ತಮನ್ನಾ- ವಿಜಯ್ ವರ್ಮಾ ಲವ್ ಬ್ರೇಕಪ್? ಮಿಲ್ಕಿ ಬ್ಯೂಟಿ ಗೂಡಾರ್ಥದ ಪೋಸ್ಟ್

ಸಿನಿಮಾ ತಾರೆಯರ ಲವ್, ಬ್ರೇಕಪ್, ಮ್ಯಾರೇಜ್, ಡಿವೋರ್ಸ್ ಸುದ್ದಿ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಯಾರು ಯಾರೊಟ್ಟಿಗೆ ಯಾವಾಗ ಡೇಟ್ ಮಾಡುತ್ತಾರೆ? ದೂರಾಗುತ್ತಾರೆ ಎಂದು ಹೇಳುವುದು ಕಷ್ಟ. ಇನ್ನು ಸೋಶಿಯಲ್ ಮೀಡಿಯಾ ಬಂದಮೇಲೆ ಇಲ್ಲ ಸಲ್ಲದ ಊಹಾಪೋಹಗಳು ಶುರುವಾಗಿಬಿಡುತ್ತದೆ.

ಕೆಲವರು ಸೋಶಿಯಲ್ ಮೀಡಿಯಾ ತಮ್ಮ ಕನ್ನಡಿ ಎಂದು ಭಾವಿಸುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಚಾರಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ತೆರೆದಿಡುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ ತಾರೆಯರ ನೆಚ್ಚಿನ ಸೋಶಿಯಲ್ ಮೀಡಿಯಾ ತಾಣವಾಗಿಬಿಟ್ಟಿದೆ. ನಟಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕಳೆದ ವರ್ಷ ಆಕೆ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿರುವುದು ಬಹಿರಂಗವಾಗಿತ್ತು.

Tamannaah Bhatia s Cryptic Post Sparks breakup Rumours With Vijay varma

ಕೆಲ ತೆಲುಗು ಸಿನಿಮಾಗಳಲ್ಲಿ ಕೂಡ ವಿಜಯ್ ವರ್ಮಾ ನಟಿಸಿದ್ದಾರೆ. 'ಲಸ್ಟ್ ಸ್ಟೋರೀಸ್'-2 ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಒಟ್ಟೊಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿದ್ದರು. ಆದರೆ ಇತ್ತೀಚೆಗೆ ತಮನ್ನಾ ಮಾಡಿರೋ ಪೋಸ್ಟ್‌ವೊಂದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ಮಿಲ್ಕಿ ಬ್ಯೂಟಿ ಮಾಡಿರುವ ಗೂಡಾರ್ಥದ ಪೋಸ್ಟ್ ನೋಡಿ ಲವ್ ಬ್ರೇಕಪ್ ಆಯ್ತಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. "ಪ್ರೀತಿಸಲ್ಪಡುವುದರ ರಹಸ್ಯ ಪ್ರೀತಿಸುವುದು ಅಂತ ನಾನು ಭಾವಿಸುತ್ತೇನೆ. ಅದೇ ರೀತಿ ಆಸಕ್ತಿದಾಯಕವಾಗಿರುವುದರ ರಹಸ್ಯವೆಂದರೆ ಆಸಕ್ತಿ ಹೊಂದಿರುವುದು. ಇತರರು ನಿಮ್ಮಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದರ ರಹಸ್ಯವೆಂದರೆ ಇತರರಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದು. ಇನ್ನು ಸ್ನೇಹಿತನನ್ನು ಹೊಂದುವ ರಹಸ್ಯವೆಂದರೆ ಸ್ನೇಹಿತನಾಗಿರುವುದು" ಎಂದು ತಮನ್ನಾ ಬರೆದುಕೊಂಡಿದ್ದರು.

ಈ ಪೋಸ್ಟ್ ನೋಡಿದವರು ಅರೇ ಇದ್ದಕ್ಕಿಂದಂತೆ ಪ್ರೀತಿ ಬಗ್ಗೆ ತಮನ್ನಾ ಈ ರೀತಿ ಯಾಕೆ ಪೋಸ್ಟ್ ಮಾಡಿದರು. ಈ ಮೂಲಕ ಏನು ಹೇಳಲು ಹೊರಟಿದ್ದಾರೆ ಅಂತೆಲ್ಲಾ ಏನೇನೋ ಊಹಿಸಿಕೊಳ್ಳುತ್ತಿದ್ದಾರೆ. ಆದರೆ ಬ್ರೇಕಪ್ ಎನ್ನುವುದೆಲ್ಲಾ ಸುಳ್ಳು. ಒಂದು ವೇಳೆ ನಿಜವೇ ಆಗಿದ್ದರೆ ಆಕೆ ಹೇಳುತ್ತಾರೆ ಎನ್ನುತ್ತಿದ್ದಾರೆ.

ಇತ್ತೀಚೆಗೆ ತಮನ್ನಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುವುದು ಹೆಚ್ಚಾಗಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸದ್ಯ 'ಓಡೆಲ- 2' ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ. ಕಳೆದ ವರ್ಷ ಬಂದ 'ಸ್ತ್ರೀ- 2' ಹಾಗೂ 'ವೇದ' ಚಿತ್ರದ ಐಟಂ ಸಾಂಗ್‌ನಲ್ಲಿ ತಮನ್ನಾ ಮಿಂಚಿದ್ದರು.

2024ರ ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ- ವಿಜಯ್ ವರ್ಮಾ ಲವ್ ಸ್ಟೋರಿ ರಿವೀಲ್ ಆಗಿತ್ತು. ಜೋಡಿ ಒಟ್ಟಿಗೆ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಈ ವೀಡಿಯೋ ಲೀಕ್ ಆಗಿತ್ತು. ಬಳಿಕ ಇಬ್ಬರು ಈ ವಿಚಾರ ಒಪ್ಪಿಕೊಂಡಿದ್ದರು. ಇನ್ನು ಪ್ರೇಯಸಿಯನ್ನು ವಿಜಯ್ ವರ್ಮಾ 'ಟಮಾಟರ್' ಎಂದು ಪ್ರೀತಿಯಿಂದ ಕರೆಯುತ್ತಾರೆ.

ಮುಂಬೈ ಬೆಡಗಿ ತಮನ್ನಾಗೆ ತಮಿಳು, ತೆಲುಗು ಸಿನಿಮಾಗಳಲ್ಲಿ ಮೊದಲಿಗೆ ಸಕ್ಸಸ್ ಸಿಕ್ಕಿತ್ತು. ಆ ಬಳಿಕ ಆಕೆ ಮತ್ತೆ ಬಾಲಿವುಡ್‌ನಲ್ಲಿ ಮೆರೆದರು. ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದಾಗಲೇ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯಲು ಆರಂಭಿಸಿದರು. ಕನ್ನಡದಲ್ಲಿ 'ಜಾಗ್ವಾರ್' ಹಾಗೂ 'ಕೆಜಿಎಫ್- 1' ಚಿತ್ರದ ಡ್ಯಾನ್ಸಿಂಗ್‌ ನಂಬರ್‌ಗಳಲ್ಲಿ ಮಿಲ್ಕಿ ಬ್ಯೂಟಿ ಕುಣಿದು ರಂಗೇರಿಸಿದರು. ದಕ್ಷಿಣದ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು ಸಕ್ಸಸ್ ಕಂಡಿದ್ದಾರೆ.

More from Filmibeat

English summary
Tamannaah Bhatia shares strange post about love, hints break-up rumours with Vijay varma?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X