ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ತಮಿಳು ಸ್ಟಾರ್ ನಟ.!
ಪರಭಾಷೆ ನಟ-ನಟಿಯರು ಕನ್ನಡಕ್ಕೆ ಬರೋದು ಕಾಮನ್ ಆಗಿದೆ. ಇತ್ತೀಚಿನ ಚಿತ್ರಗಳಲ್ಲಿ ಒಬ್ಬರಲ್ಲ ಒಬ್ಬರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾನೆ ಇದ್ದಾರೆ. ಇದೀಗ, ತಮಿಳಿನ ಯುವ ಸ್ಟಾರ್ ನಟನೊಬ್ಬ ಚಂದನವನಕ್ಕೆ ಕಾಲಿಡುತ್ತಿದ್ದಾರೆ.
'ಬಾಯ್ಸ್', 'ಕಾದಲ್', 'ವೇಯಿಲ್' ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಭರತ್ ಈಗ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಡಾ ರಾಜ್ ಕುಮಾರ್ ಕುಟುಂಬದ ಸಂಬಂಧಿ ಸೂರಜ್ ಅಭಿನಯಿಸಲಿರುವ ಚೊಚ್ಚಲ ಸಿನಿಮಾದಲ್ಲಿ ಭರತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ವಿಶೇಷ ಪಾತ್ರಕ್ಕಾಗಿ ಭರತ್ ಅವರನ್ನ ಕರೆತರುವ ಸಿದ್ಧತೆ ನಡೆದಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದ್ದು, ಅಭಿನಯಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಹೌದು, ಸೂರಜ್ ಅಭಿನಯಿಸಲಿರುವ ಚೊಚ್ಚಲ ಚಿತ್ರಕ್ಕೆ 'ಅಖಿಲ್' ಎಂಬ ಹೆಸರಿಟ್ಟಿದ್ದು, 'ಮಾಸ್ಟರ್ ಪೀಸ್' ಹುಡುಗಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅನೂಪ್ ಆಂಟೋನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಅನೂಪ್ ಅಂಟೋನಿಗೆ ಇದು ಎರಡನೇ ಸಿನಿಮಾ. ಇದಕ್ಕೂ ಮುಂಚೆ ಕಥಾವಿಚಿತ್ರ ಸಿನಿಮಾ ಮಾಡಿದ್ದರು. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ.


Click it and Unblock the Notifications











