ಕೊಹ್ಲಿ ಜೊತೆ ತಮನ್ನಾ ಡೇಟಿಂಗ್ ಮಾಡಿದ್ರಾ? ವರ್ಷಗಳ ನಂತರ ಮಿಲ್ಕಿ ಬ್ಯೂಟಿ ಟಾಕ್
Recommended Video

ಕ್ರಿಕೆಟಿಗ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾ ಅವರ ಜೊತೆ ಮದುವೆ ಆಗಿ ಖುಷಿ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದ್ರೆ, ಕೊಹ್ಲಿ ಮದ್ವೆಗೂ ಮುಂಚೆ ಕೆಲವು ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿಯಿತ್ತು.
ಅದರಲ್ಲೂ ಬಹುಭಾಷಾ ನಟಿ ತಮನ್ನಾ ಜೊತೆ ಕೊಹ್ಲಿ ಹೆಸರು ಹೆಚ್ಚು ಸುತ್ತಾಡಿತ್ತು. ಒಂದೇ ಜಾಹೀರಾತಿನಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರೂ ಕೂಡ. ಅಲ್ಲಿಂದ ಈ ಗಾಸಿಪ್ ಮತ್ತಷ್ಟು ಹೆಚ್ಚು ಸದ್ದು ಮಾಡಿತ್ತು. ಆದ್ರೆ, ಈ ಬಗ್ಗೆ ಇಬ್ಬರು ಕೂಡ ತಲೆಕೆಡಿಸಿಕೊಂಡಿರಲಿಲ್ಲ.
ಇದೀಗ, ತುಂಬಾ ವರ್ಷದ ನಂತರ ನಟಿ ತಮನ್ನಾ ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಮಿಲ್ಕಿ ಬ್ಯೂಟಿ ವಿರಾಟ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ, ಕೊಹ್ಲಿ ಮತ್ತು ತಮನ್ನಾ ಡೇಟ್ ಮಾಡಿದ್ರಾ? ಏನಂದ್ರು ತಮನ್ನಾ? ಮುಂದೆ ಓದಿ.....

ಕೊಹ್ಲಿ ಮತ್ತು ತಮನ್ನಾ ಡೇಟ್ ಮಾಡಿದ್ರಾ?
ಅದು 2012ರ ಸಮಯ. ಆಗಷ್ಟೇ ವಿರಾಟ್ ಕೊಹ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ಆಗಿ ಗುರುತಿಸಿಕೊಳ್ಳುತ್ತಿದ್ದರು. ಅಷ್ಟರಲ್ಲಾಗಲೇ ತಮನ್ನಾ ಖ್ಯಾತಿ ಗಳಿಸಿಕೊಂಡಿದ್ದ ನಟಿ. ಅಂತಹ ಸಮಯದಲ್ಲಿ ಇಬ್ಬರು ಒಂದು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಇವರಿಬ್ಬರ ಬಗ್ಗೆ ಹೊಸ ಹೊಸ ಸುದ್ದಿಗಳು ಹರಿದಾಡಲು ಆರಂಭವಾಗಿದ್ದವು.

ನಾಲ್ಕು ಮಾತಾಡಿರಬಹುದು ಅಷ್ಟೇ
ಈ ಜಾಹೀರಾತು ಮಾಡಬೇಕಾದರೇ ನಾನು ಕೊಹ್ಲಿ ಜೊತೆ ನಾಲ್ಕು ಮಾತಾಡಿರಬಹುದು ಅಷ್ಟೇ. ಅದಾದ ಬಳಿಕ ನಾನು ಕೊಹ್ಲಿ ಜೊತೆ ಮಾತಾಡಿಲ್ಲ ಮತ್ತು ಭೇಟಿ ಕೂಡ ಮಾಡಿಲ್ಲ'' ಎಂದು ನಟಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿ ಜಂಟಲ್ ಮ್ಯಾನ್
''ನಾನು ಕೆಲಸ ಮಾಡಿದ ಬಹುತೇಕ ನಟರ ಪೈಕಿ ವಿರಾಟ್ ಕೊಹ್ಲಿ ತುಂಬಾ ಉತ್ತಮ ಮತ್ತು ಅವರೊಬ್ಬರ ಜಂಟಲ್ ಮ್ಯಾನ್'' ಎಂದು ನಟಿ ತಮನ್ನಾ ಅನುಷ್ಕಾ ಪತಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ತಮನ್ನಾ ಮದ್ವೆ ಸುದ್ದಿ ಆಗ್ತಾನೆ ಇದೆ
ತಮನ್ನಾ ಮದುವೆ ಕುರಿತು ಆಗಾಗ ಸುದ್ದಿಯೊಂದು ಸದ್ದು ಮಾಡುತ್ತಿದೆ. ಸಾಫ್ಟವೇರ್ ಇಂಜಿನಿಯರ್ ಒಬ್ಬರನ್ನ ತಮನ್ನಾ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಬಟ್, ತಮನ್ನಾ ಮಾತ್ರ ಇದೆಲ್ಲಾ ಬರಿ ಸುಳ್ಳು ಎಂದು ಕಡ್ಡಿಮುರಿದಾಗ ಹೇಳಿದ್ದಾರೆ.

ಕೊಹ್ಲಿ ಮತ್ತು ಅನುಷ್ಕಾ ಜೋಡಿ
ಇನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗ ಬಗ್ಗೆ ಹೇಳಲೇಬೇಕು. 2017ರ ಡಿಸೆಂಬರ್ ನಲ್ಲಿ ಮದುವೆಯಾಗಿದ್ದ ಇವರಿಬ್ಬರ ಜೋಡಿ ಇತರೆ ಜೋಡಿಗಳಿಗೆ ಮಾದರಿಯಾಗಿದೆ. ಮದುವೆಯಾದಾಗನಿಂದ ಇಲ್ಲಿಯವರೆಗೂ ಇವರಿಬ್ಬರ ನಡುವಿನ ಪ್ರೀತಿಗೆ ಪ್ರತೀಕವಾಗಿ ಅನೇಕ ಫೋಟೋಗಳು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗ್ತಾನೆ ಇರ್ತಾವೆ. ಈ ಫೋಟೋಗಳೇ ಸಾಕು, ಇವರಿಬ್ಬರ ದಾಂಪತ್ಯ ಜೀವನ ಹೇಗಿದೆ ಎಂದು ಹೇಳಲು.


Click it and Unblock the Notifications











