For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಸ್ಮಾರಕಕ್ಕೆ ಭೇಟಿ ನೀಡಿದ ತಮಿಳು ನಟ ಪ್ರಭು

  |

  ತಮಿಳು ಸ್ಟಾರ್ ನಟ ಪ್ರಭು ಬೆಂಗಳೂರಿಗೆ ಬಂದ ವೇಳೆ ಡಾ ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ಅಣ್ಣಾವ್ರನ್ನ ಸ್ಮರಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ನೆನಪಿಸಿಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಸಿನಿಮಾವೊಂದರ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿದ್ದ ತಮಿಳು ನಟ, ನಿರ್ಮಾಪಕ ಪ್ರಭು ಅಣ್ಣಾವ್ರ ಸ್ಮಾರಕದ ಬಳಿ ಹೋಗಿದ್ದರು. ಬೆಂಗಳೂರಿಗೆ ಬಂದಾಗ ಎಷ್ಟೇ ಕೆಲಸವಿದ್ದರೂ ಅಣ್ಣಾವ್ರ ಸಮಾಧಿ ಬಳಿ ಬಂದು ಹೋಗ್ತಾರಂತೆ.

  ಅವಮಾನ ಮಾಯ ಮಾಡಿದ ಅಣ್ಣಾವ್ರ ಕಥೆ ಹೇಳಿದ ಟಿ.ಎನ್ ಸೀತಾರಾಂ

  ರಾಜ್ ಸಮಾಧಿ ಬಳಿ ಹೋದ ಸಂಧರ್ಭದಲ್ಲಿ ಕೆಲವು ರಾಜ್ ಕುಮಾರ್ ಅಭಿಮಾನಿಗಳು ತಮಿಳು ನಟನಿಗೆ ಸಾಥ್ ನೀಡಿದ್ದಾರೆ. ಈ ವೇಳೆ ರಾಜ್ ಜೊತೆಗಿನ ಒಡನಾಟದ ಬಗ್ಗೆ ಅಭಿಮಾನಿಗಳಲ್ಲಿ ಕೆಲವು ವಿಷ್ಯಗಳನ್ನ ಹಂಚಿಕೊಂಡಿದ್ದಾರೆ.

  ರಾಜ್ ಕಿಡ್ನ್ಯಾಪ್ ದಿನ ಏನಾಯ್ತು ಎಂದು ಮಕ್ಕಳಿಗೂ ಹೇಳಿಲ್ವಂತೆ ಪಾರ್ವತಮ್ಮ.! ಯಾಕೆ?

  ಅಂದ್ಹಾಗೆ, ಪ್ರಭು ಅವರು ತಮಿಳು ಲೆಜಂಡ್ರಿ ನಟ ಶಿವಾಜಿ ಗಣೇಶನ್ ಅವರ ಪುತ್ರ. ರಾಜ್ ಕುಮಾರ್ ಅವರೊಂದಿಗೆ ಪ್ರಭು ಅವರ ಕುಟುಂಬಕ್ಕೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ, ಬೆಂಗಳೂರಿಗೆ ಬಂದ ವೇಳೆ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡುವುದು ಕೂಡ ಸಾಮಾನ್ಯ.

  English summary
  Tamil actor prabhu has visit to dr rajkumar memorial at kanteerava studio in bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X