ಅರಮನೆ ಮೈದಾನದಲ್ಲಿ 'ಟಗರು' 125 ದಿನದ ಅದ್ದೂರಿ ಕಾರ್ಯಕ್ರಮ
'ಟಗರು' ಸಿನಿಮಾ ನೂರು ದಿನಗಳನ್ನು ದಾಟಿದೆ. ಈ ವರ್ಷ ನೂರು ದಿನ ಪೂರೈಸಿದ ಮೊದಲ ಕನ್ನಡ ಸಿನಿಮಾ ಇದಾಗಿದೆ. ಈ ಸಂಭ್ರಮವನ್ನು ಚಿತ್ರತಂಡ ಅದ್ದೂರಿ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುವ ಪ್ಲಾನ್ ಮಾಡಿದೆ.
'ಟಗರು' ಸಿನಿಮಾ ಸದ್ಯ 16ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನಲೆಯಲ್ಲಿ 125 ದಿನದ ಸಂಭ್ರಮಾಚರಣೆಯನ್ನು ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. 'ಟಗರು' ಚಿತ್ರದ ಈ ಅದ್ದೂರಿ ಕಾರ್ಯಕ್ರಮ ಇದೇ ಜೂನ್ 23 ರಂದು ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ನಡೆಯಲಿದೆ. ಸಂಜೆ ಐದು ಗಂಟೆಗೆ ಕಾರ್ಯಕ್ರಮ ಶುರು ಆಗಲಿದೆ.

ಈ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ದಿಗ್ಗಜರು, ಪ್ರಮುಖ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಜೊತೆಗೆ ಇಡೀ 'ಟಗರು' ಟೀಂ, ತಂತ್ರಜ್ಞರು, ಪ್ರದರ್ಶಕರು, ವಿತರಕರು ಸಹ ಇರಲಿದ್ದಾರೆ.

ಅಂದಹಾಗೆ, ಇತ್ತೀಚಿಗಷ್ಟೆ 'ಟಗರು' ಸಿನಿಮಾದ ನೂರು ದಿನದ ಸಂಭ್ರಮಾಚರಣೆ ನಗರದ ಸಂತೋಷ್ ಚಿತ್ರಮಂದಿರದ ಮುಂದೆ ನಡೆಯಿತು. ಇನ್ನು 'ಟಗರು' ಗೆದ್ದ ಖುಷಿಯಲ್ಲಿಯೇ 'ಟಗರು 2' ಸಿನಿಮಾ ಮಾಡುತ್ತಿರುವ ಸೂರಿ ಆ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ರನ್ನು ಒಂದು ಮಾಡಲಿದ್ದಾರೆ.


Click it and Unblock the Notifications











