ಫೆಬ್ರವರಿಗೆ ಶಿಫ್ಟ್ ಆಯ್ತು 'ಟಗರು' ಸಿನಿಮಾದ ರಿಲೀಸ್

By Naveen

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಕ್ರೇಜ್ ಜೋರಾಗಿದೆ. ಶಿವಣ್ಣನ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. ಮೊದಲು ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಜನವರಿಗೆ ಮುಂದಕ್ಕೆ ಹೋಗಿತ್ತು. ಆದರೆ ಮತ್ತೆ 'ಟಗರು' ಬಿಡುಗಡೆಯ ದಿನಾಂಕ ಪೋಸ್ಟ್ ಪೋನ್ ಆಗಿದೆ. ಫೆಬ್ರವರಿ 9ಕ್ಕೆ ಸಿನಿಮಾ ರಾಜ್ಯಾದಂತ್ಯ ರಿಲೀಸ್ ಆಗಲಿದೆ.

'ಮಫ್ತಿ' ಸಿನಿಮಾದ ನಂತರ ಶಿವಣ್ಣನ 'ಟಗರು' ಬರುತಿದ್ದು ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅನೇಕ ವಿಶೇಷಗಳು ಸಿನಿಮಾದಲ್ಲಿ ಇದ್ದು, 'ಕಡ್ಡಿಪುಡಿ' ನಂತರ ಸೂರಿ ಮತ್ತು ಶಿವಣ್ಣ ಕಾಂಬಿನೇಶನ್ ಮುಂದುವರೆದಿದೆ. ಮಾನ್ವಿತಾ ಮತ್ತು ಭಾವನ ಚಿತ್ರದ ನಾಯಕಿ ಆಗಿದ್ದಾರೆ. ಶ್ರೀ ಕಾಂತ್ 'ಟಗರು' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

'Tagaru' movie will be releasing on February 9th.

ಇಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಧನಂಜಯ್ ಮತ್ತು ವಸಿಷ್ಟ ಸಿಂಹ ಸಾಥ್ ನೀಡಿದ್ದಾರೆ. ಈಗಾಗಲೇ 'ಟಗರು' ಹಾಡುಗಳ ದೊಡ್ಡ ಸೌಂಡ್ ಮಾಡಿದೆ. ಚರಣ್ ರಾಜ್ ಸಂಗೀತ ಹೊಸ ಕಿಕ್ ನೀಡಿದೆ.

'ಟಗರು' ಪ್ರಚಾರಕ್ಕಾಗಿ ಶಿವಣ್ಣನ ಫೋಟೋ ಇರುವ ಸ್ಟ್ಯಾಂಡಿಗಳನ್ನ ಚಿತ್ರಮಂದಿರ ಹಾಗೂ ಮಾಲ್ ಗಳಲ್ಲಿ ನಿಲ್ಲಿಸಲು ನಿರ್ಧರಿಸಿದ್ದು, 8 ಅಡಿಯ ಸ್ಟ್ಯಾಂಡಿಗಳು ಈಗಾಗಲೇ ರೆಡಿ ಆಗಿವೆ. ಅವುಗಳ ಮುಂದೆ ಫೋಟೋ ತೆಗೆಸಿಕೊಂಡು 'ಟಗರು' ಫೇಸ್ ಬುಕ್ ಪೇಜ್ ಗೆ ಅಭಿಮಾನಿಗಳು ಕಳುಹಿಸಬಹುದಾಗಿದೆ.

More from Filmibeat

English summary
Shiva Rajkumar's 'Tagaru' movie will be releasing on February 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X