twitter
    For Quick Alerts
    ALLOW NOTIFICATIONS  
    For Daily Alerts

    ಎಷ್ಟೋ ಜನ ಸ್ಟಾರ್ ಮಕ್ಳು ಮನೆಗೆ ಹೋಗ್‌ಬಿಟ್ಟಿದ್ದಾರೆ; ನೆಪೋಟಿಸಂ ಎನ್ನುವವರ ವಿರುದ್ಧ ಕಿಡಿಕಾರಿದ ರಕ್ಷಕ್!

    |

    ನೆಪೋಟಿಸಂ.. ಈ ಹಿಂದಿನಿಂದಲೂ ಸ್ಟಾರ್‌ಗಳ ಮಕ್ಕಳು ಚಿತ್ರರಂಗ ಪ್ರವೇಶಿಸಿದಾಗ ಟ್ರೋಲ್ ಮಾಡಲು ಬಳಸುತ್ತಾ ಬಂದಿರುವ ಒಂದು ಪದವಾಗಿದೆ. ಪ್ರತಿಭೆ ಇಲ್ಲದಿದ್ದರೂ ಅಪ್ಪ ಸ್ಟಾರ್, ಅಮ್ಮ ಸ್ಟಾರ್ ಎಂದು ಮಕ್ಕಳಿಗೆ ಅವಕಾಶ ಕೊಡುತ್ತಾರೆ ಎನ್ನುವ ಅಂಶವನ್ನೇ ನೆಪೋಟಿಸಂ ಎಂದು ಟ್ರೋಲ್ ಮಾಡುವ ನೆಟ್ಟಿಗರ ಗುಂಪು ಆರೋಪಿಸುತ್ತಾ ಬಂದಿದೆ.

    ಹೀಗೆ ಕೆಲವರು ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದನ್ನು ನೆಪೋಟಿಸಂ ಎಂದು ವಿರೋಧಿಸಿದರೆ ಇನ್ನೂ ಕೆಲವರು ಇದರಲ್ಲಿ ತಪ್ಪೇನಿದೆ ಟ್ಯಾಲೆಂಟ್ ಇದ್ದವರು ಬೆಳೆಯುತ್ತಾರೆ, ಇಲ್ಲದಿದ್ದವರು ತೆರೆಮರೆಗೆ ಸರಿಯುತ್ತಾರೆ ಬಿಡಿ ಎಂದು ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದಕ್ಕೆ ಬೆಂಬಲವನ್ನೂ ಸಹ ನೀಡಿದ್ದರು. ಇನ್ನು ಈ ನೆಪೋಟಿಸಂ ಚರ್ಚೆ ಕಳೆದ ವರ್ಷ ತುಸು ಹೆಚ್ಚಾಗಿಯೇ ನಡೆಯಿತು ಎನ್ನಬಹುದು. ಒಂದೆಡೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಲಾಂಚ್ ಮಾಡಲು ಮುಂದಾದರೆ, ಮತ್ತೊಂದೆಡೆ ಗುರು ಶಿಷ್ಯರು ಚಿತ್ರದಲ್ಲಿ ಹಲವಾರು ಕಲಾವಿದರ ಮಕ್ಕಳಿಗೆ ಅವಕಾಶ ನೀಡಲಾಗಿತ್ತು.

    2022ರಲ್ಲಿ ಸಾಲು ಸಾಲು ಸೋಲು; ಅಪ್ಪ - ಮಕ್ಕಳಿಗೆ ಇದು ಕೆಟ್ಟ ವರ್ಷ!2022ರಲ್ಲಿ ಸಾಲು ಸಾಲು ಸೋಲು; ಅಪ್ಪ - ಮಕ್ಕಳಿಗೆ ಇದು ಕೆಟ್ಟ ವರ್ಷ!

    ಅಷ್ಟೇ ಅಲ್ಲದೇ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಮತ್ತು ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಸಹ ಚಿತ್ರಗಳ ಅವಕಾಶ ಗಿಟ್ಟಿಸಿಕೊಂಡರು. ಹೀಗೆ ಸಾಲು ಸಾಲು ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಟ್ಟದ್ದರಿಂದ ಈ ಕುರಿತಾಗಿ ಟ್ರೋಲ್ ಕೂಡ ಹೆಚ್ಚಾಗಿತ್ತು. ಅದರಲ್ಲೂ ಗುರು ಶಿಷ್ಯರು ಚಿತ್ರವೊಂದರಲ್ಲಿಯೇ ಹೆಚ್ಚು ಸ್ಟಾರ್ ಮಕ್ಕಳಿಗೆ ಅವಕಾಶ ನೀಡಲಾಗಿದೆ ಎಂದು ಹಲವರು ಇದೊಂದು ನೆಪೋಟಿಸಂ ಚಿತ್ರ ಎಂದೇ ಕಾಲೆಳೆದಿದ್ದರು. ಈ ಕುರಿತಾಗಿ ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ 'ಎಂಜಿ ವರ್ಸ್' ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

