For Quick Alerts
  ALLOW NOTIFICATIONS  
  For Daily Alerts

  '83' ವಿಶ್ವಕಪ್ ಚಿತ್ರಕ್ಕೆ ಸೌತ್ ಸ್ಟಾರ್ ನಟನ ಎಂಟ್ರಿ

  |
  ತಯಾರಾಗ್ತಿದೆ ಮತ್ತೊಂದು ಐತಿಹಾಸಿಕ ಸಿನಿಮಾ..! | Oneindia Kannada

  1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್‌ ಗೆದ್ದಿತ್ತು. ಅದೇ ಕಥೆಯನ್ನಿಟ್ಟು ಬಾಲಿವುಡ್ ನಲ್ಲಿ '83' ಎಂಬ ಸಿನಿಮಾ ತಯಾರಾಗ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್, ಕಪಿಲ್ ದೇವ್ ಪಾತ್ರವನ್ನ ನಿಭಾಯಿಸುತ್ತಿದ್ದು, ಚಿತ್ರದ ನಾಯಕರಾಗಿದ್ದಾರೆ.

  ಇದೀಗ, ರಣ್ವೀರ್ ಸಿಂಗ್ ಜೊತೆ ಮತ್ತೊಬ್ಬ ಸ್ಟಾರ್ ನಟ ಸೇರಿಕೊಂಡಿದ್ದಾರೆ. ಕಪಿಲ್ ದೇವ್ ಕ್ಯಾಪ್ಟನ್ ಆಗಿದ್ದ ತಂಡದಲ್ಲಿ ಅಗ್ರೆಸ್ಸೀವ್ ಬ್ಯಾಟ್ಸ್ ಮನ್ ಆಗಿದ್ದ ಕ್ರಿಷ್ಣಮಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವಾ ನಟಿಸುತ್ತಿದ್ದಾರೆ.

  ಪತಿ ರಣ್ವೀರ್ ಸಿಂಗ್ ಜೊತೆ ನಟಿಸಲ್ಲ ಎಂದ ದೀಪಿಕಾಪತಿ ರಣ್ವೀರ್ ಸಿಂಗ್ ಜೊತೆ ನಟಿಸಲ್ಲ ಎಂದ ದೀಪಿಕಾ

  ಅಂದ್ಹಾಗೆ, ಕೆ ಶ್ರೀಕಾಂತ್ ಮೂಲತಃ ತಮಿಳುನಾಡಿನವರು. ಭಾರತ ತಂಡ ಅಂದು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರರಲ್ಲಿ ಶ್ರೀಕಾಂತ್ ಕೂಡ ಒಬ್ಬರು.

  ಈ ಹಿಂದೆ ಕೆ ಶ್ರೀಕಾಂತ್ ಪಾತ್ರಕ್ಕಾಗಿ ವಿಜಯ್ ದೇವರಕೊಂಡ ಅವರನ್ನ ಕರೆತರುವ ಪ್ರಯತ್ನ ಮಾಡಲಾಗಿತ್ತು. ಆದ್ರೀಗ, 83 ಚಿತ್ರಕ್ಕೆ ಜೀವಾ ಸೇರಿದ್ದಾರೆ.

  ಕಪಿಲ್ ದೇವ್, ಶ್ರೀಕಾಂತ್ ಪಾತ್ರಗಳು ಫಿಕ್ಸ್ ಆಗಿವೆ. ಅಂದಿನ ತಂಡದಲ್ಲಿದ್ದ ಸುನೀಲ್ ಗವಾಸ್ಕರ್, ಎಂ ಅಮರ್ ನಾಥ್, ರೋಜರ್ ಬಿನ್ನಿ, ಸೈಯದ್ ಕೀರ್ಮಾನಿ, ರವಿ ಶಾಸ್ತ್ರಿ, ದಿಲೀಪ್ ವೆಂಗವಾಸ್ಕರ್ ಅಂತಹ ಆಟಗಾರರಿದ್ದರು. ಇವರುಗಳ ಪಾತ್ರದಲ್ಲಿ ಯಾರು ಅಭಿನಯಿಸಬಹುದು ಎಂಬ ಕುತೂಹಲ ಕಾಡ್ತಿದೆ.

  ಇನ್ನುಳಿದಂತೆ ಕಬೀರ್ ಖಾನ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದು, ಕಪಿಲ್ ಪತ್ನಿ ಪಾತ್ರಕ್ಕೆ ನಟಿಯ ಆಯ್ಕೆಯಾಗಿಲ್ಲ.

  English summary
  Tamil actor Jiiva to play Krishnamachari Srikkanth in Ranveer Singh’s ’83, reveals film's budget is over Rs 100 cr.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X