ಲಡಾಖ್‌ನಲ್ಲಿ ಕೆಟ್ಟು ನಿಂತಿದ್ದ ಕನ್ನಡಿಗನ ಬೈಕ್ ಸರಿಪಡಿಸಿ ಸಹಾಯ ಮಾಡಿದ ತಮಿಳು ನಟ ಅಜಿತ್

ನಟ ಅಜಿತ್ ನಟನೆ ಜತೆಗೆ ರೇಸಿಂಗ್ ಹಾಗೂ ಟ್ರಾವೆಲಿಂಗ್‌ನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಆಟೋಮೊಬೈಲ್ ಫೀಲ್ಟ್‌ನಲ್ಲಿ ದೊಡ್ಡ ಮಟ್ಟದ ಆಸಕ್ತಿ ಹೊಂದಿರುವ ಅಜಿತ್ ಬಳಿ ಕಾರ್ ಕಲೆಕ್ಷನ್ ಹಾಗೂ ಬೈಕ್ ಕಲೆಕ್ಷನ್ ಜೋರಾಗಿದೆ. ಇನ್ನು ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಬೈಕ್ ಹತ್ತಿ ಸ್ನೇಹಿತರ ಜತೆ ಸವಾರಿಗೆ ಹೊರಡುವ ನಟ ಅಜಿತ್ ಈ ಬಾರಿ ಲಡಾಖ್ ಕಡೆ ತೆರಳಿದ್ದಾರೆ.

ಇದೇ ಸಂದರ್ಭದಲ್ಲಿ ಲಡಾಖ್ ಬೈಕ್ ರೈಡ್ ಕೈಗೊಂಡಿದ್ದ ಕನ್ನಡಿಗನೋರ್ವನಿಗೆ ನಟ ಅಜಿತ್ ಬೈಕ್ ರಿಪೇರಿ ಮಾಡುವಲ್ಲಿ ಸಹಾಯ ಮಾಡಿದ್ದಾರೆ. ಹೌದು, ಮಂಜು ಕಶ್ಯಪ ಎಂಬ ಕನ್ನಡಿಗ ತಮ್ಮ ಬಿಎಂಡಬ್ಲ್ಯೂ ಬೈಕ್ ಏರಿ ಹಿಮಾಲಯಾಸ್ ಲಡಾಖ್ ರೈಡ್ ಹೊರಟಿದ್ದರು. ಆದರೆ ಲಡಾಖ್ ತಲುಪುವ ಮುನ್ನವೇ ಮಂಜು ಕಶ್ಯಪ್ ಅವರ ಬೈಕ್‌ನ ಟೈರ್ ಗಾಳಿ ಖಾಲಿಯಾಗಿ ಕೈಕೊಟ್ಟಿತ್ತು. ಈ ಸಂದರ್ಭದಲ್ಲಿ ಅಲ್ಲಿಯೇ ಬೈಕ್‌ನಲ್ಲಿ ತೆರಳುತ್ತಿದ್ದವರ ಬಳಿ ಮಂಜು ಸಹಾಯ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಬೈಕ್ ನಿಲ್ಲಿಸಿದ ನಟ ಅಜಿತ್ ತಾವೇ ಬಂದು ಟೈರಿಗೆ ಗಾಳಿ ತುಂಬಿಸಲು ಸಹಾಯ ಮಾಡಿದ್ದಾರೆ ಹಾಗೂ ಆತನ ಜತೆ ಕೆಲ ದೂರದವರೆಗೆ ಬೈಕ್ ರೈಡ್‌ನಲ್ಲಿಯೂ ಕೂಡ ಭಾಗಿಯಾಗಿದ್ದಾರೆ. ಈ ವಿಷಯವನ್ನು ಸ್ವತಃ ಮಂಜು ಕಶ್ಯಪ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಡೆದ ಸಂಪೂರ್ಣ ಘಟನೆಯನ್ನು ಬರೆದುಕೊಂಡಿದ್ದಾರೆ.

Tamil actor Ajith Kumar helped a Kannadiga in repairing bike during Ladakh bike trip

ಮೊದಲಿಗೆ ನಿಮ್ಮ ಹೆಸರೇನು, ಏನ್ ಮಡ್ಕೊಂಡಿದ್ದೀರ ಎಂದು ಮಾತನ್ನು ಆರಂಭಿಸಿದ್ದ ನಟ ಅಜಿತ್ ತಮ್ಮನ್ನು ತಾವೇ ಪರಿಚಯ ಮಾಡಿಕೊಂಡಿದ್ದಾರೆ. ಆ ನಂತರ ಮಂಜು ಕಶ್ಯಪ ಅವರು ನಟ ಅಜಿತ್ ಅವರನ್ನು ನಿಮ್ಮ ಜೊತೆ ಟೀ ಕುಡಿಯುವ ಆಸೆ ಎಂದಿದ್ದಾರೆ. ಈ ಆಸೆಯನ್ನೂ ಸಹ ಎರಡನೇ ಯೋಚನೆ ಮಾಡದೇ ನಟ ಅಜಿತ್ ನೆರವೇರಿಸಿದ್ದಾರೆ. ಇನ್ನು ಈ ಘಟನೆಗಳನ್ನು ಬರೆದುಕೊಂಡಿರುವ ಮಂಜು ಕಶ್ಯಪ್ ಅಜಿತ್ ಅವರು ಎಂತ ಸರಳ ಮನುಷ್ಯ ಎಂದು ಕೊಂಡಾಡಿದ್ದಾರೆ.

ಅಜಿತ್ ಅವರ ಜತೆಗೆ ತಾವು ಹೊಟೇಲ್ ಒಂದರಲ್ಲಿ ಟೀ ಕುಡಿಯುತ್ತಿರುವ ಚಿತ್ರ ಹಾಗೂ ಅಜಿತ್ ಅವರು ಬೈಕ್ ರೈಡ್ ಮಾಡುತ್ತಿರುವ ಚಿತ್ರ ಮತ್ತು ವಿಡಿಯೋಗಳನ್ನು ಮಂಜು ಕಶ್ಯಪ್ ಹಂಚಿಕೊಂಡಿದ್ದಾರೆ.

More from Filmibeat

English summary
Tamil actor Ajith Kumar helped a Kannadiga in repairing a bike during Ladakh bike trip. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X