For Quick Alerts
  ALLOW NOTIFICATIONS  
  For Daily Alerts

  ತಮನ್ನಾಗೆ ರಾಮ್ ಚರಣ್ ಪತ್ನಿ ಕೊಟ್ಟಿದ್ದು ವಜ್ರದ ಉಂಗುರನಾ?

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿರು ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೆ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿ ಸಂಭ್ರಮಿಸಿದೆ.

  ಸುಮಾರು 350 ಕೋಟಿ ಬಜೆಟ್ ನಲ್ಲಿ ಸೈರಾ ಸಿನಿಮಾ ತಯಾರಾಗಿದೆ ಎಂದು ಅಂದಾಜಿಸಲಾಗಿದೆ. ಅಂದ್ಹಾಗೆ, ಈ ಚಿತ್ರವನ್ನ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ ನಿರ್ಮಿಸಿದ್ದರು. ಸಿನಿಮಾ ಗೆದ್ದ ಖುಷಿಯಲ್ಲಿ ನಿರ್ಮಾಪಕ ರಾಮ್ ಚರಣ್ ಅವರ ಪತ್ನಿ ಉಪಾಸನಾ ನಟಿ ತಮನ್ನಾಗೆ ದುಬಾರಿ ಉಡುಗೊರೆ ನೀಡಿದ್ದಾರೆ.

  ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'

  ಈ ಉಡುಗೊರೆ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗದ ಇದು ವಜ್ರದ ಉಂಗುರ ಎಂದು ಸದ್ದು ಮಾಡ್ತಿದೆ. ಇದೀಗ, ಈ ಬಗ್ಗೆ ಸ್ವತಃ ತಮನ್ನಾ ಸ್ಪಷ್ಟೀಕರಣ ನೀಡಿದ್ದಾರೆ. ಹಾಗಿದ್ರೆ, ರಾಮ್ ಚರಣ್ ಪತ್ನಿ ತಮನ್ನಾಗೆ ನೀಡಿದ ಗಿಫ್ಟ್ ಏನು? ಮುಂದೆ ಓದಿ.....

  ವಜ್ರದ ಉಂಗುರ ಇರಬಹುದು!

  ವಜ್ರದ ಉಂಗುರ ಇರಬಹುದು!

  'ಸೈರಾ ನರಸಿಂಹ ರೆಡ್ಡಿ' ಚಿತ್ರದ ನಿರ್ಮಾಪಕ ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನ ಅವರಿಂದ, ತಮನ್ನಾ ಗಿಫ್ಟ್ ಪಡೆದುಕೊಂಡಿದ್ದಾರೆ. ಈ ಫೋಟೋವನ್ನ ಖುದ್ದು ಉಪಾಸನ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಆ ಉಡುಗೊರೆ ಏನು ಎಂಬುದು ಚರ್ಚೆಯಾಗಿದೆ. ಇದು ವಜ್ರದ ಉಂಗುರ ಇರಬಹುದು ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.

  ನಾ ನೋಡಿದ 'ಸೈರಾನಾ ನೋಡಿದ 'ಸೈರಾ": ಕಣ್ಮನ ಸೆಳೆಯುವ ಐತಿಹಾಸಿಕ ಮೆಗಾ ಧಾರವಾಹಿ

  ಉಂಗುರ ಅಲ್ಲ ಎಂದ ತಮನ್ನಾ

  ಉಂಗುರ ಅಲ್ಲ ಎಂದ ತಮನ್ನಾ

  ಉಪಾಸನಾ ಅವರು ಕೊಟ್ಟಿದ್ದು ವಜ್ರದ ಉಂಗುರ ಎಂದು ಚರ್ಚೆಯಾಗುತ್ತಿದ್ದಂತೆ ಈ ಬಗ್ಗೆ ಸ್ವತಃ ತಮನ್ನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಅದು ವಜ್ರದ ಉಂಗುರ ಅಲ್ಲ. ಅದು ಬಾಟಲ್ ಓಪನರ್ ಎಂದು ವದಂತಿಗೆ ಬ್ರೇಕ್ ಹಾಕಿದ್ದಾರೆ.

  'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?

  ಗಿಫ್ಟ್ ಕೊಟ್ಟಿದ್ದು ಯಾಕೆ?

  ಗಿಫ್ಟ್ ಕೊಟ್ಟಿದ್ದು ಯಾಕೆ?

  ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಭಾನುಮತಿ ಪಾತ್ರ ನಿರ್ವಹಿಸಿರುವ ತಮನ್ನಾ, ಅತ್ಯುದ್ಭತವಾಗಿ ನಟಿಸಿದ್ದಾರಂತೆ. ತಮನ್ನಾ ಅವರ ಅಭಿನಯಕ್ಕೆ ಮರುಳಾದ ಉಪಾಸನ ಅವರು ವಿಶೇಷವಾದ ಬಾಟಲ್ ಓಪನರ್ ನೀಡಿದ್ದಾರಂತೆ.

  ಚಿರು-ಸುದೀಪ್ ಜೋಡಿಯ ಸೈರಾ ನೋಡಿ ರಾಜಮೌಳಿ ಹೇಳಿದ್ದೇನು?ಚಿರು-ಸುದೀಪ್ ಜೋಡಿಯ ಸೈರಾ ನೋಡಿ ರಾಜಮೌಳಿ ಹೇಳಿದ್ದೇನು?

  ಲಕ್ಕಿ ಹೀರೋಯಿನ್

  ಲಕ್ಕಿ ಹೀರೋಯಿನ್

  ಮೆಗಾಸ್ಟಾರ್ ಕುಟುಂಬಕ್ಕೆ ತಮನ್ನಾ ಲಕ್ಕಿ ಹೀರೋಯಿನ್. ರಾಮ್ ಚರಣ್ ಅಥವಾ ಚಿರಂಜೀವಿ ಅವರ ಮುಂದಿನ ಚಿತ್ರಕ್ಕೆ ಮಿಲ್ಕಿಬ್ಯೂಟಿಯನ್ನೇ ನಾಯಕಿಯನ್ನಾಗಿಸಿ ಎಂದು ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ. ಇದಕ್ಕೂ ಮುಂಚೆ ಬಾಹುಬಲಿ ಚಿತ್ರದಲ್ಲಿ ಅವಂತಿಕಾ ಆಗಿ ಕಾಣಿಸಿಕೊಂಡಿದ್ದ ತಮನ್ನಾ, ಅಲ್ಲಿಯೂ ಅದ್ಭುತವಾಗಿ ನಟಿಸಿದ್ದರು.

  English summary
  Producer Ram charan teja wife upasana gave special gift to tamannaah bhatia for sye raa narasimha reddy success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X