ಟಗರು ಪಲ್ಯ ನಾಗಭೂಷಣ್ ಗೆ ಕೂಡಿ ಬಂತು ಕಂಕಣ ಭಾಗ್ಯ ; ಯಾರು ಹುಡುಗಿ.. ಎಲ್ಲಿ ಮದುವೆ..?

ಹಾಸ್ಯ ನಟನಿಂದ ನಾಯಕನಾಗಿ ಬಡ್ತಿ ಪಡೆದವರು ನಾಗಭೂಷಣ್. ನಿತ್ಯ ನಿರಂತರ ಪ್ರಯತ್ನಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಹಾಗೂ ಮಾನವನ್ನ ಸಂಪಾದಿಸಿರುವ ನಾಗಭೂಷಣ್, ಸದ್ಯಕ್ಕೆ ತಮ್ಮ ಅತ್ಯಾಪ್ತ ಸ್ನೇಹಿತ ಡಾಲಿ ಧನಂಜಯ್ ನಿರ್ಮಾಣದ ವಿದ್ಯಾಪತಿ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹೊಸದೊಂದು ಅವತಾರದಲ್ಲಿ ನಿಮ್ಮೆಲ್ಲರ ಮನ ತಣಿಸಲು ತಯಾರಿ ಮಾಡಿಕೊಳ್ತಿದ್ದಾರೆ. ಇದರ ನಡುವೆ ನಾಗಭೂಷಣ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಹೊರ ಬಿದ್ದಿದೆ.

ಇತ್ತೀಚಿಗೆ ಕಾರು ಅಪಘಾತದ ಪ್ರಕರಣದಿಂದ ಮಾನಸಿಕ ನೆಮ್ಮದಿಯನ್ನ ಕೆಡಿಸಿಕೊಂಡಿದ್ದ ನಾಗಭೂಷಣ್, ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ಮೂಲಕ ಬದುಕಿನ ಮತ್ತೊಂದು ಅಧ್ಯಾಯವನ್ನ ನಾಗಭೂಷಣ್ ಆರಂಭ ಮಾಡ್ತಿದ್ದಾರೆ.

Tagaru palya fame Nagabhushana to tie knot with

ಪೂಜಾ ಪ್ರಕಾಶ್, ನಾಗಭೂಷಣ್ ಅವರ ಕೈಯನ್ನ ಹಿಡಿಯುತ್ತಿರುವ ಹುಡುಗಿ. ವಿಶೇಷ ಅಂದರೆ ಪೂಜಾ ಪ್ರಕಾಶ್ ಕೂಡ ಆರ್ಟಿಸ್ಟ್. ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್ ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಪೂಜಾ ಇಲ್ಲಿಯವರೆಗೆ ಅನೇಕ ಕಲಾವಿದರ ಚಿತ್ರವನ್ನೂ ಕೂಡ ಬಿಡಿಸಿದ್ದಾರೆ.ಮಿಕ್ಕಂತೆ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಅವರ ಮದುವೆಯ ಕುರಿತು ಹೆಚ್ಚಿನ ಗುಟ್ಟು ಇನ್ನೂ ರಟ್ಟಾಗಿಲ್ಲ. ಇಬ್ಬರದ್ದೂ ಅರೆಂಜ್ ಮ್ಯಾರೇಜಾ ಅಥವಾ ಲವ್ ಮ್ಯಾರೇಜಾ ಅನ್ನುವುದಕ್ಕೂ ಉತ್ತರ ಇಲ್ಲ. ಮದುವೆ ಯಾವಾಗ.. ? ಎಲ್ಲಿ..? ಎಂಬ ಕುರಿತು ಹೆಚ್ಚಿನ ಮಾಹಿತಿ ಇಲ್ಲ.

ಸದ್ಯಕ್ಕೆ ಪೂಜಾ ಕಲ್ಯಾಣ ಹ್ಯಾಶ್ ಟ್ಯಾಗ್ ಅಡಿ ಆಮಂತ್ರಣ ಪತ್ರಿಕೆಯೊಂದು ವೈರಲ್ ಆಗಿದೆ. ನವ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

More from Filmibeat

English summary
Nagabhushana, who is known for his work in Ikkat, Tagaru palya, kousalya supraja rama is all set to tie knot with pooja prakash
Read more about: wedding ಮದುವೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X