ತಮಿಳು ನಟ 'ಸಿಂಹ'ಗೆ ಸ್ಯಾಂಡಲ್ ವುಡ್‌ನಲ್ಲಿ ಹೆಚ್ಚಾಯ್ತು ಬೇಡಿಕೆ

ಎಸ್‌ಆರ್‌ಟಿ ಎಂಟರ್‌ಟೈನ್‌ಮೆಂಟ್ ಮತ್ತು ಮಧುರಾ ಫಿಲಂ ಫ್ಯಾಕ್ಟರಿ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರವನ್ನು ತಮಿಳು ನಟ ಧನುಶ್, ತೆಲುಗು ರಾಣಾ ದಗ್ಗುಬಾಟಿ ಹಾಗೂ ಕನ್ನಡ ನಟ ರಕ್ಷಿತ್ ಶೆಟ್ಟಿ ಘೋಷಣೆ ಮಾಡಲಿದ್ದಾರೆ ಹೇಳಿದ್ವಿ.

ಹೇಳಿದಂತೆ ತ್ರಿಮೂರ್ತಿಗಳು ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಮೂರು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ತಮಿಳು ನಟ ಬಾಬಿ ಸಿಂಹ ನಾಯಕ. ಈ ಚಿತ್ರಕ್ಕೆ ಕನ್ನಡದಲ್ಲಿ ವಸಂತ ಕೋಕಿಲಾ ಎಂದು ಹೆಸರಿಡಲಾಗಿದೆ. ಮುಂದೆ ಓದಿ...

'ವಸಂತ ಕೋಕಿಲಾ' ಫಸ್ಟ್ ಲುಕ್

'ವಸಂತ ಕೋಕಿಲಾ' ಫಸ್ಟ್ ಲುಕ್

ತಮಿಳು ನಟ ಸಿಂಹ ನಟಿಸುತ್ತಿರುವ ಬಹುಭಾಷೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನವೆಂಬರ್ 6 ರಂದು ಬಾಬಿ ಸಿಂಹ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬರ್ತಡೇ ವಿಶೇಷವಾಗಿ ಈ ಸಿನಿಮಾ ಅನೌನ್ಸ್ ಆಗಿದೆ. ಕನ್ನಡ ಹಾಗೂ ತೆಲುಗು ವರ್ಷನ್ ಚಿತ್ರಕ್ಕೆ ವಸಂತ ಕೋಕಿಲಾ ಎಂದು ಹೆಸರಿಡಲಾಗಿದೆ. ತಮಿಳಿನಲ್ಲಿ ವಸಂತ ಮುಲ್ಲೈ ಎಂದು ಟೈಟಲ್ ಇಡಲಾಗಿದೆ.

ರಕ್ಷಿತ್ ಶೆಟ್ಟಿ ಜೊತೆ ಚಾರ್ಲಿಯಲ್ಲಿ ನಟನೆ

ರಕ್ಷಿತ್ ಶೆಟ್ಟಿ ಜೊತೆ ಚಾರ್ಲಿಯಲ್ಲಿ ನಟನೆ

ವಸಂತ ಕೋಕಿಲಾ ಸಿನಿಮಾ ಮಾತ್ರವಲ್ಲ, ರಕ್ಷಿತ್ ಶೆಟ್ಟಿ ಜೊತೆ ಚಾರ್ಲಿ ಚಿತ್ರದಲ್ಲೂ ಸಿಂಹ ನಟಿಸುತ್ತಿದ್ದಾರೆ. 'ಚಾರ್ಲ- 777' ಚಿತ್ರದಲ್ಲಿ ಬಾಬಿ ಸಿಂಹ ಕಾಣಿಸಿಕೊಳ್ಳುತ್ತಿದ್ದು, ಕನ್ನಡದಲ್ಲಿ ಇದು ಮೊದಲ ಚಿತ್ರ ಆಗಲಿದೆ. ಈ ಕುರಿತು ರಕ್ಷಿತ್ ಮತ್ತು ಸಿಂಹ ಇಬ್ಬರು ಪ್ರಕಟಣೆ ನೀಡಿದ್ದಾರೆ.

ಪ್ರೇಮ್ ಚಿತ್ರದಲ್ಲೂ ಸಿಂಹ

ಪ್ರೇಮ್ ಚಿತ್ರದಲ್ಲೂ ಸಿಂಹ

ನಿರ್ದೇಶಕ ಜೋಗಿ ಪ್ರೇಮ್ ನಟಿಸುತ್ತಿರುವ 'ಐ ಯಾಮ್ ಕಲ್ಕಿ' ಸಿನಿಮಾದಲ್ಲಿ ತಮಿಳು ಸ್ಟಾರ್ ನಟರೊಬ್ಬರು ನಟಿಸಲಿದ್ದಾರೆ ಎನ್ನಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಆ ನಟ ಬಾಬಿ ಸಿಂಹ ಎಂದು ಹೇಳಲಾಗಿದೆ.

Recommended Video

ನಿಮಗೆಲ್ಲರಿಗೂ ಬಿಗ್ ಸುದ್ದಿ ಕಾದಿದೆ ಅಂದ್ರು ರಕ್ಷಿತ್ ಶೆಟ್ಟಿ | Rakshit Shetty | Rana | Dhanush
ಕನ್ನಡದಲ್ಲಿ 'ಸಿಂಹ'ಗೆ ಬೇಡಿಕೆ!

ಕನ್ನಡದಲ್ಲಿ 'ಸಿಂಹ'ಗೆ ಬೇಡಿಕೆ!

ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಬಾಬಿ ಸಿಂಹ ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಮಾಡಿಲ್ಲ. ಇದೀಗ, ರಕ್ಷಿತ್ ಜೊತೆ ಚಾರ್ಲಿ-777, ಜೋಗಿ ಪ್ರೇಮ್ ಜೊತೆ ಐ ಯಾಮ್ ಕಲ್ಕಿ ಹಾಗೂ ಅವರದ್ದೇ ತಮಿಳು ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ.

More from Filmibeat

English summary
Tamil actor Bobby Simha's new film being made in Kannada as well titled 'Vasantha Kokila'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X