ಕ್ಲೋಸ್ ಲುಕ್ ನಲ್ಲಿ ತಾರೆ ರಾಧಿಕಾ ಕುಮಾರಸ್ವಾಮಿ!

By ರವಿಕಿಶೋರ್

ತಾರೆ ರಾಧಿಕಾ ಕುಮಾರಸ್ವಾಮಿ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಈಗ ಅವರ ಕೈಯಲ್ಲಿ ಸಾಲುಸಾಲು ಚಿತ್ರಗಳಿವೆ. ಒಂದು ಕಡೆ ತೆಲುಗು, ಇನ್ನೊಂದು ಕಡೆ ಕನ್ನಡ. ಹೀಗೆ ಎರಡೂ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಈಗ ಫುಲ್ ಬಿಜಿ.

ಇತ್ತೀಚೆಗೆ ಅವರ 'ರುದ್ರತಾಂಡ' ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ರಾಧಿಕಾ ಕುಮಾರಸ್ವಾಮಿ ಅವರು ಶ್ವೇತ ವರ್ಣದ ಚೂಡಿದಾರ್ ನಲ್ಲಿ ಕಂಗೊಳಿಸುತ್ತಿದ್ದರು. ಇನ್ನೂ ಈಗಷ್ಟೇ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೇನೋ ಎಂಬಂತೆ ಅವರು ಕಾಣುತ್ತಿದ್ದರು. [ವೆರೈಟಿ ಅವತಾರಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ]

ರಾಧಿಕಾ ಅವರಿಗೆ ಮದುವೆಯಾದ ಮೇಲೆ ಅವರ ಹೆಸರಿನ ಜೊತೆಗೆ ತಮ್ಮ ಪತಿ ಕುಮಾರಸ್ವಾಮಿ ಹೆಸರೂ ಸೇರಿಕೊಳ್ತು. ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ ಗಂಡ ಮಕ್ಕಳ ಫೋಟೋಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಆಗಾಗ ಪ್ರಕಟಿಸುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. 'ರುದ್ರತಾಂಡವ' ಪ್ರೆಸ್ ಮೀಟ್ ಅವರ ಕ್ಲೋಸ್ ಲುಕ್ ನೋಡೋಣ ಬನ್ನಿ...

ರಾಧಿಕಾ ಚೂಡಿದಾರ್ ಗೆ ಒಪ್ಪುವ ಕಿವಿಯೋಲೆ

ರಾಧಿಕಾ ಚೂಡಿದಾರ್ ಗೆ ಒಪ್ಪುವ ಕಿವಿಯೋಲೆ

ಏನ್ ಮ್ಯಾಚಿಂಗ್ ನೋಡಿ. ಶ್ವೇತವರ್ಣದ ಚೂಡಿದಾರ್ ಗೆ ಒಪ್ಪುವಂತಹ ಕಿವಿಯೋಲೆ. ರಾಧಿಕಾ ಅವರಿಗೆ ಮೇಕಪ್ ಬಗ್ಗೆ ಇರುವ ಕಾಳಜಿ ಅವರ ಅಭಿರುಚಿಗೆ ಈ ಫೋಟೋ ಕನ್ನಡಿ ಹಿಡಿಯುತ್ತದೆ.

ಮದರಂಗಿ ಬಣ್ಣದ ನೆಯಿಲ್ ಪಾಲಿಶ್

ಮದರಂಗಿ ಬಣ್ಣದ ನೆಯಿಲ್ ಪಾಲಿಶ್

ಬೆರಳಿಗೆ ಒಪ್ಪುವಂತಹ ನೆಯಿಲ್ ಪಾಲಿಶ್ ಅವರ ಸೌಂದರ್ಯವನ್ನು ಇಮ್ಮಡಿಸಿದೆ. ಮದರಂಗಿ ರಂಗಿನ ಮುಂದೆ ಇನ್ಯಾವ ಬಣ್ಣ ತಾನೆ ಚೆಂದ ಕಾಣಲು ಸಾಧ್ಯ.

ಸಭ್ಯತೆಯ ಚೌಕಟ್ಟು ಮೀರದಂತೆ ಎಚ್ಚರಿಕೆ

ಸಭ್ಯತೆಯ ಚೌಕಟ್ಟು ಮೀರದಂತೆ ಎಚ್ಚರಿಕೆ

ಈಗ ತಾರೆಗಳು ಎಂತೆಂಥಹ ಡ್ರೆಸ್ ಹಾಕಿಕೊಂಡು ಬರುತ್ತಾರೆ ಎಂಬುದು ನೋಡಿಯೋ ಇರುತ್ತೀರಾ. ಆದರೆ ರಾಧಿಕಾ ಮಾತ್ರ ಇದಕ್ಕೆ ಅಪವಾದ. ಸರಳವಾಗಿ ಚೂಡಿದಾರ್ ನಲ್ಲಿ ಬಂದರೂ ಎಲ್ಲರ ಕಣ್ಣು ಕುಕ್ಕಿದರು.

