»   » ಸುದೀಪ್ ಗೆ ತಮಿಳು ನಟ ಧನುಶ್ ಥ್ಯಾಂಕ್ಸ್ ಹೇಳಿದ್ದು ಯಾಕೆ?

ಸುದೀಪ್ ಗೆ ತಮಿಳು ನಟ ಧನುಶ್ ಥ್ಯಾಂಕ್ಸ್ ಹೇಳಿದ್ದು ಯಾಕೆ?

Posted By:
Subscribe to Filmibeat Kannada

ಕನ್ನಡ ನಟ ಸುದೀಪ್ ಮತ್ತು ತಮಿಳು ನಟ ಧನುಶ್ ಇಬ್ಬರು ಸೂಪರ್ ಸ್ಟಾರ್ ನಟರು. ಇವರಿಬ್ಬರು ಒಳ್ಳೆಯ ಸ್ನೇಹಿತರು ಕೂಡ ಹೌದು. ಒಬ್ಬರ ನಟನೆಯನ್ನ ಮತ್ತೊಬ್ಬರು ಅಭಿನಂದಿಸುತ್ತಾರೆ. ಇಬ್ಬರು ಒಟ್ಟಿಗೆ ಅವಕಾಶ ಸಿಕ್ಕಿದ್ರೆ, ಸಿನಿಮಾ ಮಾಡಲು ಕೂಡ ಆಸಕ್ತಿ ಹೊಂದಿದ್ದಾರೆ. ಇದು ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ನಟ ಧನುಶ್ ಹಾಗೂ ಸುದೀಪ್ ಹೇಳಿಕೊಂಡಿದ್ದಾರೆ.

ಜುಲೈ 28 ರಂದು ಕಾಲಿವುಡ್ ಸ್ಟಾರ್ ನಟ ಧನುಶ್ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ, ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಮೂಲಕ ತಮ್ಮ ಗೆಳೆಯ ಧನುಶ್ ಗೆ ಜನುಮದಿನದ ಶುಭಾಶಯ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಧನುಶ್ ಕಿಚ್ಚನಿಗೆ 'ಥ್ಯಾಂಕ್ಸ್' ಹೇಳಿದ್ದಾರೆ.

'ಆಲ್ ಇಂಡಿಯಾ ಕಟೌಟ್' ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್

Tamil Actor Dhanush Says Thanks to Kiccha sudeep

ಸುದೀಪ್ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಇಂಡಸ್ಟ್ರಿಯಲ್ಲೂ ಸ್ನೇಹಿತರನ್ನ ಹೊಂದಿದ್ದಾರೆ. ಅದೇ ರೀತಿ ಆ ನಟರಿಗೂ ನಮ್ಮ ಸುದೀಪ್ ಅಂದ್ರೆ ಕೂಡ ಇಷ್ಟ. ಹೀಗೆ, ಪರಭಾಷಾ ನಟರು ಮತ್ತು ನಮ್ಮ ನಟರ ಮಧ್ಯೆ ಉತ್ತಮ ಬಾಂಧವ್ಯವನ್ನ ಹೊಂದುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

English summary
Tamil Actor Dhanush Says Thanks to Kannada Actor Kiccha sudeep, Becuse Sudeep Wish to Dhanush's Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada