ಮತ್ತೆ ಬರುತ್ತಿದೆ 'ತಾಜ್ ಮಹಲ್', ಆದರೆ ಪೂಜಾ ಗಾಂಧಿ-ಅಜಯ್ ರಾವ್ ಇಲ್ಲ!

ಪೂಜಾ ಗಾಂಧಿ-ಅಜಯ್ ರಾವ್ ನಟಿಸಿದ್ದ 'ತಾಜ್ ಮಹಲ್' ಸಿನಿಮಾ 2008 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ನಿರ್ದೇಶಕನಾಗಿ ಆರ್.ಚಂದ್ರುಗೆ ಜೀವ ನೀಡಿದ ಸಿನಿಮಾ ಅದು. ಅಜಯ್‌ ರಾವ್ ವೃತ್ತಿ ಜೀವನದಲ್ಲಿಯೂ ಮಹತ್ವದ ಸಿನಿಮಾ ಅದಾಯಿತು.

ಈಗ ಮತ್ತೆ 'ತಾಜ್ ಮಹಲ್' ಸಿನಿಮಾ ಬರುತ್ತಿದೆ. ಆದರೆ ಈ ಸಿನಿಮಾದಲ್ಲಿ ಅಜಯ್ ರಾವ್ ಇಲ್ಲ, ಪೂಜಾ ಗಾಂಧಿಯೂ ಇಲ್ಲ. ಈ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಸಹ ಮಾಡಿಲ್ಲ. ಬದಲಿಗೆ ಸಿನಿಮಾ ಆಸಕ್ತ ತಂಡವೊಂದು 'ತಾಜ್ ಮಹಲ್ 2' ಹೆಸರಿನ ಸಿನಿಮಾ ನಿರ್ಮಿಸಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಮೇಕಪ್ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ದೇವರಾಜ್ ಕುಮಾರ್ ನಂತರದ ದಿನಗಳಲ್ಲಿ ನಿರ್ದೇಶಕರಾದರು. ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಲು ಆರಂಭಿಸಿದರು. ‌ಪ್ರಸ್ತುತ ಅವರು‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರ ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬಿಡುಗಡೆ ದಿನಾಂಕ ಘೋಷಿಸಿದ ಭಾಮ ಹರೀಶ್

ಬಿಡುಗಡೆ ದಿನಾಂಕ ಘೋಷಿಸಿದ ಭಾಮ ಹರೀಶ್

ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಬಿಡುಗಡೆ "ತಾಜ್ ಮಹಲ್ 2 " ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ‌ ಚಿತ್ರತಂಡಕ್ಕೆ ಶುಭ ಕೋರಿದರು.

ಕೊರೊನಾ ಇಂದ ಸಿನಿಮಾ ತಡವಾಯ್ತು

ಕೊರೊನಾ ಇಂದ ಸಿನಿಮಾ ತಡವಾಯ್ತು

''2019ರಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು. 2020 ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಬಂದ ಕೊರೋನದಿಂದ ಚಿತ್ರ ಸಿದ್ದವಾಗಲು ವಿಳಂಬವಾಯಿತು. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಜವಳಿ ಸಚಿವರಾದ ಶಂಕರ್ ಪಾಟೀಲ್ ಬಿಡುಗಡೆ ಮಾಡಿದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ'' ಎಂದರು ಸಿನಿಮಾದ ನಾಯಕ, ನಿರ್ದೇಶಕ ಎರಡೂ ಆಗಿರುವ ದೇವರಾಜ್ ಕುಮಾರ್. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಉಮೇಶ್ ಬಣಕಾರ್ ಅವರು ಸೇರಿದಂತೆ ಇಲ್ಲಿ ನೆರೆದಿರುವ ಎಲ್ಲಾ ಗಣ್ಯರ ಸಹಕಾರ ನೆನೆದು ಧನ್ಯವಾದ ತಿಳಿಸಿದರು.

ಮಹಿಳೆಯೊಬ್ಬರಿಂದ ನಿರ್ಮಾಣ

ಮಹಿಳೆಯೊಬ್ಬರಿಂದ ನಿರ್ಮಾಣ

''ಮಹಿಳೆಯೊಬ್ಬರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಹೆಮ್ಮೆಯ ವಿಚಾರ. ಈ ಚಿತ್ರಕ್ಕೆ ‌ಒಳ್ಳೆಯದಾಗಲಿ'' ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹಾರೈಸಿದರು.

Recommended Video

Sathish Ninasam | ಡೆಲಿವರಿ ಬಾಯ್ಸ್‌ಗೆ ಧೈರ್ಯ ತುಂಬಿದ ಸತೀಶ್ ನೀನಾಸಂ | Petromax *Sandalwood
ಹಲವು ಅತಿಥಿಗಳು ಹಾಜರಿದ್ದರು

ಹಲವು ಅತಿಥಿಗಳು ಹಾಜರಿದ್ದರು

ನಿರ್ಮಾಪಕ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್, ಲಿಖಿತ್ ಫಿಲಂಸ್ ನ ರಮೇಶ್ ಬಾಬು, ಪ್ರದರ್ಶಕ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಅಭಿನಯಿಸಿರುವ ಕಾಕ್ರೋಜ್ ಸುಧಿ, ವಿಕ್ಚರಿ ವಾಸು, ರಾಜದೇವ್ ಹಾಗೂ ಹಾಡು ಬರೆದಿರು ಮನ್ವರ್ಷಿ ನವಲಗುಂದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

More from Filmibeat

English summary
Taj Mahal 2 Kannada movie will release on September 02. Devaraj Kumar directed and acted as hero in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X