twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್ ಎಫೆಕ್ಟ್: ಕಿಸ್ಸಿಂಗ್ ದೃಶ್ಯಗಳಿಗೂ ಬಿತ್ತು ಬ್ರೇಕ್

    |

    Recommended Video

    ವೈರಸ್ ಹರಡದಂತೆ ಎಚ್ಚರಿಕೆಯಿಂದಿರಲು ಕಲಾವಿದರಿಗೆ ಸೂಚನೆ | Virus | Kiss | Scene | Banned

    ಇಡಿ ವಿಶ್ವವನ್ನೆ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಈಗಾಗಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಚೀನಾದಲ್ಲಿ ಸಾವಿರಾರು ಮಂದಿಗೆ ಸೋಂಕು ತಗುಲಿದ್ದು, ವೈರಸ್ ನಿಂದ ಬಳಲುತ್ತಿದ್ದಾರೆ. ಈ ಕೊರೊನಾ ವೈರಸ್ ಈಗ ಸಿನಿರಂಗದವರನ್ನು ನಿದ್ದೆ ಗೆಡಿಸಿದೆ. ಈ ಬಗ್ಗೆ ಹೆಚ್ಚು ಎಚ್ಚರವಹಿಸಿರುವ ತೈವಾನ್ ಸರ್ಕಾರ ಈಗ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಚುಂಬನ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ.

    ತೈವಾನ್ ನ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಮುನ್ನೆಚ್ಚರಿಗೆ ಕ್ರಮಗಳಲ್ಲಿ ಇದು ಕೂಡ ಒಂದಾಗಿದೆ. ಈ ಬಗ್ಗೆ ಈಗಾಗಲೆ ಧಾರಾವಾಹಿ ಮತ್ತು ಸಿನಿಮಾ ತಯಾರಿಕರಿಗೆ ಸಲಹೆ ನೀಡಿದ್ದಾರಂತೆ. ಚುಂಬನ ದೃಶ್ಯಗಳಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಇಂತಹ ನಿರ್ಧಾರ ಕೈಗೊಂಡಿದೆ.

    'ಕೊರೊನಾ' ವೈರಸ್ ನಾಶಮಾಡಲು ಔಷಧಿ ಹಿಡಿದು ಚೀನಾಗೆ ಹೋದ ನಟಿ ರಾಖಿ'ಕೊರೊನಾ' ವೈರಸ್ ನಾಶಮಾಡಲು ಔಷಧಿ ಹಿಡಿದು ಚೀನಾಗೆ ಹೋದ ನಟಿ ರಾಖಿ

    ಇನ್ನು ಸಿನಿಮಾದಲ್ಲಿನ ಇಂತಹ ದೃಶ್ಯಗಳು ನಿಜ ಜೀವನದಲ್ಲೂ ಹೆಚ್ಚು ಜನರನ್ನು ಪ್ರಚೋದಿಸಬಹುದು ಎನ್ನುವ ಕಾರಣಕ್ಕೆ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸರ್ಕಾರ ಸೂಚಿಸಿದೆಯಂತೆ. ಅಲ್ಲದೆ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡದಂತೆಯೂ ಸಲಹೆ ನೀಡಿದೆ.

    Taiwan Advised To Tv Series And Movies Cut Down The Kissing Scene

    ಈಗಾಗಲೆ ಖ್ಯಾತ ಧಾರಾವಾಹಿ 'ಗೋಲ್ಡನ್​ ಸಿಟಿ'ಯಲ್ಲಿ ಕಿಸ್ಸಿಂಗ್​ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದ ಇಬ್ಬರು ಕಲಾವಿದರಿಗೆ ಸರ್ಕಾರ ಎಚ್ಚರಿಕೆ ಕೊಟ್ಟಿದೆಯಂತೆ. ಚುಂಬನ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ನಟಿದಸದಂತೆ ಹೇಳಿದೆಯಂತೆ.

    ಕೊರೊನಾ ವೈರಸ್ ಆರ್ಭಟ ಎಲ್ಲೆಲ್ಲಿ ಹೆಚ್ಚಾಗಿದೆಯು ಅಲ್ಲಿ ಎಲ್ಲಾ ಕಡೆ ಕಂಪೆನಿ, ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಜನರು ಮನೆಯಿಂದ ಹೊರಬರದೆ ಗೃಹ ಬಂಧನದಲ್ಲಿಯೆ ಜೀವಿಸುವಂತಾಗಿದೆ. ಈಗಾಗಲೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು ಕೊರೊನಾ ವೈರಸ್ ಹರಡುತ್ತಿದೆ. ಹಾಗಾಗಿ ತೈವಾನ್ ಸರ್ಕಾರ ಸಿನಿರಂಗದ ಕಡೆಯು ಗಮನ ಹರಿಸಿದ್ದು ಚುಂಬನ ದೃಶ್ಯಗಳಿಗೆ ಕತ್ತರಿ ಹಾಕಿದೆ.

    English summary
    Taiwan advised to Tv series and movies cut down the kissing scene.
    Tuesday, February 11, 2020, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X