For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗ ಒಳ್ಳೆಯದಾ-ಕೆಟ್ಟದ್ದಾ: ತಮನ್ನಾ ಕೊಟ್ಟರು ಉತ್ತರ

  |

  ಚಿತ್ರರಂಗದ ಪಾಲಿಗೆ ಅಷ್ಟೇನೂ ಒಳ್ಳೆಯ ವರ್ಷವಲ್ಲ 2020. ಡ್ರಗ್ಸ್ ಪ್ರಕರಣ, ಕೆಲವು ನಟ-ನಟಿಯರ ಆತ್ಮಹತ್ಯೆ, ಮುಂದುವರೆದ ಪುರುಷ ಪ್ರಾಬಲ್ಯ, ಲೈಂಗಿಕ ಸೋಷಣೆ ಪ್ರಕರಣಗಳು ಎಲ್ಲವೂ ಈ ವರ್ಷ ಭಾರತೀಯ ಚಿತ್ರರಂಗವನ್ನು ಕಾಡಿವೆ. ಹಾಗಾದರೆ ಚಿತ್ರರಂಗ ಎಂಬುದು ಒಳ್ಳೆಯಾ-ಕೆಟ್ಟದ್ದಾ?

  ನಟಿ ತಮನ್ನಾ ಸಹ ಇಂಥಹುದೇ ಪ್ರಶ್ನೆಯನ್ನು ಇತ್ತೀಚಿನ ಸಂದರ್ಶನದಲ್ಲಿ ಎದುರಿಸಿದ್ದಾರೆ. ಕಾಸ್ಟಿಂಗ್ ಕೌಚ್, ಪುರುಷ ಕೇಂದ್ರಿತ ಉದ್ಯಮ, ಡ್ರಗ್ಸ್ ಪ್ರಕರಣ ಹಲವು ವಿಷಯಗಳ ಬಗ್ಗೆ ಮಿಲ್ಕಿ ಬ್ಯೂಟಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

  ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ

  'ಎಲ್ಲಾ ಉದ್ಯಮಗಳಲ್ಲಿಯೂ ಸಮಸ್ಯೆಗಳಿವೆ. ವಿವಿಧ ಕ್ಷೇತ್ರದ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರು, ಸಿಬ್ಬಂದಿಗಳು ಸಹ ಸಮಸ್ಯೆಗಳನ್ನು ಹೊಂದಿರುತ್ತಾರೆ' ಎಂದು ಸಿನಿಮಾ ಉದ್ಯಮವನ್ನು ಮೆದುವಾಗಿ ಸಮರ್ಥಿಸಿಕೊಂಡಿದ್ದಾರೆ ತಮನ್ನಾ.

  ನಟ-ನಟಿಯರು ಜವಾಬ್ದಾರಿಯಿಂದ ವರ್ತಿಸುತ್ತಾರೆ: ತಮನ್ನಾ

  ನಟ-ನಟಿಯರು ಜವಾಬ್ದಾರಿಯಿಂದ ವರ್ತಿಸುತ್ತಾರೆ: ತಮನ್ನಾ

  'ಚಿತ್ರರಂಗ ಎಲ್ಲರ ಕಣ್ಣಿಗೆ ಸುಲಭಕ್ಕೆ ಬೀಳುವ, ಸೆಳೆಯುವ ಉದ್ಯಮ ಹಾಗಾಗಿ ಎಲ್ಲರ ಕಣ್ಣು ಇದರ ಮೇಲೆ ಬೀಳುತ್ತದೆ, ಇಲ್ಲಿನ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ನಟ-ನಟಿಯರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆಯಾದ್ದರಿಂದ ಅವರು ಹೆಚ್ಚು ಜಾಗೃತರಾಗಿ, ಜವಾಬ್ದಾರಿಯುತ ವರ್ತಿಸುತ್ತಾರೆ' ಎಂದಿದ್ದಾರೆ ತಮನ್ನಾ.