ಅಬ್ಬಬ್ಬಾ ಎಂಥಹಾ ಮುಗ್ಧ ನೋಟ

ಅಬ್ಬಬ್ಬಾ ಎಂಥಹಾ ಮುಗ್ಧ ನೋಟ

ಚಿತ್ರರಂಗಕ್ಕೆ ಅಡಿಯಿಟ್ಟು ಸಾಕಷ್ಟು ವರ್ಷಗಳಾಗಿದ್ದರು ರಾಧಿಕಾ ಅವರ ಮಾತಿನಲ್ಲಿ ಈಗಲೂ ಅದೇ ಮುಗ್ಧತೆಯನ್ನು ಕಾಣಬಹುದು.

ಫ್ಲಳಫಳ ಹೊಳೆದ ರಾಧಿಕಾ ಕುಮಾರಸ್ವಾಮಿ ಬೆಳ್ಳಿಕಾಲುಂಗುರ

ಫ್ಲಳಫಳ ಹೊಳೆದ ರಾಧಿಕಾ ಕುಮಾರಸ್ವಾಮಿ ಬೆಳ್ಳಿಕಾಲುಂಗುರ

ಇದುವರೆಗೂ ರಾಧಿಕಾ ಕುಮಾರಸ್ವಾಮಿ ತಮ್ಮ ಗಂಡ ಮಕ್ಕಳ ಜೊತೆಗಿನ ಫೋಟೋ ನೋಡಿರುತ್ತೀರಾ. ಆದರೆ ಈ ಫೋಟೋದಲ್ಲಿ ಅವರ ಬೆಳ್ಳಿಕಾಲುಂಗುರವನ್ನು ಕಾಣಬಹುದು.

ಗುರುದೇಶಪಾಂಡೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಗುರುದೇಶಪಾಂಡೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ರುದ್ರತಾಂಡವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ರಾಜಾಹುಲಿ' ನಿರ್ದೇಶಿಸಿದ್ದ ಗುರು ದೇಶಪಾಂಡೆ. ಈ ಚಿತ್ರವನ್ನು ಶ್ರೀಸಾಯಿ ಗೋಲ್ಡ್ ಪ್ಯಾಲೇಜ್ ಮಾಲೀಕ ಟಿ.ಎ.ಶರವಣ ಹಾಗೂ ದಿನೇಶ್ ನಿರ್ಮಿಸುತ್ತಿದ್ದಾರೆ. ಚಿತ್ರದ ಚಿರಂಜೀವಿ ಸರ್ಜಾ ನಾಯಕ ನಟನಾದರೆ ಉಳಿದ ಪಾತ್ರವರ್ಗಗಳಲ್ಲಿ ರವಿಶಂಕರ್, ಗಿರೀಶ್ ಕಾರ್ನಾಡ್ ಮುಂತಾದವರಿದ್ದಾರೆ.

ತಮಿಳಿನ ಪಾಂಡಿಯನಾಡು ಚಿತ್ರದ ರೀಮೇಕ್

ತಮಿಳಿನ ಪಾಂಡಿಯನಾಡು ಚಿತ್ರದ ರೀಮೇಕ್

ತಮಿಳಿನ ಯಶಸ್ವಿ ಚಿತ್ರ ಪಾಂಡಿಯನಾಡು (2013) ಚಿತ್ರದ ರೀಮೇಕ್ ಇದಾಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ರಾಧಿಕಾ ಅವರದು ಟೀಚರ್ ಪಾತ್ರ.

ದುಂಡುಮುಖದ ಚೆಲುವೆ ಭರ್ಜರಿ ಕಂಬ್ಯಾಕ್

ದುಂಡುಮುಖದ ಚೆಲುವೆ ಭರ್ಜರಿ ಕಂಬ್ಯಾಕ್

ಅಣ್ಣ ತಂಗಿಯಂತಹಾ ಸೆಂಟಿಮೆಂಟ್ ಪಾತ್ರಗಳಿಂದ ಗ್ಲಾಮರಸ್ ರೋಲ್ ವರೆಗೂ ಅದ್ಭುತ ಅಭಿನಯ ನೀಡಿದ ರಾಧಿಕಾ ನಾವು ಯಾರಿಗೂ ಕಮ್ಮಿಯಿಲ್ಲ ಅಂತ ಕನ್ನಡದ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿದ್ರು. ಈಗ ಈ ದುಂಡುಮುಖದ ಚೆಲುವೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.

More from Filmibeat

English summary
Take a close look at actress Radhika Kumaraswamy photo! The actress playing a lead role in Kannada movie 'Rudratandava' opposite to Chiranjeevi Sarja. Radhika's toe ring, earrings, White Churidar Glamour Look every think is perfectly matched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X