For Quick Alerts
  ALLOW NOTIFICATIONS  
  For Daily Alerts

  ಬರ್ತಿದೆ 'ತಾಜ್ ಮಹಲ್ 2' : ಚಂದ್ರು ಡೈರೆಕ್ಷನ್ ಅಲ್ಲ

  |

  'ತಾಜ್ ಮಹಲ್' ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದ ಮೂಲಕ ನಿರ್ದೇಶಕ ಆರ್ ಚಂದ್ರು ತಮ್ಮ ಕೆರಿಯರ್ ಶುರು ಮಾಡಿದ್ದರು. ಅಜಯ್ ರಾವ್ ಗೆ ದೊಡ್ಡ ಬ್ರೇಕ್ ನೀಡಿದ್ದು ಕೂಡ ಇದೇ ಸಿನಿಮಾ.

  ಈಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಕನ್ನಡದಲ್ಲಿ ಬರುತ್ತಿದೆ. 'ತಾಜ್ ಮಹಲ್ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರು ಆಗಿದ್ದು, ಜೂನ್ 27ಕ್ಕೆ ಮುಹೂರ್ತ ಆಗಲಿದೆ.

  ಪ್ರೇಮ್ 'ಏಕ್ ಲವ್ ಯಾ' ಸಿನಿಮಾಗೆ ಸಿಕ್ಕಳು ಹೊಸ ನಾಯಕಿ

  'ತಾಜ್ ಮಹಲ್ 2' ಎಂದ ತಕ್ಷಣ ಆರ್ ಚಂದ್ರು ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರಾ..? ಆ ಚಿತ್ರದ ತಂಡವೇ ಇಲ್ಲಿಯೂ ಇರುತ್ತದೆಯೇ ಎನ್ನುವ ಕುತೂಹಲ ಮೂಡುವುದು ಸಹಜ. ಆದರೆ, ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶನ ಮಾಡುತ್ತಿಲ್ಲ.

  ಹಾಗಾದರೆ, 'ತಾಜ್ ಮಹಲ್ 2' ಚಿತ್ರದ ನಿರ್ದೇಶಕರು ಯಾರು?, ಹಾಗೂ ಚಿತ್ರದ ಕೆಲವು ವಿವರ ಮುಂದಿದೆ ಓದಿ..

  ದೇವರಾಜ್ ಕುಮಾರ್ ನಿರ್ದೇಶಕ

  ದೇವರಾಜ್ ಕುಮಾರ್ ನಿರ್ದೇಶಕ

  ದೇವರಾಜ್ ಕುಮಾರ್ 'ತಾಜ್ ಮಹಲ್ 2' ಸಿನಿಮಾದ ನಿರ್ದೇಶಕರಾಗಿದ್ದಾರೆ. ಈ ಹಿಂದೆ ಇವರು 'ಡೇಂಜರ್ ಜೋನ್' 'ನಿಶ್ಯಬ್ದ 2', ಹಾಗೂ 'ಅನುಷ್ಕಾ' ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದರು. ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಇರುವ ದೇವರಾಜ್ ಈಗ ತಮ್ಮ ನಾಲ್ಕನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ.

  ಅದೇ ಹೆಸರು ಏಕೆ?

  ಅದೇ ಹೆಸರು ಏಕೆ?

  'ತಾಜ್ ಮಹಲ್ 2' ಟೈಟಲ್ ಏಕೆ ಎನ್ನುವ ಕುತೂಹಲ ಕೆಲವರಿಗೆ ಇರಬಹುದು. ಅದಕ್ಕೂ ದೇವರಾಜ್ ಉತ್ತರ ನೀಡಿದ್ದಾರೆ. ಇದೊಂದು ಲವ್ ಸ್ಟೋರಿಯಾಗಿದ್ದು, ಒಂದು ಒಳ್ಳೆಯ ಟೈಟಲ್ ಬೇಕು ಎಂದು 'ತಾಜ್ ಮಹಲ್ 2' ಎಂಬ ಹೆಸರನ್ನು ಇಡಲಾಗಿದೆಯಂತೆ. ಇದೊಂದು ಎಮೋಷನಲ್ ಲವ್ ಕಥೆ ಹೊಂದಿದೆಯಂತೆ.

  ನಟನಾಗಿ ಬದಲಾದ ನಿರ್ದೇಶಕ

  ನಟನಾಗಿ ಬದಲಾದ ನಿರ್ದೇಶಕ

  ವಿಶೇಷ ಅಂದರೆ, ಈ ಸಿನಿಮಾಗೆ ದೇವರಾಜ್ ಅವರೇ ನಾಯಕರಾಗಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಡೈರೆಕ್ಷನ್ ಓಕೆ.. ಹೀರೋ ಏಕೆ ಎಂದರೆ, ''ನಾನು ಹೀರೋ ಆಗಬೇಕು ಎನ್ನುವ ಹಠ ಬಹಳ ವರ್ಷಗಳಿಂದ ಇತ್ತು. ಹಾಗಾಗಿ ಪ್ರಯತ್ನ ಮಾಡುತ್ತಿದ್ದೇನೆ. ಯಾರು ಹುಟ್ಟುತಾನೆ ಹೀರೋ ಆಗಿರಲ್ಲ.'' ಎನ್ನುತ್ತಾರೆ ದೇವರಾಜ್.

  ಬಾಲಿವುಡ್ ನಟ ಮುಕೇಶ್ ತಿವಾರಿ

  ಬಾಲಿವುಡ್ ನಟ ಮುಕೇಶ್ ತಿವಾರಿ

  ಸಿನಿಮಾದ ತಾರ ಬಳಗದಲ್ಲಿ ಬಾಲಿವುಡ್ ನಟ ಮುಕೇಶ್ ತಿವಾರಿ ಸಹ ಇರಲಿದ್ದಾರಂತೆ. ಸಂಮೃದ್ಧಿ ಶುಕ್ಲ ನಾಯಕಿಯಾಗಿದ್ದಾರೆ. ಉಳಿದಂತೆ, ತಬಲಾ ನಾಣಿ, ಜಿಮ್ ರವಿ, ಕಾಕ್ರೋಜ್ ಖ್ಯಾತಿಯ ಸುದಿ, ಕಡ್ಡಿಪುಡಿ ಚಂದ್ರು ಸಿನಿಮಾದಲ್ಲಿ ಇರಲಿದ್ದಾರೆ. ಶ್ರೀ ಗಂಗಾಬಿಕ ಫಿಲ್ಮ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

  English summary
  Taj Mahal 2 kannada movie will be will be launching june 27th. The movie is directed by Devaraj Kumar. Devaraj Kumar and Samriddhi Shukla in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X