Just In
Don't Miss!
- News
ಕೆಂಪುಕೋಟೆಯಲ್ಲಿ ಸಿಲುಕಿದ್ದ 300 ಕಲಾವಿದರನ್ನು ರಕ್ಷಿಸಿದ ಪೊಲೀಸರು
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!

'ಜೋಕೆ ನಾನು ಬಳ್ಳಿಯ ಮಿಂಚು...' - ಈ ಹಾಡು ಯಾವ ಕನ್ನಡಿಗ ತಾನೆ ಕೇಳಿಲ್ಲ ಹೇಳಿ...
ಆರ್.ಎನ್.ಜಯಗೋಪಾಲ್ ಸಾಹಿತ್ಯ ಇರುವ ಉಪೇಂದ್ರ ಕುಮಾರ್ ಸಂಗೀತ ಇರುವ ಎಲ್.ಆರ್.ಈಶ್ವರಿ ದನಿ ಇರುವ 'ಜೋಕೆ ನಾನು ಬಳ್ಳಿಯ ಮಿಂಚು' ಸಾರ್ವಕಾಲಿಕ ಚಾರ್ಟ್ ಬಸ್ಟರ್. ಈಗಲೂ ಈ ಹಾಡು ಪ್ಲೇ ಆದರೆ ತಲೆದೂಗುವವರ ಸಂಖ್ಯೆ ಲೆಕ್ಕವಿಲ್ಲದಷ್ಟು.
ಇದೀಗ 'ಜೋಕೆ ನಾನು ಬಳ್ಳಿಯ ಮಿಂಚು...' ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾ. ಇನ್ನೂ ಶೂಟಿಂಗ್ ಹಂತದಲ್ಲಿ ಇರುವ 'ಕೆ.ಜಿ.ಎಫ್' ಚಿತ್ರ ತಂಡದಿಂದ ನಿನ್ನೆಯಷ್ಟೇ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು.
ಅದೇನಪ್ಪಾ ಅಂದ್ರೆ, 'ಕೆ.ಜಿ.ಎಫ್' ಚಿತ್ರದ ಸ್ಪೆಷಲ್ ಸಾಂಗ್ ಗೆ ಮಿಲ್ಕಿ ಬ್ಯೂಟಿ ತಮನ್ನಾ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿತ್ತು. ಈಗ ತಮನ್ನಾ 'ಜೋಕೆ ನಾನು ಬಳ್ಳಿಯ ಮಿಂಚು..' ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಗಿರಗಿಟ್ಲೆ ಹೊಡೆಯುತ್ತಿದೆ. ಮುಂದೆ ಓದಿರಿ...

ಹಳೇ ಹಾಡಿಗೆ ಹೊಸ ರೂಪ
1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡಿಗೆ ಇದೀಗ 'ಕೆ.ಜಿ.ಎಫ್' ಸಿನಿಮಾದಲ್ಲಿ ಹೊಸ ರೂಪ ನೀಡಲಾಗುತ್ತಿದೆ. 48 ವರ್ಷಗಳ ಬಳಿಕ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ ರೀಕ್ರಿಯೇಟ್ ಮಾಡಲಾಗುತ್ತಿದೆ.
ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದ ತಮನ್ನಾ

ಅಂದು ವಿಜಯಲಲಿತಾ, ಇಂದು ತಮನ್ನಾ.!
ಅಂದು 'ಜೋಕೆ ನಾನು ಬಳ್ಳಿಯ ಮಿಂಚು...' ಎಂದು ವಿಜಯಲಲಿತಾ ಹೆಜ್ಜೆ ಹಾಕಿದ್ದರು. ಇಂದು ಅದೇ ಹಾಡಿಗೆ ಹಾಲು ಗಲ್ಲದ ಸುಂದರಿ ತಮನ್ನಾ ಬಳ್ಳಿಯಂತೆ ಬಳುಕಲಿದ್ದಾರೆ.

ರೀಮಿಕ್ಸ್ ವರ್ಷನ್
'ಕೆ.ಜಿ.ಎಫ್' ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡಿಗೆ ರೀಮಿಕ್ಸ್ ಮಾಡುವ ಪ್ಲಾನ್ ಚಿತ್ರತಂಡದ್ದು. ಇದೇ ಹಾಡಿಗೆ ಡ್ಯಾನ್ಸ್ ಮಾಡಲು ಕಾಜಲ್ ಅಗರ್ವಾಲ್, ರಾಯ್ ಲಕ್ಷ್ಮಿ, ನೋರಾ ಫತೇಹಿ ಜೊತೆಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿತ್ತು. ಆದ್ರೀಗ, ತಮನ್ನಾ ಫೈನಲ್ ಆಗಿದ್ದಾರೆ.

ಯಶ್ ಜೊತೆ ತಮನ್ನಾ
ನಟಿ ತಮನ್ನಾ ಕನ್ನಡ ಹಾಡಿಗೆ ಕುಣಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಹಾಡೊಂದರಲ್ಲೂ ತಮನ್ನಾ ಸಖತ್ತಾಗಿ ಸ್ಪೆಪ್ ಹಾಕಿದ್ದರು. ಈಗ ಯಶ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.