    ನೆಪೋಟಿಸಂ ಎನ್ನುವವರ ವಿರುದ್ಧ ರಕ್ಷಕ್ ಕಿಡಿ

    ನೆಪೋಟಿಸಂ ಎನ್ನುವವರ ವಿರುದ್ಧ ರಕ್ಷಕ್ ಕಿಡಿ

    ಗುರು ಶಿಷ್ಯರು ಚಿತ್ರದಲ್ಲಿ ತಮಗೆ ಅವಕಾಶ ಲಭಿಸಿದ ಸಂದರ್ಭದ ಕುರಿತು ಮಾತನಾಡಿದ ರಕ್ಷಕ್ ಆ ಸಮಯದಲ್ಲಿ ಕೆಲವರು ಸ್ಟಾರ್ ಮಕ್ಕಳು, ನೆಪೋಟಿಸಂ ಎಂದು ಕಾಲೆಳೆದದ್ದರ ವಿರುದ್ಧ ಕಿಡಿಕಾರಿದರು. ಗುರು ಶಿಷ್ಯರು ಚಿತ್ರದಲ್ಲಿ ಬರೀ ಸ್ಟಾರ್ ಮಕ್ಕಳೇ ಇದ್ದಾರೆ ಎಂದು ಕೆಲವರು ಕಿಡಿಕಾರಿದ್ದರು, ಆದರೆ ಆ ಚಿತ್ರದಲ್ಲಿ ಚಿತ್ರರಂಗದ ಹಿನ್ನೆಲೆ ಇಲ್ಲದ ಆರು ಹುಡುಗರಿಗೆ ಅವಕಾಶ ಕೊಟ್ಟಿರಲಿಲ್ವಾ ಎಂದು ಪ್ರಶ್ನೆ ಹಾಕಿದರು. ಹಾಗೂ ಆ ಮಕ್ಕಳು ಎಷ್ಟು ಕಷ್ಟ ಪಟ್ಟಿದ್ದರೋ ಅಷ್ಟೇ ಕಷ್ಟವನ್ನು ನಾವೂ ಸಹ ಪಟ್ಟಿದ್ದೇವೆ ಎಂದೂ ಸಹ ರಕ್ಷಕ್ ನೆಪೋಟಿಸಂ ವಿರುದ್ಧ ಬೇಸರ ಹೊರಹಾಕಿದರು.

    ಎಷ್ಟೋ ಜನ ಸ್ಟಾರ್ ಮಕ್ಕಳು ಮನೆಗೆ ಹೋಗಿದ್ದಾರೆ

    ಎಷ್ಟೋ ಜನ ಸ್ಟಾರ್ ಮಕ್ಕಳು ಮನೆಗೆ ಹೋಗಿದ್ದಾರೆ

    ಇನ್ನೂ ಮುಂದುವರೆದು ಮಾತನಾಡಿದ ಸ್ಟಾರ್ ಮಕ್ಕಳು ಎಂದು ಆರೋಪಿಸುತ್ತಾರೆ, ಎಲ್ಲೂ ಇಲ್ಲಿ ನಟನೆಯನ್ನೇ ಮಾಡುವುದು, ಇಂಡಸ್ಟ್ರಿ ಹುಟ್ಟಿದಾಗಿನಿಂದಲೂ ಬಂದಿರುವವರೆಲ್ಲರೂ ಸ್ಟಾರ್ ಮಕ್ಕಳಾ ಹಾಗಾದ್ರೆ, ಎಷ್ಟೋ ಜನ ಸ್ಟಾರ್ ಮಕ್ಕಳು ಅವಕಾಶ ಸಿಗದೇ ಮನೆಗೆ ಹೋಗಿದ್ದಾರೆ, ಚಿತ್ರರಂಗಕ್ಕೆ ಬಂದಮೇಲೆ ಮಾತ್ರ ಸ್ಟಾರ್ ಆಗಲು ಸಾಧ್ಯ, ಸ್ಟಾರ್ ಮಗ ಎಂಬ ಕಾರಣಕ್ಕೆ ಹೆಚ್ಚು ಅವಕಾಶ ಸಿಗಲ್ಲ ಎಂದು ರಕ್ಷಕ್ ತಿಳಿಸಿದರು.

    ಶ್ರಮ ಪಟ್ರೆ ಮಾತ್ರ ಗೆಲುವು

    ಶ್ರಮ ಪಟ್ರೆ ಮಾತ್ರ ಗೆಲುವು

    ಇನ್ನು ಜನ ಈವತ್ತಿನ ದಿನ ತುಂಬಾ ಬುದ್ಥಿವಂತರಿದ್ದಾರೆ ಎಂದ ರಕ್ಷಕ್ ಯಾವ ಕಲಾವಿದ ಏತಕ್ಕಾಗಿ ಬಂದಿದ್ದಾನೆ, ಇವನಲ್ಲಿ ನಿಜವಾಗಿಯೂ ಟ್ಯಾಲೆಂಟ್ ಇದೆಯಾ ಎಂಬುದನ್ನು ನೋಡ್ತಾರೆ, ನಾನು ಬುಲೆಟ್ ಪ್ರಕಾಶ್ ಮಗ ಎಂಬ ಕಾರಣಕ್ಕೆ ನನ್ನನ್ನು ಬೆಳೆಸಿಬಿಡುವುದಿಲ್ಲ, ಶ್ರಮದಿಂದ ಕೆಲಸ ಮಾಡಿದ್ರೆ ಮಾತ್ರ ಇಲ್ಲಿ ಬೆಲೆ, ಗೆಲುವು ಎಂದು ಹೇಳಿಕೆ ನೀಡಿದರು.

    English summary
    Talent must in industry nepotism wont work here says Rakshak Bullet Prakash. Read on
    Tuesday, January 10, 2023, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X