twitter
    For Quick Alerts
    ALLOW NOTIFICATIONS  
    For Daily Alerts

    ಟಗರು ದರ್ಶನಕ್ಕೆ ಮುಂಚೆ 'ಕಾಕ್ರೋಚ್', 'ಡಾಲಿ', 'ಚಿಟ್ಟೆ'ಯ ಹಿಸ್ಟರಿ ತಿಳಿದುಕೊಳ್ಳಿ

    By Bharath Kumar
    |

    Recommended Video

    ಟಗರು ಸಿನಿಮಾ ನೋಡೋಕು ಮುಂಚೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳು | Oneindia Kannada

    ಫೆಬ್ರವರಿ 23 ಬಂದೇ ಬಿಡ್ತು. ಟಗರು ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತ ಬೆಳಿಗ್ಗೆ 5 ಅಥವಾ 6 ಗಂಟೆಗೆ ಟಿಕೆಟ್ ಬುಕ್ ಮಾಡಿ ಕಾದು ಕುಂತಿದ್ದಾರೆ.

    ಟಗರು ಸಿನಿಮಾ ನೋಡೋಕು ಮುಂಚೆ ನೀವು ಕೆಲವೊಂದು ಸಂಗತಿಗಳನ್ನ ತಿಳಿದುಕೊಳ್ಳಲೇಬೇಕು. ಈಗಾಗಲೇ ಟಗರು ಸಿನಿಮಾವನ್ನ ಯಾಕೆ ನೋಡಬೇಕು ಎಂಬುದಕ್ಕೆ 7 ಕಾರಣಗಳನ್ನ ನೀಡಿದ್ದೇವೆ. ಆದ್ರೆ, ಈಗ ಹೇಳಲಿರುವ ಅಂಶಗಳು ನಿಜಕ್ಕೂ ನಿಮ್ಮನ್ನ ಕಾಡುವ ವಿಷ್ಯಗಳು.

    ಶಿವಣ್ಣನ 'ಟಗರು' ನೋಡೋಕು ಮುಂಚೆ ಈ 7 ಸಂಗತಿ ತಿಳಿದಿರಿಶಿವಣ್ಣನ 'ಟಗರು' ನೋಡೋಕು ಮುಂಚೆ ಈ 7 ಸಂಗತಿ ತಿಳಿದಿರಿ

    ಟಗರು ಚಿತ್ರದಲ್ಲಿ ನಾಲ್ಕರಿಂದ ಐದು ಪಾತ್ರಗಳು ಬಹಳ ಮುಖ್ಯವಾಗಿರಲಿದೆ ಎಂಬುದು ಸ್ವತಃ ಚಿತ್ರತಂಡವೇ ಹೇಳಿದೆ. ಡಾಲಿ ಬಗ್ಗೆ ಈಗಾಗಲೇ ತಿಳಿದಿರುತ್ತೆ. ಈ ಡಾಲಿಯ ಜೊತೆ ಕಾಕ್ರೋಚ್ ಮತ್ತು ಚಿಟ್ಟೆ ಬಗ್ಗೆ ಕೂಡ ನೀವು ತೀಳಿಯಬೇಕು. ಅಷ್ಟಕ್ಕೂ, ಈ ಕಾಕ್ರೋಚ್ ಯಾರು? ಚಿಟ್ಟೆ ಯಾರು? ಮುಂದೆ ಓದಿ....

    'ಡಾಲಿ' ಧನಂಜಯ್

    'ಡಾಲಿ' ಧನಂಜಯ್

    ಡಾಲಿ....ಕ್ರೈಂನ ಪ್ರತಿರೂಪ. ಕರುಣೆ, ಪ್ರೀತಿ ಇಲ್ಲದ ಕೆಟ್ಟ ವ್ಯಕ್ತಿ. ಟಗರು ಚಿತ್ರದಲ್ಲಿ ಖಳನಟನಾಗಿರುವ ಧನಂಜಯ್ 'ಡಾಲಿ' ಎಂಬ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಡಾಲಿ ಅಬ್ಬರ, ಆರ್ಭಟ, ಘರ್ಜನೆ, ಕ್ರೌರ್ಯ ಹೇಗಿರಲಿದೆ ಎಂಬುದನ್ನ ನಿರ್ದೇಶಕ ಸೂರಿ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ನಲ್ಲಿ ತೋರಿಸಿದ್ದಾರೆ. ಬಹುಶಃ ಶಿವಣ್ಣನ ನಂತರ ಧನಂಜಯ್ ಹೆಚ್ಚು ಗಮನ ಸೆಳೆಯಲಿದ್ದಾರೆ ಎಂಬ ಮಾತು ಚಿತ್ರಜಗತ್ತಿನಲ್ಲಿದೆ.

