬ್ಬ ಅಭಿಮಾನಿಯಾಗಿಯೂ ಅದ್ಬುತವಾದ ಸಿನಿಮಾವನ್ನ ನಿರ್ಮಾಣ ಮಾಡಬಹುದೆಂದು ಶ್ರೀಕಾಂತ್ ನಿರೂಪಿಸಿದ್ದಾರೆ.

    English summary
    Kannada cinema Tagaru getting good response everywhere, Movie viewers are appreciating the music, dialogue, camera work, Tagaru Shivarajkumar, Dhananjaya, Manvitha Harish starrer movie.
    Monday, February 26, 2018, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X