ತಮಿಳಿನ ಖ್ಯಾತ ನಟ ಕ್ರೇಜಿ ಮೋಹನ್ ವಿಧಿವಶ
ತಮಿಳು ಚಿತ್ರರಂಗದ ಖ್ಯಾತ ನಟ ಕ್ರೇಜಿ ಮೋಹನ್ (67) ಅವರು ಜೂನ್ 10 ರಂದು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಟಕಕಾರ, ಸಿನಿಮಾ ಕಲಾವಿದ, ಬರಹಗಾರನಾಗಿದ್ದ ಮೋಹನ್ ಅವರಿಗೆ ಸೋಮವಾರ ಬೆಳಿಗ್ಗೆ ಹೃದಯಘಾತ ಆಗಿದೆ.
ಕೂಡಲೇ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 2 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
1956ರಲ್ಲಿ ಜನಿಸಿದ ಮೋಹನ್ ಮೆಕಾನಿಕಲ್ ಇಂಜಿನಿಯರ್ ಆಗಿದ್ದರು. ಬರವಣಿಗೆ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ ಮೋಹನ್ ಅವರು ಆರಂಭದಲ್ಲಿ ಸಹೋದರನ ನಾಟಕಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ನಂತರ ಕೆ ಬಾಲಚಂದಿರ್ ನಿರ್ದೇಶನದ 'ಪೋಯ್ಕಲ್ ಕುದರೈ' ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ವೆನ್ ಬಾ ಎಂಬ ಒಂದು ಸಾಲಿನ ಚುಟುಕುಗಳನ್ನ ಕೂಡ ಬರೆಯುತ್ತಿದ್ದರು. ಇದುವರೆಗೂ ಸುಮಾರು 4 ಸಾವಿರಕ್ಕೂ ಅಧಿಕ ವೆನ್ ಬಾಗಳನ್ನ ರಚಿಸಿದ್ದಾರೆ. ಜೊತೆಗೆ ಮೋಹನ್ ಅವರೂ ಚಿತ್ರಕಲೆ ಕಲಾವಿದರು ಆಗಿದ್ದರು.
ಅಪೂರ್ವ ರಾಗಂಗಳ್, ಮೈಕೇಲ್ ಮದನ ಕಾಮರಾಜನ್, ಸತಿ ಲೀಲಾವತಿ, ತೇನಾಲಿ, ಪಂಚತಂತ್ರ, ಕಾದಲ ಕಾದಲ, ಭಾಮನೆ ಸತ್ಯ ಭಾಮನೆ, ವಸೂಲ್ ರಾಜಾ ಎಂಬಿಬಿಎಸ್ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.
'ಕ್ರೇಜಿ ಥೀವ್ಸ್ ಇನ್ ಪಾಲವಾಕ್ಕಂ' ಎಂಬ ನಾಟಕದಲ್ಲಿ ನಟಿಸಿದ್ದರು. ಅಲ್ಲಿಂದ ಮೋಹನ್ ಹಿಂದೆ ಕ್ರೇಜಿ ಎಂದು ಸೇರಿಕೊಂಡು ಕ್ರೇಜಿ ಮೋಹನ್ ಎಂದು ಖ್ಯಾತಿ ಗಳಿಸಿದರು.


Click it and Unblock the Notifications











