ಏರ್ ಪೋರ್ಟ್ ನಲ್ಲಿ ಕ್ಲಿಕ್ಕಿಸಿದ್ದ ನಟ ಅಜಿತ್ ಫೋಟೋ ವೈರಲ್
ತಮಿಳು ನಟ ಅಜಿತ್ ಫೋಟೋ ಇದೀಗ ವೈರಲ್ ಆಗುತ್ತಿದೆ. ಚೆನ್ನೈ ಏರ್ ಪೋರ್ಟ್ ನಲ್ಲಿ ಕ್ಲಿಕ್ಕಿಸಿದ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಣೆಗೆ ಕಾರಣವಾಗಿದೆ.
ಈ ಫೋಟೋದಲ್ಲಿ ಅಜಿತ್ ಲುಕ್ ತುಂಬಾನೇ ಬದಲಾಗಿದೆ. ಅದು ಯಾವ ಮಟ್ಟಿಗೆ ಅಂದರೆ, ಇದು ಅಜಿತ್ ಅವರೇನಾ ಎಂದು ಗುರುತಿಸಲು ಕೆಲ ನಿಮಿಷಗಳು ಬೇಕಾಗುತ್ತದೆ. ಗಡ್ಡ ಶೇವ್ ಮಾಡಿಸಿರುವ ಅವರು ತುಂಬ ಯಂಗ್ ಆಗಿ ಕಾಣುತ್ತಿದ್ದಾರೆ
ಅಜಿತ್ ತಮ್ಮ ಬಿಳಿ ಕೂದಲು ಹಾಗೂ ಬಿಳಿ ಗಡ್ಡದ ಮೂಲಕ ಟ್ರೆಂಡ್ ಹುಟ್ಟುಹಾಕಿದ್ದ ನಟ. ಆದರೆ, ಇದೀಗ ಅಜಿತ್ ಲುಕ್ ಬದಲಾಗಿದೆ. ಕಪ್ಪು ಕೂದಲು ಹಾಗೂ ಗಡ್ಡ ಶೇವ್ ಮಾಡಿರುವ ಅಜಿತ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 48 ವರ್ಷ ಅಜಿತ್ ವಯಸ್ಸು ಇನ್ನು 15 ವರ್ಷ ಇಳಿದ ಹಾಗೆ ಕಾಣುತ್ತಿದೆ.

ಚೆನ್ನೈ ಏರ್ ಪೋರ್ಟ್ ನಲ್ಲಿ ಅಕ್ಟೋಬರ್ 5 ರಂದು ಅಜಿತ್ ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಮುಂದಿನ ಸಿನಿಮಾಗಾಗಿ ಅಜಿತ್ ಈ ಲುಕ್ ಪ್ರಯತ್ನ ಮಾಡಿದ್ದಾರೆ.

ಇತ್ತೀಚಿಗೆ ಅಜಿತ್ ಹಿಂದಿಯ 'ಪಿಂಕ್' ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ ಪಾತ್ರವನ್ನು ಅಜಿತ್ ಮಾಡಿದ್ದರು. ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಈ ಸಿನಿಮಾದ ನಾಯಕಿಯಾಗಿದ್ದರು.


Click it and Unblock the Notifications











