ಅಟೆನ್ಷನ್ ಪ್ಲೀಸ್.. ಮತ್ತೆ ಬರ್ತಿದ್ದಾನೆ ಟಗರು ಶಿವ! ಟಗರು 2ಗೆ ನಿರ್ದೇಶಕ ಯಾರು?

ಇಂದು ( ಜುಲೈ 12 ) ಕನ್ನಡ ಸಿನಿ ರಸಿಕರ ಪಾಲಿಗೆ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಏಕೆಂದರೆ ಇಂದು ಕನ್ನಡ ಚಲಚಿತ್ರರಂಗದ ಕಿಂಗ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ.

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಶಿವರಾಜ್‌ಕುಮಾರ್ ಅಭಿಮಾನಿಗಳು ಕಳೆದ ಮೂರ್ನಾಲ್ಕು ದಿನಗಳಿಂದಲೇ ಸಿದ್ಧತೆಯನ್ನು ನಡೆಸಿಕೊಂಡಿದ್ದು, ಮಧ್ಯರಾತ್ರಿಯಿಂದಲೇ ಶಿವಣ್ಣನ ನಿವಾಸಕ್ಕೆ ಕೇಕ್, ಹಾರ ತೆಗೆದುಕೊಂಡು ಹೋಗಿ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಶಿವರಾಜ್‌ಕುಮಾರ್ ಜತೆ ಸೆಲೆಬ್ರೇಟ್ ಮಾಡಿದ್ದಾರೆ.

Tagaru sequel Tagaru 2 announced on the occasion of Shivarajkumar birthday

ಹೀಗೆ ಒಂದೆಡೆ ಅಭಿಮಾನಿಗಳು ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್ ನಟಿಸುತ್ತಿರುವ ಮುಂದಿನ ಚಿತ್ರಗಳ ತಂಡಗಳು ತಮ್ಮ ನಟನ ಹುಟ್ಟುಹಬ್ಬದ ದಿನದಂದು ವಿಶೇಷ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಂತಸ ಹಾಗೂ ಸರ್‌ಪ್ರೈಸ್‌ಗೆ ಒಳಗಾಗುವಂತೆ ಮಾಡಿದ್ದಾರೆ.

ಈ ದಿನದಂದು ಶಿವರಾಜ್‌ಕುಮಾರ್ ನಟಿಸಲಿರುವ ಹಲವಾರು ಚಿತ್ರಗಳ ಅಪ್‌ಡೇಟ್ ಹೊರಬಿದ್ದಿದ್ದು, ಅದರಲ್ಲಿ ಬಹುಮುಖ್ಯವಾಗಿ ಹೆಚ್ಚು ಸದ್ದು ಮಾಡುತ್ತಿರುವುದು ಘೋಸ್ಟ್ ಚಿತ್ರ. ಹೌದು, ಈ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದ್ದು, ಇಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಬಿಗ್ ಡ್ಯಾಡಿ ಟೀಸರ್ ಸಹ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಹೀಗೆ ಘೋಸ್ಟ್ ಚಿತ್ರ ತನ್ನ ಟೀಸರ್ ಮೂಲಕ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಚಿತ್ರದ ಪೋಸ್ಟರ್ ಶಿವರಾಜ್‌ಕುಮಾರ್ ಅಭಿಮಾನಿಗಳನ್ನು ತನ್ನತ್ತ ಸೆಳೆದಿದೆ ಹಾಗೂ ಕುತೂಹಲ ಕೆರಳಿಸಿದೆ. ಹೌದು, ಲಹರಿ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಗರು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟರ್ ಮೇಲೆ 'ಅಟೆನ್ಷನ್ ಹೀ ಈಸ್ ಕಮಿಂಗ್ ಬ್ಯಾಕ್' ಎಂದು ಬರೆದುಕೊಂಡಿದೆ.

ಈ ಮೂಲಕ ಟಗರು ಎರಡನೇ ಭಾಗ ಬಿಡುಗಡೆಯಾಗಲಿದೆಯಾ ಎಂಬ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೇ ಲಹರಿ ಫಿಲ್ಮ್ಸ್ ಈ ಅಪ್‌ಡೇಟ್ ಏನಿರಬಹುದು ಊಹಿಸುತ್ತಿರಿ ಎಂದು ಸಿನಿ ರಸಿಕರು ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಈ ಪೋಸ್ಟರ್ ಹಾಗೂ ಬರಹವನ್ನು ಕಂಡ ಕೂಡಲೇ ಇದು ಟಗರು 2 ಚಿತ್ರದ ಅಪ್‌ಡೇಟ್ ಎಂಬುದನ್ನು ಸಿನಿ ರಸಿಕರು ಊಹಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಖುಷಿ ಹೊರಹಾಕಿದ್ದಾರೆ. ಈ ಚಿತ್ರಕ್ಕೆ ಟಗರು ಚಿತ್ರವನ್ನು ನಿರ್ಮಿಸಿದ್ದ ಕೆಪಿ ಶ್ರೀಕಾಂತ್ ಒಡೆತನದ ವೀನಸ್ ಎಂಟರ್‌ಟೈನ್‌ಮೆಂಟ್ಸ್ ಬಂಡವಾಳ ಹೂಡಲಿದೆ. ಇಷ್ಟು ಮಾಹಿತಿಯನ್ನು ಬಿಟ್ಟರೆ ಪೋಸ್ಟರ್‌ನಲ್ಲಿ ಹೆಚ್ಚೇನೂ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳದೇ ಇದ್ದು, ನಿರ್ದೇಶಕರು ಯಾರಾಗಬಹುದು ಎಂಬ ಕುತೂಹಲ ಕೆರಳಿದೆ.

ಹೌದು, ಈ ಪೋಸ್ಟರ್‌ನಲ್ಲಿ ಎಲ್ಲಿಯೂ ಸಹ ಸೂರಿ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಟಗರು 2 ಕಥೆಯನ್ನು ಸೂರಿ ಬಿಟ್ಟರೆ ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ಸಿನಿ ರಸಿಕರು ಈ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳುವುದು ಖಚಿತ ಎನ್ನಲಾಗುತ್ತಿದೆ.

ಈ ಚಿತ್ರದ ಜತೆಗೆ ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್, ಭೈರತಿ ರಣಗಲ್ ಚಿತ್ರಗಳ ಪೋಸ್ಟರ್‌ಗಳೂ ಸಹ ಸಿನಿ ರಸಿಕರಿಗೆ ಕಿಕ್ ನೀಡುತ್ತಿದ್ದು, ಶಿವರಾಜ್‌ಕುಮಾರ್ ಕೈನಲ್ಲಿರುವ ಈ ಸೀಕ್ವೆಲ್ ಚಿತ್ರಗಳ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುಕೊಂಡಿದೆ.

More from Filmibeat

English summary
Tagaru sequel Tagaru 2 announced on the occasion of Shivarajkumar birthday. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X