»   » ಶಿವಣ್ಣನ ಫೇವರೆಟ್ ಚಿತ್ರಮಂದಿರದಲ್ಲಿ 'ಟಗರು' ಆಗಮನ

ಶಿವಣ್ಣನ ಫೇವರೆಟ್ ಚಿತ್ರಮಂದಿರದಲ್ಲಿ 'ಟಗರು' ಆಗಮನ

Posted By:
Subscribe to Filmibeat Kannada
ಟಗರು ಯಾವ ಯಾವ ಚಿತ್ರಮಂದಿರದಲ್ಲಿ ರಿಲೀಸ್ ಆಗ್ತಿದೆ ಗೊತ್ತಾ ? | Filmibeat Kannada

'ಟಗರು' ಸಿನಿಮಾ ಇದೇ ತಿಂಗಳು 23ಕ್ಕೆ ರಿಲೀಸ್ ಆಗುತ್ತಿದೆ. ಇಷ್ಟು ದಿನ ಸಿನಿಮಾಗಾಗಿ ಕಾಯುತ್ತಿದ್ದ ಶಿವಣ್ಣನ ಅಭಿಮಾನಿಗಳು ಇನ್ನೂ ಕೆಲವೇ ದಿನದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದಾರೆ. 'ಟಗರು' ರಿಲೀಸ್ ಆಗುವ ಬಹುತೇಕ ಚಿತ್ರಮಂದಿರಗಳು ಈಗ ಅನೌನ್ಸ್ ಆಗಿದೆ.

ಶಿವರಾಜ್ ಕುಮಾರ್ ಸಿನಿಮಾ ಅಂದರೆ ಎಲ್ಲ ಥಿಯೇಟರ್ ನಲ್ಲಿ ದೊಡ್ಡ ಕ್ರೇಜ್ ಇರುತ್ತದೆ. ಅದರಲ್ಲಿಯೂ ಗಾಂಧಿನಗರದ ಚಿತ್ರಮಂದಿರಗಳಲ್ಲಿ ಅವತ್ತು ಅಕ್ಷರಶಃ ಹಬ್ಬದ ವಾತಾವರಣ ಇರುತ್ತದೆ. ಅದೇ ಕಾರಣಕ್ಕೆ 'ಟಗರು' ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಿತ್ತು.

'ಟಗರು' ನೋಡಲು ದುಬೈನಿಂದ ಬರ್ತಿದ್ದಾರೆ 'ಶಿವ' ಭಕ್ತರು.!

ಅಂದಹಾಗೆ, ಆ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಟಗರು' ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇನ್ನೂ ಸಂತೋಷ್ ಶಿವಣ್ಣನ ಫೇವರೆಟ್ ಚಿತ್ರಮಂದಿರ. ಅವರ ಎಷ್ಟೊ ಸಿನಿಮಾಗಳು ಅಲ್ಲಿ ನೂರು ದಿನವನ್ನು ಪೂರೈಸಿದೆ. ಇತ್ತೀಚಿಗಷ್ಟೆ ರಿಲೀಸ್ ಆದ 'ಮಫ್ತಿ' ಕೂಡ ಅಲ್ಲಿಯೇ ತೆರೆಗೆ ಬಂದಿತ್ತು.

Tagaru movie will be releasing in Santhosh theater

ಇನ್ನೂ 'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದಲ್ಲಿದೆ.

English summary
Kannada actor Shiva Rajkumar's 'Tagaru' movie will be releasing in Santhosh theater. The movie is directed by Duniya Suri.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X