    'ಚಿಟ್ಟೆ' ವಸಿಷ್ಠ ಸಿಂಹ

    'ಚಿಟ್ಟೆ' ವಸಿಷ್ಠ ಸಿಂಹ

    ಡಾಲಿಯ ಸ್ನೇಹಿತ ಹಾಗೂ ಟಗರು ಚಿತ್ರದ ಮತ್ತೊಬ್ಬ ಖಳನಟನ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. ಚಿತ್ರದಲ್ಲಿ ವಸಿಷ್ಠ ಹೆಸರು ಚಿಟ್ಟೆ. ಡಾಲಿ ಮತ್ತು ಚಿಟ್ಟೆ ಇಬ್ಬರು ಟಗರು ಚಿತ್ರದ ಖಡಕ್ ವಿಲನ್ ಗಳಾಗಿ ಮಿಂಚಲಿದ್ದಾರೆ. ಡಾಲಿಗೆ ಹೋಲಿಸಿಕೊಂಡರೇ ಚಿಟ್ಟೆ ಸ್ವಲ್ಪ ಮೃದು. ಪ್ರೀತಿಗೆ ಕರುಗುವ ವ್ಯಕ್ತಿತ್ವ.

    'ಕಾಕ್ರೋಚ್' ಸುಧೀರ್

    'ಕಾಕ್ರೋಚ್' ಸುಧೀರ್

    ಡಾಲಿ ಮತ್ತು ಚಿಟ್ಟೆ ಪಾತ್ರಗಳಂತೆ ಕಾಕ್ರೋಚ್ ಪಾತ್ರವೂ ಟಗರು ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಕಾಕ್ರೋಚ್ ಪಾತ್ರದಲ್ಲಿ ಸುಧೀರ್ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ಚಿತ್ರದಲ್ಲಿ ಡಾಲಿಯ ಸಹೋದರನಾಗಿ ಕಾಕ್ರೋಚ್ ಅಭಿನಯಿಸಿದ್ದಾರೆ. ಡಾಲಿ ಮತ್ತು ಚಿಟ್ಟೆಗಿಂತ ಕಾಕ್ರೋಚ್ ತುಂಬ ನಟೋರಿಯಸ್ ಪಾತ್ರವಂತೆ.

    ದುನಿಯಾ ಸೂರಿಯ ವಿಲನ್ ಗಳೇ ಹೀಗೆ

    ದುನಿಯಾ ಸೂರಿಯ ವಿಲನ್ ಗಳೇ ಹೀಗೆ

    ದುನಿಯಾ ಸೂರಿ ನಿರ್ದೇಶನದ ಚಿತ್ರಗಳಲ್ಲಿ ವಿಲನ್ ಗಳ ಹೆಸರೇ ಹೀಗೆ. ವಿಚಿತ್ರ, ವಿಭಿನ್ನ, ವಿಶೇಷವಾಗಿರುತ್ತೆ. ಈ ಸಂಪ್ರದಾಯ ಮೊದಲ ಸಿನಿಮಾದಿಂದಲೂ ಸಾಗಿದೆ. ದುನಿಯಾ ಚಿತ್ರದಲ್ಲಿ ಯೋಗಿಗೆ ಲೂಸ್ ಮಾದ ಎಂದು ಹೆಸರಿಟ್ಟಿದ್ದರು. ಇಂದಿಗೂ ಯೋಗಿ ಅವರನ್ನ ಲೂಸ್ ಮಾದ ಯೋಗೇಶ್ ಎಂದೇ ಕರೆಯುತ್ತಾರೆ.

    ಸೂರಿ ಚಿತ್ರದಲ್ಲಿ ವಿಲನ್ ಗಳೇ ಹೈಲೈಟ್

    ಸೂರಿ ಚಿತ್ರದಲ್ಲಿ ವಿಲನ್ ಗಳೇ ಹೈಲೈಟ್

    ಮೊಟ್ಟೆ, ಜಂಗ್ಲಿ, ಕಡ್ಡಿಪುಡಿ, ಮಾಮು...ಹೀಗೆ ದುನಿಯಾ ಸೂರಿ ನಿರ್ದೇಶನದ ಚಿತ್ರಗಳಲ್ಲಿ ವಿಲನ್ ಹೆಸರುಗಳೇ ಹೈಲೈಟ್ ಆಗಿರುತ್ತೆ. ಈಗ ಡಾಲಿ, ಚಿಟ್ಟೆ, ಕಾಕ್ರೋಚ್ ಇವೆಷ್ಟೇ ಅಲ್ಲದೇ, ಬೇಬಿ ಕೃಷ್ಣ ಆಗಿ ದೇವನಾಥ, ಅಂಕಲ್ ಆಗಿ ಸಚ್ಚು ಕೂಡ ಟಗರು ಚಿತ್ರದಲ್ಲಿ ನಟಿಸಿದ್ದಾರೆ.

    English summary
    Century Star shivarajkumar starrer tagaru movie has releasing on february 23rd all over karnataka. movie directed by suniya soori and dhananjay, vasishta simha also played important role in movie.
    Thursday, February 22, 2018, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X