  ಸಾಮಾಜಿಕ ಜಾಲತಾಣಗಳ ಬಗ್ಗೆ ತಮನ್ನಾ ಮಾತು

  ಸಾಮಾಜಿಕ ಜಾಲತಾಣಗಳ ಬಗ್ಗೆ ತಮನ್ನಾ ಮಾತು

  ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿರುವ ತಮನ್ನಾ, 'ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಾಗೂ ಅದನ್ನು ಹಂಚಿಕೊಳ್ಳುವ ಸರ್ವ ಸ್ವಾತಂತ್ರ್ಯವಿದೆ. ಒಬ್ಬರು ಮತ್ತೊಬ್ಬರ ಅಭಿಪ್ರಾಯವನ್ನು ಒಪ್ಪಲೇ ಬೇಕು ಎಂದೇನಿಲ್ಲ, ಆದರೆ ಮತ್ತೊಬ್ಬರ ದೂಷಣೆ ಮಾಡುವುದು ಅಕ್ಷಮ್ಯ' ಎಂದಿದ್ದಾರೆ ತಮನ್ನಾ.

  ತಮನ್ನಾ ಜೊತೆ 'ಲವ್ ಮಾಕ್ ಟೇಲ್' ಚಿತ್ರೀಕರಣ ಆರಂಭಿಸಿದ ನಿರ್ದೇಶಕ ನಾಗಶೇಖರ್ತಮನ್ನಾ ಜೊತೆ 'ಲವ್ ಮಾಕ್ ಟೇಲ್' ಚಿತ್ರೀಕರಣ ಆರಂಭಿಸಿದ ನಿರ್ದೇಶಕ ನಾಗಶೇಖರ್

  ಜನರ ಪ್ರೀತಿಗೆ ಸದಾ ಋಣಿ: ತಮನ್ನಾ

  ಜನರ ಪ್ರೀತಿಗೆ ಸದಾ ಋಣಿ: ತಮನ್ನಾ

  ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿರುವ ತಮನ್ನಾ, 'ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ಯಾವುದೇ ಗಾಡ್‌ಫಾದರ್ ಇಲ್ಲದೆ, ಮೆಂಟರ್‌ಗಳಿಲ್ಲದೆ ಇಲ್ಲಿದೆ ಬಂದಿದ್ದೇನೆ. ನನಗೆ ಯಾವುದೇ ಕೆಟ್ಟ್ ಅನುಭವಗಳಾಗಿಲ್ಲ. ಜನರು ಸಾಕಷ್ಟು ಪ್ರೀತಿ ತೋರಿಸಿದ್ದಾರೆ' ಎಂದಿದ್ದಾರೆ ತಮನ್ನಾ.

  ಕವಿತೆ ಬರೆಯುವ ಹವ್ಯಾಸ ಇದೆಯಂತೆ ತಮನ್ನಾಗೆ

  ಕವಿತೆ ಬರೆಯುವ ಹವ್ಯಾಸ ಇದೆಯಂತೆ ತಮನ್ನಾಗೆ

  ನಟಿ ತಮನ್ನಾ ಕೆಲವು ದಿನಗಳ ಹಿಂದಷ್ಟೆ ಸಮಂತಾ ಜೊತೆ, ಸ್ಯಾಮ್-ಜ್ಯಾಮ್ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು, ತಮ್ಮ ಭಗ್ನ ಪ್ರೇಮ, ಕವಿತೆ ಬರೆಯುವ ಹವ್ಯಾಸ ಇನ್ನೂ ಹಲವು ವಿಷಯಗಳ ಬಗ್ಗೆ ತಮನ್ನಾ ಮಾತನಾಡಿದ್ದಾರೆ. ತಮನ್ನಾ-ಸಮಂತಾ ರ ಶೋ ಸಖತ್ ಹಿಟ್ ಆಗಿದೆ.

  ಮಜಾ ಟಾಕೀಸ್ ಬಿಟ್ಟು ಹೊಸ ಉದ್ಯಮ ಆರಂಭ ಮಾಡಿದ ಶ್ವೇತಾ ಚೆಂಗಪ್ಪ | Filmibeat Kannada
  English summary
  Actress Tamannaah Bhatia talked about problems in movie industry. She said actors are more aware because people always watching them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X