ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದ ತಮನ್ನಾ
Recommended Video

ನಟಿ ತಮನ್ನಾ ಭಾಟಿಯಾ ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ನಿಖಿಲ್ ಕುಮಾರ್ ಅಭಿಮಾನಯದ 'ಜಾಗ್ವಾರ್' ಸಿನಿಮಾದ ಮಸ್ತ್ ಹಾಡಿಗೆ ಮೈ ಚಳಿ ಬಿಟ್ಟು ಕುಣಿದಿದ್ದ ಈ ಕುವರಿ ಈಗ ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆ ಜಿ ಎಫ್' ಸಿನಿಮಾದ ವಿಶೇಷ ಹಾಡಿನಲ್ಲಿ ನಟಿ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಹಾಡಿಗಾಗಿ ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ, ತಮನ್ನಾ ಹಾಗೂ ನೊರಾ ಫತೇಹಿ ಈ ನಾಲ್ಕು ನಟಿಯರ ಹೆಸರು ಕೇಳಿ ಬಂದಿತ್ತು.

ಈ ಪೈಕಿ ಈಗ ತಮನ್ನಾ ಫೈನಲ್ ಆಗಿದ್ದಾರೆ. ಚಿತ್ರದಲ್ಲಿ ತಮನ್ನಾ ಕಾಣಿಸಿಕೊಳ್ಳುತ್ತಿರುವ ವಿಷಯವನ್ನು ಸ್ವತಃ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಕನ್ನಡದ ಹಳೆಯ ಹಾಡಿನಲ್ಲಿ ತಮನ್ನಾ ಸೊಂಟ ಬಳುಕಿಸಲಿದ್ದಾರೆ.

'ಜೋಕೆ ನಾನು ಬಳ್ಳಿಯ ಮಿಂಚು..' ಎಂಬ ಕನ್ನಡದ ಸೂಪರ್ ಹಿಟ್ ಗೀತೆಯನ್ನು ಮತ್ತೆ 'ಕೆ ಜಿ ಎಫ್' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. 1970 ರಲ್ಲಿ 'ಪರೋಪಕಾರಿ' ಚಿತ್ರದಲ್ಲಿ ಬಂದ ಈ ಹಾಡು ಇಂದಿಗೂ ಜನಪ್ರಿಯವಾಗಿದ್ದು, ಈ ಹಾಡನ್ನು ಚಿತ್ರದಲ್ಲಿ ರಿ ಕ್ರಿಯೇಟ್ ಮಾಡಲಾಗುತ್ತಿದೆ.


Click it and Unblock the Notifications











